Site icon Vistara News

MS Dhoni: ಧೋನಿಯನ್ನು ‘ತಲಾ’ ಎಂದು ಕರೆಯುವುದು ಏಕೆ? ಇಲ್ಲಿದೆ ಉತ್ತರ

MS Dhoni

ಮುಂಬಯಿ: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ತಲಾ(Thala Dhoni) ಎಂದು ಕರೆಯುತ್ತಾರೆ. ಧೋನಿಯನ್ನು ಈ ಹೆಸರಿನಿಂದ ಏಕೆ ಕರೆಯುತ್ತಾರೆ ಎನ್ನುವ ಉತ್ತರವನ್ನು ಮಾಜಿ ಆಟಗಾರ ಸುನೀಲ್​ ಗವಾಸ್ಕರ್(Sunil Gavaskar)​ ನೀಡಿದ್ದಾರೆ

ಸ್ಟಾರ್​ ಸ್ಪೋರ್ಟ್ಸ್​ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಗವಾಸ್ಕರ್​, “ಐಪಿಎಲ್​ ಎನ್ನುವುದು ವಿವಿಧ ದೇಶಗಳ ಮತ್ತು ವಿವಿಧ ನಗರಗಳ ಆಟಗಾರು ಸೇರಿ ಆಡುವಂತಹ ಟೂರ್ನಿಯಾಗಿದೆ. ಟ್ರೋಫಿಯನ್ನು ಎತ್ತುವ ಏಕೈಕ ಗುರಿಯೊಂದಿಗೆ ಈ ಎಲ್ಲ ಆಟಗಾರರನ್ನು ಒಟ್ಟುಗೂಡಿಸಬೇಕು. ಇದಕ್ಕಾಗಿ ಕೇವಲ ಆರು ವಾರಗಳಲ್ಲಿ ಪಂದ್ಯಾವಳಿಯನ್ನು ಗೆಲ್ಲಬೇಕು. ಇಷ್ಟು ಕಡಿಮೆ ಸಮಯದಲ್ಲಿ ಆಟಗಾರರ ಮನಸ್ಥಿತಿಯನ್ನು ತಿಳಿದು ತಂಡವನ್ನು ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಈ ಚಾಣಕ್ಯತನ ಧೋನಿ ಅವರಲ್ಲಿದೆ. ಇದೇ ಕಾರಣಕ್ಕೆ ಅವರನ್ನು ತಲಾ ಎಂದು ಕರೆಯಲಾಗುತ್ತದೆ ಎದು ಗವಾಸ್ಕರ್​ ಹೇಳಿದ್ದಾರೆ.

ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಕಳೆದ ಆವೃತ್ತಿಯ ಐಪಿಎಲ್​ ವೇಳೆ ಮೈದಾನಕ್ಕೆ ಓಡಿ ಬಂದು ಧೋನಿ ಬಳಿ ಅವರ ಶರ್ಟ್‌ ನಲ್ಲಿ ಆಟೋಗ್ರಾಫ್ ತೆಗೆದುಕೊಂಡಿದ್ದರು. ತನ್ನ ಶರ್ಟ್ ಮೇಲೆ ಧೋನಿಯ ಹಸ್ತಾಕ್ಷರವನ್ನು ಪಡೆದ ನಂತರ, ಗವಾಸ್ಕರ್ ಅವರು ಕಾಮೆಂಟರಿಯಲ್ಲಿ ದಯವಿಟ್ಟು ಉಳಿದ ಪಂದ್ಯಗಳಿಗೆ ನನಗೆ ಹೊಸ ಗುಲಾಬಿ ಶರ್ಟ್ ನೀಡಿ ಎಂದು ಹೇಳಿದ್ದರು. ಗವಾಸ್ಕರ್​ ಕೂಡ ಧೋನಿಯ ಅಪಟ್ಟ ಅಭಿಮಾನಿಯಾಗಿದ್ದಾರೆ.

ಇದನ್ನೂ ಓದಿ IPL 2024: ನೆಚ್ಚಿನ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವನ್ನಾಡಲು ಸಜ್ಜಾದ ಧೋನಿ

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

Exit mobile version