ಲಾರ್ಡ್ಸ್: ಇಂಗ್ಲೆಂಡ್(England vs Australia) ವಿರುದ್ಧ ಸಾಗುತ್ತಿರುವ ಆ್ಯಶಸ್ ಸರಣಿಯ(Ashes 2023) ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾ ತಂಡದ ಸ್ಪಿನ್ ಬೌಲರ್ ನಥಾನ್ ಲಿಯೋನ್(Nathan Lyon) ಅವರು ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸತತವಾಗಿ ನೂರು ಟೆಸ್ಟ್ ಪಂದ್ಯ ಆಡಿದ ವಿಶ್ವದ 6ನೇ ಆಟಗಾರ ಎನಿಸಿಕೊಂಡಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
2011ರಲ್ಲಿ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದ 35 ವರ್ಷದ ಲಿಯೋನ್ ಇದುವರೆಗೆ ಆಸೀಸ್ ಪರ 121 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30.99ರ ಸರಾಸರಿಯಲ್ಲಿ 495* ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಶೇನ್ ವಾರ್ನ್ (708 ವಿಕೆಟ್) ಮತ್ತು ಗ್ಲೆನ್ ಮೆಕ್‌ಗ್ರಾತ್ (563 ವಿಕೆಟ್) ಬಳಿಕ ಅತ್ಯಧಿಕ ವಿಕೆಟ್ ಪಡೆದ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
“ವಿಶ್ರಾಂತಿಯಿಲ್ಲದೆ ಸತತ ನೂರು ಟೆಸ್ಟ್ ಪಂದ್ಯಗಳನ್ನು ಆಡಿದ ಲಿಯೋನ್ಗೆ ನಮ್ಮ ತಂಡದ ಎಲ್ಲ ಸದಸ್ಯರ ಪರವಾಗಿ ಅಭಿನಂದನೆಗಳು. ಅವರು ಇನ್ನೂ ಕೂಟ ಆಸೀಸ್ ಕ್ರಿಕೆಟ್ ತಂಡದ ಪರ ಆಡುವಂತಾಗಲಿ” ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಸತತ ನೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿ
ಅಲೆಸ್ಟಾರ್ ಕುಕ್- 159 ಪಂದ್ಯ
ಅಲನ್ ಬಾರ್ಡರ್- 153 ಪಂದ್ಯ
ಮಾರ್ಕ್ ವಾ-107 ಪಂದ್ಯ
ಸುನಿಲ್ ಗವಾಸ್ಕರ್-106 ಪಂದ್ಯ
ಬ್ರೆಂಡನ್ ಮೆಕಲಮ್-101 ಪಂದ್ಯ
ನಾಥನ್ ಲಿಯೋನ್-100 ಪಂದ್ಯ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ(icc test championship) ನಥಾನ್ ಲಿಯೋನ್ ಅತ್ಯಧಿಕ ವಿಕೆಟ್ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್(stuart broad) ದ್ವಿತೀಯ ಸ್ಥಾನ. ಭಾರತ ಸ್ಪಿನ್ನರ್ ಆರ್ ಅಶ್ವಿನ್(Ravichandran Ashwin) ಮೂರನೇ ಸ್ಥಾನದಲ್ಲಿದ್ದಾರೆ.