Site icon Vistara News

Pakistan Cricket Board: ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ ಜಾರಿಗೆ ತಂದ ಪಾಕ್​ ಕ್ರಿಕೆಟ್​ ಮಂಡಳಿ

Pakistan Cricket Board

Pakistan Cricket Board: PCB to enforce two-NOCs policy strictly after flop show at T20 World Cup 2024

ಟಿ20 ವಿಶ್ವಕಪ್​ ಟೂರ್ನಿಯಿಯ ಲೀಗ್​ ಹಂತದಿಂದಲೇ ಪಾಕಿಸ್ತಾನ ತಂಡ(Pakistan Cricket Team) ಹೊರಬಿದ್ದ ಬೆನ್ನಲ್ಲೇ ಪಾಕ್​ ಕ್ರಿಕೆಟ್​ ಮಂಡಳಿ(Pakistan Cricket Board) ಮಹತ್ವದ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಎಲ್ಲ ಪಾಕ್​ ಆಟಗಾರರು ವರ್ಷವೊಂದರಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಹೊರತುಪಡಿಸಿ, ವಿದೇಶಗಳಲ್ಲಿ ನಡೆಯುವ ಎರಡು ಟಿ20 ಲೀಗ್‌ಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ.

ಎನ್‌ಒಸಿ ನಿಯಮದ ಪ್ರಕಾರ, ವಿದೇಶಗಳಲ್ಲಿ ನಡೆಯುವ ಲೀಗ್‌ಗಳಿಗೆ ಸಂಬಂಧಿಸಿದಂತೆ ಪಾಕ್​ ಕ್ರಿಕೆಟ್​ ಮಂಡಳಿಯು ಆಟಗಾರರಿಗೆ ಎರಡು ಎನ್‌ಒಸಿಗಳನ್ನು ನೀಡುತ್ತದೆ. ಈ ನಿಯಮಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಪಿಸಿಬಿ ಸೂಚಿಸಿದೆ. ಅಚ್ಚರಿ ಎಂದರೆ ವಿಶ್ವಕಪ್‌ನಲ್ಲಿ ಪಾಲ್ಗೊಂಡ ಅಜಂ ಖಾನ್‌ ಮತ್ತು ಸೈಮ್ ಆಯೂಬ್‌ ಅವರಿಗೆ ಮಂಡಳಿ ಈವರೆಗೆ ಎನ್‌ಒಸಿ ನೀಡಿಲ್ಲ. ಆದರೂ ಇವರು ವಿಶ್ವಕಪ್​ ಆಡಿದ್ದಾರೆ.

ಇದನ್ನೂ ಓದಿ Viral Video: ಪಾಕ್​ ಕ್ರಿಕೆಟಿಗ ವಾಸಿಂ ಅಕ್ರಮ್ ಜತೆ​ ಬ್ರೇಕ್​ ಡ್ಯಾನ್ಸ್​ ಮಾಡಿದ ಸುನಿಲ್ ಗಾವಸ್ಕರ್

ಎರಡು ಎನ್‌ಒಸಿ ನಿಯಮ


ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಉಳಿದೆಲ್ಲ ಆಟಗಾರರಿಗೆ ಎರಡು ಎನ್‌ಒಸಿ ನಿಯಮ ಅನ್ವಯವಾಗುತ್ತದೆ. ಯಾವುದೇ ಆಟಗಾರ ಎನ್‌ಒಸಿಗಾಗಿ ಸಲ್ಲಿಸುವ ಮನವಿಯನ್ನು ತಡೆಹಿಡಿಯುವ ಹಕ್ಕು ಕೂಡ ಪಿಸಿಬಿಗೆ ಇದೆ ಎಂದು ಮಂಡಳಿಯ ಅಧಿಕೃತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್‌ ವಿರುದ್ಧ ಸೋತು, ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.

ಟೂರ್ನಿಯಿಂದ ಹೊರಬಿದ್ದಿರುವ ಪಾಕ್​ ತಂಡದ ಪ್ರದರ್ಶನದ ಬಗ್ಗೆ ವಾಸಿಂ ಅಕ್ರಮ್ ಸೇರಿ ಅನೇಕ ಮಾಜಿ ಆಟಗಾರರು ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್​ ಅಭ್ಯಾಸ ಮಾಡುವುದನ್ನು ಬಿಟ್ಟು ಶೋಕಿಗಾಗಿ ಸೇನೆಯಲ್ಲಿ ಫಿಟ್​ನೆಸ್​ ತರಬೇತಿ ಪಡೆದು ಸಮಯ ವ್ಯರ್ಥ ಮಾಡಿದ್ದು ಈ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡವನ್ನು(Pakistan Team Troll) ಸ್ವತಃ ತವರಿನ ಅಭಿಮಾನಿಗಳು ಸೇರಿ ಭಾರತೀಯ(India fans troll Pakistan cricket team) ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಹಲವು ಮಿಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Exit mobile version