ಕರಾಚಿ: ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮತ್ತು ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ(Jason Gillespie) ಅವರು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್(Pakistan Cricket Team) ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಗ್ಯಾರಿ ಕರ್ಸ್ಟನ್ ವೈಟ್-ಬಾಲ್ ವ್ಯವಹಾರಗಳನ್ನು ಮಾತ್ರ ನಿರ್ವಹಿಸಲಿದ್ದಾರೆ. ಜೇಸನ್ ಗಿಲ್ಲೆಸ್ಪಿ ಟೆಸ್ಟ್ ತಂಡಕ್ಕೆ ಕೋಚ್ ಆಗಿದ್ದಾರೆ. ಅಜರ್ ಮಹಮೂದ್ ಮೂರು ಮಾದರಿಯ ಕ್ರಿಕೆಟ್ಗೆ ಸಹಾಯಕ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಇದೇ ಜೂನ್ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗ್ಯಾರಿ ಕರ್ಸ್ಟನ್ಗೆ ಮೊದಲ ಸವಾಲಾಗಿದೆ. ಗ್ಯಾರಿ ಕರ್ಸ್ಟನ್ ಅವರು 2008ರಿಂದ 2011ರವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು. ಇವರ ಮಾರ್ಗದರ್ಶನದಲ್ಲೇ ಭಾರತ 2011ರ ಏಕದಿನ ವಿಶ್ವಕಪ್ ಗೆದ್ದಿತ್ತು. 56 ವರ್ಷದ ಕರ್ಸ್ಟನ್ ಪ್ರಸಕ್ತ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿದ್ದಾರೆ. ಐಪಿಎಲ್ನಲ್ಲಿಯೂ ಇವರ ನೇತೃತ್ವದಲ್ಲಿ ಗುಜರಾತ್ ಚೊಚ್ಚಲ ಪ್ರಯತ್ನದಲ್ಲೇ ಕಪ್ ಗೆದ್ದು ಸಂಭ್ರಮಿಸಿತ್ತು. ಕಳೆದ ಬಾರಿ ತಂಡ ಫೈನಲ್ ಕೂಡ ಪ್ರವೇಶಿಸಿತ್ತು. ಇದೀಗ ಪಾಕ್ ತಂಡ ಕೂಡ ಇದೇ ವರ್ಷ ನಡೆಯುವ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ.
ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಹೈ-ವೋಲ್ಟೇಜ್ ಪಂದ್ಯ ಜೂನ್ 9 ರಂದು ನಡೆಯಲಿದೆ.
— Pakistan Cricket (@TheRealPCB) April 28, 2024
ಲಾಹೋರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಂಡದ ನೂತನ ಕೋಚ್ಗಳ ಹೆಸರನ್ನು ಘೋಷಣೆ ಮಾಡಿದರು. “ರಾಷ್ಟ್ರೀಯ ತಂಡಕ್ಕೆ ಉನ್ನತ ಶ್ರೇಣಿಯ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ತನ್ನ ಬದ್ಧತೆಯಲ್ಲಿ ಪಿಸಿಬಿ ಅಚಲವಾಗಿದೆ. ನೂತನ ಕೋಚ್ಗಳ ಅವಧಿಯಲ್ಲಿ ಆಟಗಾರರ ಸಂಪೂರ್ಣ ಸಾಮರ್ಥ್ಯವನ್ನು ಹೊರತೆಗೆಯಲು ಮತ್ತು ಹಲವು ಪ್ರಯೋಗ ನಡೆಸಲು ಪಿಸಿಬಿ ಮುಕ್ತವಾದ ಬೆಂಗಲ ನೀಡಲಿದೆ” ಎಂದು ನಖ್ವಿ ಹೇಳಿದರು.
ಇದನ್ನೂ ಓದಿ Pakistan Cricket : ಪಾಕಿಸ್ತಾನ ಟಿ20 ತಂಡದಲ್ಲಿ ನಿಷೇಧಿತ ಆಟಗಾರನಿಗೂ ಸ್ಥಾನ!
ಏಕದಿನ ಮತ್ತು ಟಿ20 ಕ್ರಿಕೆಟ್ಗೆ ಮರು ನೇಮಕಗೊಂಡ ನಾಯಕ ಬಾಬರ್ ಅಜಂ ನೇತೃತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸೇನೆಯೊಂದಿಗೆ ಇತ್ತೀಚೆಗೆ ತರಬೇತಿ ನಡೆಸಿತ್ತು. ಆರ್ಮಿ ತರಬೇತಿಯ ಅನುಭವ ಹಂಚಿಕೊಂಡ ಆಟಗಾರರು ಇದೇ ರೀತಿಯ ಅಭ್ಯಾಸ ನಡೆಸಿದರೆ ನಮ್ಮ ತಂಡ ಕೂಡ ಫುಲ್ ಫಿಟ್ ಆಗಲಿದೆ ಎಂದರು. ಕಳೆದ ವರ್ಷ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ವೇಗಿ ನಸೀಮ್ ಶಾ ಅವರು ಹಿಂದೆಂದು ಕೂಡ ಈ ರೀತಿಯ ಫಿಟ್ನೆಸ್ ತರಬೇತಿ ನಡೆಸಿಲ್ಲ ಎಂದಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೈಯದ್ ಮೊಹ್ಸಿನ್ ರಜಾ ನಖ್ವಿ(Syed Mohsin Naqvi) ಅವರ ನೇತೃತ್ವದಲ್ಲಿ ಈ ಪ್ರಯೋಗ ನಡೆಸಲಾಗಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ತವರಿನಲ್ಲೇ ನಡೆದ ಟಿ20 ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಂಡಿತ್ತು.