Site icon Vistara News

Pink Promise​; 78 ಮನೆಗಳಿಗೆ ಸೌರ ಬೆಳಕು ನೀಡಿದ ರಾಜಸ್ಥಾನ್​ ರಾಯಲ್ಸ್​

Pink Promise

ಜೈಪುರ: ಪಿಂಕ್ ಪ್ರಾಮಿಸಿ(Pink Promise) ಮಿಷನ್ ಅಡಿಯಲ್ಲಿ ಮಹಿಳೆಯರ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತು ಆರ್​ಸಿಬಿ(RCB) ವಿರುದ್ಧ ಪಿಂಕ್​ ಜೆರ್ಸಿಯಲ್ಲಿ(rajasthan royals pink jersey) ಕಣಕ್ಕಿಳಿದ್ದ ರಾಜಸ್ಥಾನ ರಾಯಲ್ಸ್‌(rajasthan royals) ಫ್ರಾಂಚೈಸಿ ಇದೀಗ ಒಟ್ಟು 78 ಕುಟುಂಬಗಳ ಪಾಲಿಗೆ ಬೆಳಕಾಗಿದೆ. ಪ್ರತೀ ಸಿಕ್ಸರ್​ಗೆ ರಾಜಸ್ಥಾನದಲ್ಲಿರುವ 6 ಮನೆಗಳಿಗೆ ಉಚಿತ ಸೌರವಿದ್ಯುತ್‌ ಸಂಪರ್ಕವನ್ನು ನೀಡುವುದಾಗಿ ಫ್ರಾಂಚೈಸಿ ಪಂದ್ಯಕ್ಕೂ ಮುನ್ನ ಘೋಷಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್​ ಸಿಡಿದಿತ್ತು. ಈ ಲೆಕ್ಕಾಚಾರದಲ್ಲಿ ಒಟ್ಟು 78 ಮನೆಗಳಿಗೆ ಸೌರವಿದ್ಯುತ್‌ ಸಂಪರ್ಕವನ್ನು ಒದಗಿಸಲಿದೆ.

ರಾಜಸ್ಥಾನದ ಮಹಿಳೆಯರನ್ನು ಸಶಕ್ತಗೊಳಿಸಲು ಪಂದ್ಯದ ದಿನದ ಸಂಪೂರ್ಣ ಆದಾಯವನ್ನು ಫ್ರಾಂಚೈಸಿ ಮೀಸಲಾಗಿಟ್ಟಿತ್ತು. ಈ ಪಂದ್ಯದಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ 100 ರೂ.ಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಯಿತು. 

ಇದನ್ನೂ ಓದಿ IPL 2024: ಈ ಬಾರಿಯ ಐಪಿಎಲ್​ನಲ್ಲಿ ಭಾರೀ ಭದ್ರತಾ ವೈಫಲ್ಯ; ಕೊಹ್ಲಿ ಪ್ರಾಣಕ್ಕೆ ಮತ್ತೆ ಕುತ್ತು

ಪಂದ್ಯ ಗೆದ್ದ ರಾಜಸ್ಥಾನ್​


ಜಾಸ್​ ಬಟ್ಲರ್​ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ರಾಜಸ್ಥಾನ್​ ತಂಡ ಈ ಪಂದ್ಯವನ್ನು 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ನೆಗೆಯಿತು. ವಿರಾಟ್​ ಕೊಹ್ಲಿಯ ದಾಖಲೆಯ 8ನೇ ಐಪಿಎಲ್ ಶತಕದ ಹೊರತಾಗಿಯೂ ಬೌಲರ್​​ಗಳ ಕೆಟ್ಟ ಪ್ರದರ್ಶನದಿಂದ ಸೊರಗಿದ ರಾಯ್ ಚಾಲೆಂಜರ್ಸ್​ ಬೆಂಗಳೂರು ತಂಡ (Royal Challengers Bangalore) ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2024) ಮತ್ತೊಂದು ಸೋಲಿಗೆ ತುತ್ತಾಯಿತು.

ಸವಾಯ್​ ಮಾನ್​ ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟ ಮಾಡಿಕೊಂಡರು 183 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ 19.1 ಓವರ್​ಗಳಲ್ಲಿ 4 ವಿಕೆಟ್ ಗೆ 189 ರನ್ ಬಾರಿಸಿ ಸುಲಭ ವಿಜಯ ತನ್ನದಾಗಿಸಿಕೊಂಡಿತು. 58 ಎಸೆತಗಳಲ್ಲಿ ಶತಕ ಬಾರಿಸಿದ ಜೋಸ್ ಬಟ್ಲರ್​ ಗೆಲುವಿನ ರೂವಾರಿ ಎನಿಸಿಕೊಂಡರು. 

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​4408 (+1.120)
ಕೆಕೆಆರ್​​3306 (+2.518)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಲಕ್ನೋ ಸೂಪರ್​ ಜೈಂಟ್ಸ್​3214(+0.483)
ಹೈದರಾಬಾದ್​​4224 (+0.409)
ಪಂಜಾಬ್​4224 (-0.220)
ಗುಜರಾತ್​​​4224 (-0.580)
ಆರ್​ಸಿಬಿ5142 (-0.843)
ಡೆಲ್ಲಿ ಕ್ಯಾಪಿಟಲ್ಸ್​4132 (-1.347)
ಮುಂಬೈ ಇಂಡಿಯನ್ಸ್​3030 (-1.423)
Exit mobile version