Site icon Vistara News

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವಾರು ಕ್ರಿಕೆಟ್ ಪಂದ್ಯಾವಳಿಗಳಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್ ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ (Queen’s Premier League) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ.

ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಆಂಕರ್ಸ್, ಮಾಡೆಲ್ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್ ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೋಗೊ ಬಿಡುಗಡೆ ಮಾಡಿದ ಪುಷ್ಪಕುಮಾರಿ, ʻʻಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿʼʼ ಎಂದರು.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

ನಟ ಹಾಗೂ QPL ಮೆಂಟರ್ ಆಗಿರುವ ಪ್ರಮೋದ್ ಶೆಟ್ಟಿ ಮಾತನಾಡಿ, ʻʻಜೂನ್ ತಿಂಗಳಲ್ಲಿ QPL ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜತೆಗೆ ಆಂಕರ್ಸ್, ಮಾಡೆಲ್‌ಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿ ನಾವು ಮಾಡುತ್ತಿಲ್ಲ.‌ಇದರಿಂದ ಬಂದ ದುಡ್ಡನ್ನು ನನ್ನ ತಂಡ ರಂಗಸೌರಭಕ್ಕೆ‌ ಮೀಸಲು ಇಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ QPL ನಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ಹೆಚ್ಚು ನಟಿಮಣಿರು ಹೆಚ್ಚಾಗಿ ಕೈ ಜೋಡಿಸಬೇಕುʼʼ ಎಂದರು.

ನಟಿ ಭವ್ಯಾ ಗೌಡ ಮಾತನಾಡಿ, ʻʻಈ ಕಾನ್ಸೆಪ್ಟ್ ನನ್ನ ಮೈಂಡ್ ನಲ್ಲಿ ತುಂಬಾ ತಿಂಗಳಿನಿಂದ ಇತ್ತು. ಆರ್ ಸಿಬಿ ಹುಡುಗಿರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆ ಉದ್ದೇಶ ಇಟ್ಟಿಕೊಂಡು ಮಾಡುತ್ತಿದ್ದೇವೆ. ಹೆಣ್ಮಕ್ಕಳಿಗೆ ಬ್ಯಾಟು ಬಾಲ್ ಹಿಡಿದು ಫೀಲ್ಡ್ ಗೆ ಇಳಿಯುತ್ತಿದ್ದೇವೆ. ಗಂಡು ಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿʼʼ ಎಂದರು.

ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕ್ವೀನ್ಸ್ ಗಳ ಮನರಂಜನೆಗಾಗಿ ಹಾಗೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಪಂದ್ಯಾವಳಿ ನಡೆಸಲಾಗುತ್ತಿದೆ. ರಂಗಪ್ರತಿಭೆಗಳನ್ನು ಸಜ್ಜುಗೊಳಿಸುವ ರಂಗಸೌರಭಕ್ಕೆ QPL ಲಾಭವನ್ನು ನೀಡಲಾಗುತ್ತದೆ.

ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ QPL ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ auction, ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುತ್ತದೆ.

Exit mobile version