ಮುಂಬಯಿ: ರಣಜಿ ಟ್ರೋಫಿ ಫೈನಲ್(Ranji Trophy Final) ಪಂದ್ಯದಲ್ಲಿ ಮುಂಬೈ(Mumbai) ತಂಡ ವಿದರ್ಭ(Vidarbha) ವಿರುದ್ಧ ಭಾರೀ ಮುನ್ನಡೆ ಗಳಿಸಿ ಬಿಗಿ ಹಿಡಿತ ಸಾಧಿಸಿದೆ. ಸದ್ಯದ ಸ್ಥಿತಿ ನೋಡುವಾಗ ಗೆಲುವು ದಾಖಲಿಸುವ ಲಕ್ಷಣದಲ್ಲಿದೆ. 2ನೇ ದಿನದಾಟದ ಮುಕ್ತಾಯಕ್ಕೆ 2 ವಿಕೆಟ್ಗೆ 141 ರನ್ ಗಳಿಸಿ, 260 ರನ್ ಮುನ್ನಡೆ ಕಾಯ್ದುಕೊಂಡಿದೆ. ನಾಯಕ ರಹಾನೆ(58*) ಮತ್ತು ಮುಶೀರ್ ಖಾನ್(51*) ಕ್ರೀಸ್ನಲ್ಲಿದ್ದಾರೆ.
ಇಲ್ಲಿನ ವಾಂಖೆಡೆ(Wankhede Stadium) ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, 224 ರನ್ ಗಳಿಸಿ ಮೊದಲ ದಿನವೇ ಆಲೌಟ್ ಆಯಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿ ಇನಿಂಗ್ಸ್ ಲೀಡ್ ಪಡೆಯುವ ಯೋಜನೆಯಲ್ಲಿ ಬ್ಯಾಟಿಂಗ್ ಆರಂಭಿಸಿದ ವಿದರ್ಭಕ್ಕೆ ಮುಂಬೈ ಬೌಲರ್ಗಳು ಆಘಾತವಿಕ್ಕಿದರು. ಧವಳ್ ಕುಲಕರ್ಣಿ ಹಾಗೂ ಸ್ಪಿನ್ನರ್‌ಗಳಾದ ಶಮ್ಸ್ ಮುಲಾನಿ, ತನುಷ್ ಕೊಟ್ಯಾನ್ ಸೇರಿಕೊಂಡು ವಿದರ್ಭ ಬ್ಯಾಟರ್ಗಳ ಎಲ್ಲ ಯೋಜನೆಯನ್ನು ವಿಫಲಗೊಳಿಸಿದರು. ಈ ಬೌಲರ್ಗಳು ತಲಾ ಮೂರು ವಿಕೆಟ್ ಕಿತ್ತು ಮುಂಚಿದರು.
Fifty For Mumbai Skipper #AjinkyaRahane In #RanjiTrophyFinal 👏👏
— Niche Sports (@Niche_Sports) March 11, 2024
🎥: BCCI #CricketTwitter
pic.twitter.com/9md7E5KgOY
3 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದ್ದಲ್ಲಿಂದ ದ್ವಿತೀಯ ದಿನದಾಟ ಆರಂಭಿಸಿದ ವಿದರ್ಭ ಕೇವಲ 105 ರನ್ಗೆ ಆಲೌಟ್ ಆಯಿತು. ದ್ವಿತೀಯ ದಿನದಾಟದಲ್ಲಿ ಬಾರಿಸಿದ್ದು 74 ರನ್ ಮಾತ್ರ. ಯಶ್ ರಾಥೋಡ್ 27 ರನ್ ಗಳಿಸಿದ್ದೇ ವಿದರ್ಭ ಪರ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿತು. ಇಬ್ಬರು ಸೊನ್ನೆ ಸುತ್ತಿದರೆ, ನಾಲ್ಕು ಮಂದಿ ಒಂದಂಕಿ ಗಳಿಸಲಷ್ಟೇ ಶಕ್ತರಾದರು.
ಇದನ್ನೂ ಓದಿ IPL 2025: ಮುಂದಿನ ಐಪಿಎಲ್ಗೂ ಮುನ್ನ ಮೆಗಾ ಹರಾಜು; ತಂಡವೊಂದಕ್ಕೆ ಎಷ್ಟು ಆಟಗಾರರ ರಿಟೇನ್ ಸಾಧ್ಯ?
ಲೀಡ್ ಪಡೆದ ಮುಂಬೈ
ಮೊದಲ ಇನಿಂಗ್ಸ್ನ 119 ರನ್ಗಳ ಲೀಡ್ನೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಮುಂಬೈ ವಿಕೆಟ್ ಕಳೆದುಕೊಂಡು ರನ್ ಬಾರಿಸಿದೆ. ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಮತ್ತೆ ವಿಫಲರಾದರು. ಕೇವಲ ಒಂದು ಬೌಂಡರಿ ಬಾರಿಸಿ 11 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ಇವರ ಜತೆಗಾರ ಭೂಪೇನ್ ಲಾಲ್ವಾನಿ 18 ರನ್ ಗಳಿಸಿದರು.
ಮೊದಲೆರಡು ವಿಕೆಟ್ ಪತನದ ಬಳಿಕ ಆಡಲಿಳಿದ ನಾಯಕ ಅಜಿಂಕ್ಯ ರಹಾನೆ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಮತ್ತೊಂದು ತುದಿಯಲ್ಲಿ ಮುಶೀರ್ ಖಾನ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಅವರು ಕೂಡ ಅರ್ಧಶತಕ ಬಾರಿಸಿದ್ದಾರೆ. ಉಭಯ ಆಟಗಾರರು ಕೂಡ ಅಜೇಯರಾಗಿ ಉಳಿದಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಮುಂಬೈಗೆ ಶಾರ್ದೂಲ್ ಠಾಕೂರ್ ಆಪತ್ಬಾಂಧವರಾಗಿ ತಂಡದ ನೆರವಿಗೆ ಬಂದಿದ್ದರು. ಅಗ್ರ ಕ್ರಮಾಂಕದ ಬ್ಯಾಟರ್ಗಳು ಬೇಗನೇ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 75 ರನ್ ಬಾರಿಸಿ ತಂಡವನ್ನು ಮೇಲೆತ್ತಿದ್ದರು.