ರಾಜ್ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ(India vs England 3rd Test) ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರವೀಂದ್ರ ಜಡೇಜಾ( Ravindra Jadeja) ಅವರು ತಮ್ಮ ಈ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸಿದ್ದಾರೆ. ಈ ಮೂಲಕ ತಮ್ಮ ಮತ್ತು ಪತ್ನಿಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದ ತಂದೆಗೆ ಟಕ್ಕರ್ ಕೊಟ್ಟಿದ್ದಾರೆ.
ಇತ್ತೀಚೆಗೆ ಜಡೇಜಾ ಅವರ ತಂದೆ ಅನಿರುದ್ಧ ಸಿನ್ಹಾ ಅವರು ಗುಜರಾತ್‌ನ ದಿನಪತ್ರಿಕೆ ದಿವ್ಯ ಭಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಮಗ ಮತ್ತು ಸೊಸೆ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಮಗ ನಮ್ಮನ್ನು ಬೀದಿಗೆ ತಳ್ಳಿದ್ದಾನೆ. ಇದಕ್ಕೆ ಅವನ ಪತ್ನಿಯೇ ಕಾರಣ. ಆಕೆಯನ್ನು ಮದುವೆಯಾಗದಿದ್ದರೆ ನಮ್ಮ ಕುಟುಂಬ ಚೆನ್ನಾಗಿ ಇರುತ್ತಿತ್ತು ಎಂದು ಅನಿರುದ್ಧ ಸಿನ್ಹಾ ಆರೋಪಿಸಿದ್ದರು.
ಇದೀಗ ಜಡೇಜಾ ಮೂರನೇ ಟೆಸ್ಟ್ನಲ್ಲಿ ಶತಕ ಮತ್ತು ಒಟ್ಟು 7 ವಿಕೆಟ್ ಕಿತ್ತು ಮಿಂಚಿದ್ದರು. ದ್ವಿತೀಯ ಇನಿಂಗ್ಸ್ನಲ್ಲಿ 5 ವಿಕೆಟ್ ಕೆಡವಿ ಆಂಗ್ಲರ ಸೋಲಿಗೆ ಕಾರಣರಾಗಿದ್ದರು. ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಳಿದಿತ್ತು. ಈ ಪ್ರಶಸ್ತಿ ಪಡೆದು ಮಾತನಾಡಿದ ಜಡೇಜಾ, “ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸಿರುವುದು ವಿಶೇಷ ಅನುಭ ನೀಡಿದೆ. ಮಾನಸಿಕ ಬೆಂಬಲವನ್ನು ನೀಡುವ ಮೂಲಕ ನನಗೆ ಪ್ರೇರೇಪಿದ ನನ್ನ ಪತ್ನಿ ರಿವಾಬಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಹೇಳಿದರು.
ಇದನ್ನೂ ಓದಿ IND vs ENG: ನಾಲ್ಕನೇ ಪಂದ್ಯಕ್ಕೆ ರಾಹುಲ್ ಇನ್, ಬುಮ್ರಾ ಔಟ್!
Ravindra Jadeja said, "I would like to dedicate this POTM award to my wife. She's working really hard behind me and supported me throughout". pic.twitter.com/OuVmLVRBVT
— Mufaddal Vohra (@mufaddal_vohra) February 19, 2024
ಪತ್ನಿ ವಿರುದ್ಧ ತಂದೆ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಜಡೇಜಾ, ತಂದೆಯ ಪೂರ್ವಯೋಜಿತ ಸಂದರ್ಶನವನ್ನು ನಂಬಬೇಡಿ, ನನ್ನ ಪತ್ನಿ ಘನತೆಗೆ ಕಳಂಕ ಹಚ್ಚಲೆಂದೇ ಅವರು ಈ ಆರೋಪ ಮಾಡಿದ್ದಾರೆ’ ಎಂದು ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು.
‘ಸೊಸೆ ರಿವಾಬಾ ಮತ್ತು ಮಗನ ಜತೆ ನನಗೆ ಯಾವುದೇ ಸಂಬಂಧವಿಲ್ಲ. ಅವರು ನಮ್ಮನ್ನು ಕರೆಯುವುದಿಲ್ಲ, ನಾವು ಸಹ ಅವರನ್ನು ಕರೆಯುವುದಿಲ್ಲ. ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ. 5 ವರ್ಷಗಳಿಂದ ಮೊಮ್ಮಗಳ ಮುಖವನ್ನೇ ನೋಡಿಲ್ಲ” ಎಂದು ಅನಿರುದ್ಧ್ ಸಿಂಗ್ ಅಳಲು ತೋಡಿಕೊಂಡಿದ್ದರು.
Where are those people who were targeting Ravindra and Rivaba Jadeja?
— Adv Abhishek Gaharwar (@AbhishekGaharwr) February 13, 2024
Now even his father has accepted that this is not a family matter but a party matter.#RavindraJadeja #RivabaJadeja pic.twitter.com/vRamJnrTMj
“ಜಡೇಜಾನನ್ನು ಕ್ರಿಕೆಟಿಗನನ್ನಾಗಿ ಮಾಡಲು ನಾವು ತುಂಬಾ ಶ್ರಮಿಸಿದ್ದೇವೆ. ಹಣ ಸಂಪಾದಿಸಲು ನಾನು 20 ಲೀಟರ್ ಹಾಲಿನ ಕ್ಯಾನ್‌ಗಳನ್ನು ನನ್ನ ಭುಜದ ಮೇಲೆ ಹೊತ್ತುಕೊಂಡೆ, ವಾಚ್‌ಮ್ಯಾನ್ ಆಗಿಯೂ ಕೆಲಸ ಮಾಡಿದ್ದೇನೆ. ಅವನ ಸಹೋದರಿ ಅವನನ್ನು ತಾಯಿಯಂತೆ ನೋಡಿಕೊಂಡಳು. ಆದರೆ, ಅವನು ತನ್ನ ಸಹೋದರಿಯೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಂಡಿಲ್ಲ. ಪ್ರತಿ ರಕ್ಷಾ ಬಂಧನಕ್ಕೂ ಆಕೆ ಕಣ್ಣೀರು ಸುರಿಸುತ್ತಾಳೆ” ಎಂದು ಸಿನ್ಹಾ ಹೇಳಿದ್ದರು.