Site icon Vistara News

RCB Match: ಆರ್‌ಸಿಬಿ ಗೆಲ್ಬೇಕು `ಮರ್ಯಾದೆ ಪ್ರಶ್ನೆ’: ಕೊಹ್ಲಿ ತಂಡಕ್ಕೆ ಚಿಯರ್ಸ್ ಎಂದ ಸ್ಯಾಂಡಲ್‌ವುಡ್‌ ಸೆಲೆಬ್ರಿಟೀಸ್!

RCB match Sandalwood celebrities say cheers for Kohli team

ಬೆಂಗಳೂರು: `ಆರ್‌ಸಿಬಿ‘ ಅಭಿಮಾನಿಗಳ ‘ಈ ಸಲ ಕಪ್ ನಮ್ದೇ’ (RCB Match) ಎನ್ನುವ ಘೋಷಣೆಗೆ ಪರಿಪೂರ್ಣ ಅರ್ಥ ಸಿಕ್ಕಂಗಾಗಿದೆ. ಆರ್‌ಸಿಬಿ ವನಿತೆಯರ ತಂಡ WPL ಟ್ರೋಫಿ ಎತ್ತಿ ಹಿಡಿದು, ಬೆಂಗಳೂರಿಗರ ಬಹು ವರ್ಷಗಳ ಕನಸನ್ನು ನನಸು ಮಾಡಿದ್ದಾರೆ. WPL ಮುಗಿಯುತ್ತಿದ್ದಂತೆ ಈಗ ಐಪಿಎಲ್ ಜ್ವರ ಏರುತ್ತಿದೆ. ʻಹೆಣ್ಮಕ್ಳು ಸ್ಟ್ರಾಂಗ್ ಗುರುʼ ಎಂದು ನಮ್ಮ ಆರ್‌ಸಿಬಿ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಈಗ ಕಿಂಗ್ ಕೊಹ್ಲಿ ಬಳಗ ಕಪ್ ಹೊಡೆಯುತ್ತಿಕ್ಕೆ ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಚಿಯರ್ಸ್ ಹೇಳಿದ್ದಾರೆ.

ಆರ್‌ಸಿಬಿ ತಂಡ ಪ್ರೋತ್ಸಾಹ ಫ್ಲಸ್ ಉತ್ಸಾಹ (RCB Match) ಹೆಚ್ಚಿಸುವ ಹಾಡೊಂದು ಬಿಡುಗಡೆಯಾಗಿದೆ. ಸಕ್ಕತ್ ಸ್ಟುಡಿಯೊ ಸ್ಪೆಷಲ್ ಕೊಡುಗೆಯಾಗಿರುವ ʻಆರ್‌ಸಿಬಿ ಕಪ್ ಗೆಲ್ಬೇಕು ಮರ್ಯಾದೆ ಪ್ರಶ್ನೆʼ ಎಂಬ ಹಾಡಿಗೆ ಕೀರ್ತಿ ನಾರಾಯಣ್ ಪದ ಪೋಣಿಸಿದ್ದು, ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಯುವ ತಾರೆಗಳಾದ ಶೈನ್ ಶೆಟ್ಟಿ, ಸಾನ್ಯಾ ಅಯ್ಯರ್, ಕಿಶನ್ ಬೆಳಗಲಿ, ದಿವ್ಯಾ ಉರುಡುಗ ಮತ್ತು ರಘು ಗೌಡ ಮತ್ತು ಅನೇಕರು ಕಲ್ಯಾಣ್ ಟ್ಯೂನ್‌ಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: IPL Match Preview : ಮೊದಲ ಹಣಾಹಣಿ ಗೆದ್ದು ಟ್ರೋಫಿಯೆಡೆಗೆ ದಾಪುಗಾಲು ಇಡುವುದೇ ಆರ್​ಸಿಬಿ?

ಆರ್‌ಸಿಬಿ ಪುರುಷ ತಂಡಕ್ಕೆ ಹೊಸ ಹುರುಪು ತುಂಬಲಿರುವ ಈ ಸಿಂಗಿಂಗ್ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸುತ್ತಿದೆ. ಈ ಹಾಡಿಗೆ ಹೆಜ್ಜೆ ಹಾಕಿರುವ ಶೈನ್ ಶೆಟ್ಟಿ ಮಾತನಾಡಿ, “ಕ್ರಿಕೆಟ್ ಕೇವಲ ಒಂದು ಆಟವಲ್ಲ; ಇದು ಲಕ್ಷಾಂತರ ಅಭಿಮಾನಿಗಳನ್ನು ಒಗ್ಗೂಡಿಸುವ ಭಾವನೆಯಾಗಿದೆ. ನಮ್ಮ ಮಹಿಳಾ ತಂಡದ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾದ ನಂತರ, ಪುರುಷರ ತಂಡಕ್ಕೆ ನಮ್ಮ ಹೃತ್ಪೂರ್ವಕ ಬೆಂಬಲವನ್ನು ನೀಡುವ ಸಮಯ ಬಂದಿದೆ. ಈ ಹಾಡಿನ ಮೂಲಕ, ನಾವು ಅವರ ಸಾಮರ್ಥ್ಯಗಳ ಮೇಲಿನ ನಮ್ಮ ನಂಬಿಕೆಯನ್ನು ತಿಳಿಸಲು ಬಯಸುತ್ತೇವೆ ಮತ್ತು ಮೈದಾನದಲ್ಲಿ ನಮ್ಮನ್ನು ಹೆಮ್ಮೆಪಡುವಂತೆ ಮಾಡಲು ಅವರನ್ನು ಒತ್ತಾಯಿಸುತ್ತೇವೆ” ಎಂದಿದ್ದಾರೆ.

ಸಾನ್ಯಾ ಅಯ್ಯರ್ ಮಾತನಾಡಿ, “ಎಲ್ಲಾ ವರ್ಗದ ಜನರನ್ನು ಪ್ರೇರೇಪಿಸುವ ಮತ್ತು ಒಗ್ಗೂಡಿಸುವ ಶಕ್ತಿ ಕ್ರೀಡೆಗೆ ಇದೆ. ಕಲಾವಿದರಾಗಿ, ನಮ್ಮ ತಂಡಗಳಿಗೆ ಸಕಾರಾತ್ಮಕತೆಯನ್ನು ಹರಡಲು ಮತ್ತು ಹುರಿದುಂಬಿಸಲು ನಮ್ಮ ವೇದಿಕೆಗಳನ್ನು ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಬೆಂಗಳೂರು ಪುರುಷರ ಕ್ರಿಕೆಟ್ ತಂಡವು ಗೆಲ್ಲುವುದು ಎಂಬ ನಿರೀಕ್ಷೆಯಿದೆ ನಮಗೆ ವಿಶ್ವಾಸವಿದೆ ” ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಸ್ಟಾರ್ ರಘು ಗೌಡ ಮಾತನಾಡಿ “ಈ ಹಾಡು ಸ್ಯಾಂಡಲ್ ವುಡ್ ಮತ್ತು ಕ್ರಿಕೆಟ್ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಮತ್ತು ಇದು ಬೆಂಗಳೂರು ತಂಡದ ಹಿಂದೆ ಇನ್ನೂ ಹೆಚ್ಚಿನ ಉತ್ಸಾಹದಿಂದ ನಿಲ್ಲಲು ಅಭಿಮಾನಿಗಳನ್ನು ಪ್ರೇರೇಪಿಸುತ್ತದೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.

ಇದನ್ನೂ ಓದಿ: RCB vs CSK: ಆರ್​ಸಿಬಿ-ಚೆನ್ನೈ ತಂಡದ ಐಪಿಎಲ್​ ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

ನೃತ್ಯಕ್ಕೆ ಹೆಸರುವಾಸಿಯಾದ ಕಿಶನ್ ಬೆಳಗಲಿ ಮಾತನಾಡಿ, ನೃತ್ಯ ಸಂಯೋಜಕ ಸುಚಿನ್‌ನ ಹುಕ್ ಸ್ಟೆಪ್ ನನಗೆ ತುಂಬಾ ಇಷ್ಟವಾಯಿತು ಎಂದು ಹೇಳಿದರು.

“ಮರ್ಯಾದೆ ಪಶ್ನೆ ” ಚಿತ್ರವನ್ನು ನಿರ್ಮಿಸಿರುವ ಸಕ್ಕತ್ ಸ್ಟುಡಿಯೋ ಈ ಹಾಡನ್ನು ನಿರ್ಮಿಸಿದ್ದು, ಈ ಹಾಡಿಗೂ ಸಿನಿಮಾಗೂ ಸಂಬಂಧವಿಲ್ಲ. ಆದರೆ ಸಿನಿಮಾ ಶೀರ್ಷಿಕೆ ಇದರಲ್ಲಿ ಬಳಕೆಯಾಗಿದೆ, ಸಿನಿಮಾ ಪ್ರಚಾರಕ್ಕಿಂತ ನಮ್ಮ ಬೆಂಗಳೂರು ತಂಡ ಗೆಲ್ಲಲ್ಲಿ ಎಂಬುದು ʻಮರ್ಯಾದೆ ಪ್ರಶ್ನೆʼ ಚಿತ್ರತಂಡ ಆಶಯ.

Exit mobile version