Site icon Vistara News

RCB vs CSK: ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಚೆನ್ನೈ ತಂಡಗಳ ಐಪಿಎಲ್​ ದಾಖಲೆ ಹೇಗಿದೆ?

RCB vs CSK

ಬೆಂಗಳೂರು: ನಾಳೆ ನಡೆಯುವ ಆರ್​ಸಿಬಿ(RCB vs CSK) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವಣ ಹೈವೋಲ್ಟೇಜ್ ಮಿನಿ ಸಮರಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನ(M. Chinnaswamy Stadium) ಸಜ್ಜಾಗಿ ನಿಂತಿದೆ. ಪಂದ್ಯಕ್ಕೆ ಮಳೆ ಭೀತಿ(rcb vs csk weather report) ಇದ್ದರೂ ಕೂಡ ಅಭಿಮಾನಿಗಳು ಪಂದ್ಯ ನಡೆಯುವಂತೆ ಪ್ರಾರ್ಥಿಸ ತೊಡಗಿದ್ದಾರೆ. ಇತ್ತಂಡಗಳ ಐಪಿಎಲ್(Chinnaswamy Stadium IPL Records)​ ದಾಖಲೆ ಕುರಿಯ ಸಾರಸ್ಯಕರ ಸಂಗತಿ ಇಂತಿದೆ.

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಚೆನ್ನೈ ದಾಖಲೆ


ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ಇದುವರೆಗೆ 10 ಪಂದ್ಯಗಳನ್ನು ಆಡಿವೆ. ಈ ಪೈಕಿ ಚೆನ್ನೈ ಐದರಲ್ಲಿ ಗೆದ್ದರೆ, ಆರ್​ಸಿಬಿ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠ ಎನ್ನಲಡ್ಡಿಯಿಲ್ಲ. ಇಲ್ಲಿ ನಡೆದ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ 6 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆಲುವು ಸಾಧಿಸಿದೆ. ಈ ಆವೃತ್ತಿಯ 6 ಪಂದ್ಯಗಳ ಪೈಕಿ ಸಮಾನಾಗಿ 3 ಬಾರಿ ಚೇಸಿಂಗ್​ ಮತ್ತು ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳು ಜಯಿಸಿದೆ.

ಇತ್ತಂಡಗಳ ಒಟ್ಟು ಐಪಿಎಲ್​ ಮುಖಾಮುಖಿ


ಆರ್​ಸಿಬಿ ಮತ್ತು ಚೆನ್ನೈ ತಂಡ ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 10 ಪಂದ್ಯ ಗೆದ್ದರೆ, ಚೆನ್ನೈ 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಕಳೆದ ಮೂರು ಪಂದ್ಯಗಳ ಮುಖಾಮುಖಿಯಲ್ಲೂ ಚೆನ್ನೈ ತಂಡವೇ ಗೆದ್ದಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿಯೂ ಚೆನ್ನೈ ಗೆಲುವಿನ ಫೇವರಿಟ್​ ಆಗಿದೆ. ಈ ಬಾರಿಯ ಉದ್ಘಾಟನ ಪಂದ್ಯದಲ್ಲಿಯೂ ಚೆನ್ನೈ ಆರ್​ಸಿಬಿಗೆ ಸೋಲುಣಿಸಿತ್ತು.

ಇದನ್ನೂ ಓದಿ IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

ಪಿಚ್​ ರಿಪೋರ್ಟ್​


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಇದುವರೆಗೆ ಇಲ್ಲಿ ನಡೆದ ಬಹುತೇಕ ಪಂದ್ಯಗಳು ಕೂಡ ಚೇಸಿಂಗ್​ ನಡೆಸಿದ ತಂಡವೇ ಹೆಚ್ಚು ಬಾರಿ ಗೆದ್ದಿದೆ. 50ಕ್ಕೂ ಅಧಿಕ ಬಾರಿ ಚೇಸಿಂಗ್​ ನಡೆಸಿದ ತಂಡವೇ ಜಯಶಾಲಿಯಾಗಿದೆ. 40 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ.

ವಿರಾಟ್​ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ 2993 ರನ್​ ಬಾರಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್​ನಲ್ಲಿಯೂ ಕೊಹ್ಲಿ ಉತ್ತಮವಾಗಿ ರನ್​ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಈ ಬಾರಿ ಕೊಹ್ಲಿ 13 ಪಂದ್ಯ ಆಡಿ 661 ರನ್​ ಗಳಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ.

ಹವಾಮಾನ ವರದಿ


ಪಂದ್ಯ ನಡೆಯುವ ಮೇ 18 ಶನಿವಾರದಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ(Rain likely to interrupt RCB Vs CSK match) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶೇ.70ರಷ್ಟು ಮಳೆ ಬೀಳಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಈಗಾಗಲೇ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಅಲ್ಲದೆ ಶುಕ್ರವಾರ ಕೂಡ ಬೆಂಗಳೂರಿನಲ್ಲಿ ಮಳೆಯಾಗಿದೆ.

ಒಂದೊಮ್ಮೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಚೆನ್ನೈ ತಂಡ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಈಗಾಗಲೇ ಚೆನ್ನೈ 14 ಅಂಕಗಳನ್ನು ಹೊಂದಿದ್ದು ಪಂದ್ಯ ರದ್ದಾದ ಕಾರಣ ಸಿಗುವ ಒಂದು ಅಂಕದಿಂದ ಒಟ್ಟು ಅಂಕ 15ಕ್ಕೇ ಏರಿಕೆಯಾಗುತ್ತದೆ. ಇನ್ನುಳಿದ ಯಾವುದೇ ತಂಡಕ್ಕೂ ಈ ಮೊತ್ತವನ್ನು ಮೀರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚೆನ್ನೈಗೆ ಮಳೆ ವರದಾನವಾಗಲಿದೆ. ಆರ್​ಸಿಬಿ 13 ಅಂಕಗಳೊಂದಿಗೆ ಐಪಿಎಲ್​ನಿಂದ ಹೊರಬೀಳಲಿದೆ.

Exit mobile version