ಜೈಪುರ: ಕೂಟದ ಅಜೇಯ ತಂಡವಾದ ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ಇಂದು ನಡೆಯುವ ಪಂದ್ಯಕ್ಕೆ(RCB vs RR) ಕನ್ನಡಿಗರ ನೆಚ್ಚಿನ ತಂಡವಅದ ಆರ್ಸಿಬಿ(Royal Challengers Bengaluru) ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡಿ ಕಣಕ್ಕಿಳಿಯುವ ಯೋಜನೆಯಲ್ಲಿದೆ. ಘೋರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವ ರಜತ್ ಪಾಟಿದಾರ್ಗೆ ಈ ಪಂದ್ಯದಿಂದ ಗೇಟ್ ಪಾಸ್ ಸಿಗುವುದು ಬಹುತೇಕ ಖಚಿತ. ಉಳಿದಂತೆ ಬೌಲಿಂಗ್ನಲ್ಲಿಯೂ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಲಾಗಿದೆ.
ಆರ್ಸಿಬಿ ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದರೂ ಕೂಡ ಇವರು ಕೇವಲ ಬೆಂಚ್ಗೆ ಸೀಮಿತ. ಪ್ರತಿ ಪಂದ್ಯದಲ್ಲಿಯೂ ವಿಫಲರಾಗುತ್ತಿರುವ ಆಟಗಾರರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವ ಮ್ಯಾನೆಜ್ಮೆಂಟ್ ಬಗ್ಗೆ ಈಗಾಗಲೇ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿರುವ ಆರ್ಸಿಬಿ ಇಂದಿನ ರಾಜಸ್ಥಾನ್ ಪಂದ್ಯಕ್ಕೆ ಮಹತ್ವದ ಬದಲಾವಣೆ ಮಾಡಲು ಸಿದ್ಧವಾಗಿದೆ.
Sanga ↘️ cover drive ↙️ Virat#PlayBold #ನಮ್ಮRCB #IPL2024 pic.twitter.com/2GpXwBS1ee
— Royal Challengers Bengaluru (@RCBTweets) April 5, 2024
ಕ್ಯಾಮರೂನ್ ಗ್ರೀನ್ ಕೈಬಿಟ್ಟು ಅವರ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ಅನುಭವಿ ಆಲ್ರೌಂಡರ್ ಲಾಕಿ ಫರ್ಗುಸನ್ ಅವರಿಗೆ ಸ್ಥಾನ ನೀಡುವುದು ಬಹುತೇಕ ಖಚಿತ ಎನ್ನುವಂತಿದೆ. ಇದು ಮಾತ್ರವಲ್ಲದೆ ಸಿಕ್ಕ ಹಲವು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವುತ್ತಿರುವ ರಜತ್ ಪಾಟಿದಾರ್ ಬದಲು ಇಂಪ್ಯಾಕ್ಟ್ ಆಟಗಾರನಾಗಿ ಆಡುತ್ತಿದ್ದ ಮಹಿಪಾಲ್ ಲೋಮ್ರೋರ್ ಈ ಪಂದ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಆಡುವ ಅವಕಾಶ ಪಡೆಯಬಹುದು. ಯಶ್ ದಯಾಳ್ ಬದಲು ಕನ್ನಡಿಗ ವಿಜಯಕುಮಾರ್ ವೈಶಾಕ್ ಕಣಕ್ಕಿಳಿಯಬಹುದು.
ಇದನ್ನೂ ಓದಿ RCB vs RR: ರಾಯಲ್ಸ್ ಬ್ಯಾಟಲ್ನಲ್ಲಿ ಯಾರಿಗೆ ಒಲಿಯಲಿದೆ ವಿಜಯ ಮಾಲೆ?
It's nice to see you again, Yuzi! 🥹❤️#PlayBold #ನಮ್ಮRCB #IPL2024 pic.twitter.com/USxOIWnqBh
— Royal Challengers Bengaluru (@RCBTweets) April 5, 2024
ಪಿಚ್ ರಿಪೋರ್ಟ್
ಸವಾಯಿ ಮಾನ್ ಸಿಂಗ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಸಮಾನವಾಗಿ ನೆರವು ನೀಡುತ್ತದೆ. ಸ್ಪಿನ್ ಬೌಲರ್ಗಳು ಇಲ್ಲಿ ವೇಗಿಗಳಿಂದ ಹೆಚ್ಚು ಹಿಡಿತ ಸಾಧಿಸಬಲ್ಲರು. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 175 ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಕಳೆದ ಸೀಸನ್‌ನಿಂದ ನಾಲ್ಕು ಬಾರಿ ಗೆದ್ದಿದ್ದರೆ, ಚೇಸಿಂಗ್ ನಡೆಸಿದ ತಂಡಗಳು ಎರಡು ಬಾರಿ ಮಾತ್ರ ಗೆದ್ದಿವೆ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆಗೆ ಮೊದಲ ಆದ್ಯತೆ ನೀಡಲಿದೆ.
— Rajasthan Royals (@rajasthanroyals) April 5, 2024
ಮುಖಾಮುಖಿ
ಆರ್ಸಿಬಿ ಮತ್ತು ರಾಜಸ್ಥಾನ್ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಬೆಂಗಳೂರು ತಂಡ 15 ಪಂದ್ಯ ಗೆದ್ದರೆ, ರಾಜಸ್ಥಾನ್ 12 ಪಂದ್ಯ ಗೆದ್ದಿದೆ. ಮೂರು ಪಂದ್ಯಗಳು ಫಲಿತಾಂಶ ಕಂಡಿಲ್ಲ. ಕಳೆದ ಆವೃತ್ತಿಯಲ್ಲಿ ಆಡಿದ 2 ಪಂದ್ಯಗಳಲ್ಲಿಯೂ ರಾಜಸ್ಥಾನ್ ವಿರುದ್ಧ ಆರ್ಸಿಬಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ತಂಡದ ಮೇಲೆ ನಿರೀಕ್ಷೆ ಮಾಡುವುದು ಕೊಂಚ ಕಷ್ಟ. ಏಕೆಂದರೆ ಈ ಬಾರಿ ಆರ್ಸಿಬಿ ತಂಡಕ್ಕೆ ತವರಿನ ಪಂದ್ಯಗಳನ್ನೇ ಗೆಲ್ಲಲು ಸಾಧ್ಯವಾಗಿಲ್ಲ. ತೀರಾ ಕಳಪೆ ಪ್ರದರ್ಶನ ತೋರುತ್ತಿದೆ.
Sun liya na Rajasthan? 💗 pic.twitter.com/JnNRBLcigF
— Rajasthan Royals (@rajasthanroyals) April 5, 2024
ಸಂಭಾವ್ಯ ತಂಡ
ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಲಾಕಿ ಫರ್ಗುಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಮಯಾಂಕ್ ಡಾಗರ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್.
ರಾಜಸ್ಥಾನ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.