ಮುಂಬಯಿ: ಕೆಲ ದಿನಗಳ ಹಿಂದೆ ಯೂಟ್ಯೂಬ್ ಖಾತೆಯಲ್ಲಿ ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ(ananya pandey) ಹಾಗೂ ಸಾರಾ ಅಲಿ ಖಾನ್(sara ali khan) ಅವರ ಹಾಟ್ ವಿಡಿಯೋಗಳನ್ನು ಹುಡುಕಾಡಿದ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್ ರಿಯಾನ್ ಪರಾಗ್(Riyan Parag) ಅವರು ಟಿ20 ವಿಶ್ವಕಪ್ ಟೂರ್ನಿಯನ್ನು ನೋಡಲಾರೆ ಎಂದು ಹೇಳಿದ್ದಾರೆ.
ಸಂದರ್ಶಕರೊಬ್ಬರು ಟಿ20 ವಿಶ್ವಕಪ್ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಿದ ಪರಾಗ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ವಿಶ್ವಕಪ್ ಪಂದ್ಯಗಳನ್ನು ನೋಡ ಬಯಸುವುದಿಲ್ಲ. ನಾನು ಕೇವಲ ಯಾರು ಗೆಲ್ಲುತ್ತಿದ್ದಾರೆ ಎಂದಷ್ಟೇ ನೋಡಬಯಸುತ್ತೇನೆ. ನಾನು ಯಾವಾಗ ವಿಶ್ವಕಪ್ ಆಡುತ್ತೇನೆಯೋ ಆಗ ಈ ಟೂರ್ನಿಯ ಬಗ್ಗೆ ಯೋಚಿಸುತ್ತೇನೆ” ಎಂದು ಹೇಳಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಳ್ಳುವ ಮುನ್ನ ಸಂಭಾವನೀಯರ ಪಟ್ಟಿಯಲ್ಲಿ ರಿಯಾನ್ ಪರಾಗ್ ಹೆಸರೂ ಕೇಳಿ ಬಂದಿತ್ತು, ಅಲ್ಲದೆ ಪರಾಗ್ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರು. ಹೀಗಾಗಿ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಸ್ಥಾನ ಸಿಗಲಿಲ್ಲ. ಇದೇ ಬೇಸರದಲ್ಲಿ ಅವರು ತಾನು ವಿಶ್ವಕಪ್ ನೋಡುವುದಿಲ್ಲ ಎಂದು ಹೇಳಿದಂತಿದೆ.
ಇದನ್ನೂ ಓದಿ T20 World Cup 2024 : ಒಮಾನ್ ವಿರುದ್ಧ ಹೊಸ ದಾಖಲೆ ಬರೆದ ನಮೀಬಿಯಾ ತಂಡದ ರುಬೆನ್ ಟ್ರಂಪೆಲ್ಮನ್
ಕೆಲವು ದಿನಗಳ ಹಿಂದೆ ರಿಯಾನ್ ಪರಾಗ್ ಅವರು ಲೈವ್ ಸ್ಟ್ರೀಮಿಂಗ್ನಲ್ಲಿ ಮಾತನಾಡುತ್ತಿದ್ದ ವೇಳೆ ಅವರ ಯೂಟ್ಯೂಬ್ ಸರ್ಚ್ ಹಿಸ್ಟರಿ ಕೂಡ ಕಾಣಿಸಕೊಂಡಿತ್ತು. ಈ ವೇಳೆ ಅವರು ನಟಿಮಣಿಯರ ಹೆಸರುಗಳೊಂದಿಗೆ ಹಾಟ್ ವಿಡಿಯೊಗಳನ್ನು ಹುಡುಕಾಡಿರುವುದು ಕಂಡು ಬಂದಿತ್ತು. ಅವರ ಸರ್ಚ್ ಹಿಸ್ಟರಿ ಸ್ಕ್ರೀನ್ ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರಿಯಾನ್ ಪರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. 15 ಇನಿಂಗ್ಸ್ ಆಡಿ 4 ಅರ್ಧಶತಕಗಳೊಂದಿಗೆ ಒಟ್ಟು 573 ರನ್ ಕಲೆಹಾಕಿದ್ದರು.
ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.
ಏಕದಿನ ವಿಶ್ವಕಪ್ ಟೂರ್ನಿಯಂತೆ ಈ ಬಾರಿಯೂ ಟಿ20 ವಿಶ್ವಕಪ್ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಉಚಿತವಾಗಿ ನೋಡಬಹುದಾಗಿದೆ. ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ಅವಕಾಶ ಕಲ್ಪಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.