Site icon Vistara News

Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

Sara Tendulkar

Sara Tendulkar: Sara Tendulkar completes Master's, Sachin Tendulkar, wife proud of daughter's achievement

ಲಂಡನ್​: ಭಾರತದ ಕ್ರಿಕೆಟ್​ ತಂಡದ ಮಾಜಿ ಆಟಗಾರ, ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಮಗಳು ಸಾರಾ ತೆಂಡೂಲ್ಕರ್(Sara Tendulkar) ಲಂಡನ್ ಯೂನಿವರ್ಸಿಟಿ(UCL, London) ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ(Sara Tendulkar completed post-graduation). ಮಗಳು ಎಲ್ಲಾ ಕಠಿಣ ಪರಿಶ್ರಮವನ್ನು ಹಾಕಿ ದೊಡ್ಡ ಮೈಲಿಗಲ್ಲನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಚಿನ್ ಭಾವುಕ ಸಂದೇಶದ ಮೂಲಕ ಶ್ಲಾಘಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಮಗಳ ಸಾಧನೆ ಬಗ್ಗೆ ಬರೆದುಕೊಂಡಿರುವ ಸಚಿನ್​, “ಇದೊಂದು ಸುಂದರ ದಿನ. ನಮ್ಮ ಮಗಳು ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಯುಸಿಎಲ್‌ನ ಮೆಡಿಸಿನ್ ವಿಭಾಗದಿಂದ ಡಿಸ್ಟಿಂಕ್ಷನ್‌ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ದಿನ. ಪೋಷಕರಾಗಿ, ನೀನು ವರ್ಷಗಳಿಂದ ಮಾಡಿದ ಎಲ್ಲಾ ಕೆಲಸಗಳನ್ನು ನೋಡಿದ್ದಕ್ಕಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ. ಇಲ್ಲಿಗೆ ಬರುವುದು ಸುಲಭವಲ್ಲ” ಎಂದು ಬರೆದುಕೊಂಡಿದ್ದಾರೆ. ಸಾರಾ ಲಂಡನ್ ಯೂನಿವರ್ಸಿಟಿಯ ಘಟಿಕೋತ್ಸದಲ್ಲಿ ಪದವಿ ಸ್ವೀಕರಿಸಿದ ಫೋಟೊ, ವಿಡಿಯೊ ಮತ್ತು ತಾಯಿಯೊಂದಿಗೆ ಇರುವ ಫೋಟೊವನ್ನು ಸಚಿನ್​ ಹಂಚಿಕೊಂಡಿದ್ದಾರೆ.

ಸಾರಾ ಕೂಡ ತಾನು ಪದವಿ ಪಡೆದ ದಿನದ ತುಣುಕುಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ಸೇರಿ ಸಚಿನ್​ ಅವರ ಆಪ್ತರು ಸಾರಾಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ Sara Tendulkar: ತಮ್ಮ ಹೆಸರಿನ ಪರೋಡಿ ಖಾತೆ ಮುಚ್ಚಲು ಎಕ್ಸ್‌ಗೆ ಸಾರಾ ತೆಂಡುಲ್ಕರ್ ಆಗ್ರಹ!

ಗಿಲ್​ ಜತೆ ಡೇಟಿಂಗ್​?


ಸಾರಾ ತೆಂಡೂಲ್ಕರ್(Sara Tendulkar) ಅವರು ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್​ ಗಿಲ್(Shubman Gill) ಜತೆ​ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವೇಳೆ ಗಿಲ್​ ಪಂದ್ಯ ವೀಕ್ಷಿಸಲೆಂದೇ ಸಾರಾ ಕೂಡ ಸ್ಟೇಡಿಯಂಗೆ ಬರುತ್ತಿದ್ದರು. ಅಲ್ಲದೆ ಗಿಲ್​ ಸಾಧನೆಗೆ ಗ್ಯಾಲರಿಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದ ವಿಡಿಯೊ ಮತ್ತು ಫೋಟೊಗಳು ವೈರಲ್​ ಆಗಿತ್ತು. ಸಾರಾ ಮತ್ತು ಗಿಲ್​ ತಂಗಿ ಜತೆಯಾಗಿ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ ವಿಡಿಯೊ ಕೂಡ ವೈರಲ್(​Viral Video) ಆಗಿತ್ತು. ಆದರೂ, ಈ ಜೋಡಿ ಡೇಟಿಂಗ್​ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ತುಟಿ ಬಿಚ್ಚಿಲ್ಲ!

ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ. ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಸಾರಾ ಅಲಿ ಖಾನ್, ಗಿಲ್ ನನ್ನೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಅವರು ಬೇರೆ ಸಾರಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದರು. ಕ್ರಿಕೆಟ್​ ಅಭಿಮಾನಿಗಳೇ ನೀವು ತಪ್ಪು ಹೇಳುತ್ತಿದ್ದೀರಿ. ಸಾರಾ ಕಾ ಸಾರಾ ದುನಿಯಾ ಗಲಾತ್ ಸಾರಾ ಕೆ ಪೀಚೆ ಪಡಾ ಹೈ (ಇಡೀ ಜಗತ್ತು ತಪ್ಪಾದ ಸಾರಾಳ ಹಿಂದೆ ಬಿದ್ದಿದೆ) ಎಂದು ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಈ ಮೂಲಕ ಗಿಲ್ ಅವರ ಕ್ರಸ್​ ಸಾರಾ ತೆಂಡೂಲ್ಕರ್​ ಎನ್ನುವ ಸುಳಿವು ನೀಡಿದ್ದರು.

Exit mobile version