Site icon Vistara News

Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

shubman gill

ನವದೆಹಲಿ: ಇಂದು ನಡೆಯುವ ಐಪಿಎಲ್(IPL 2024) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಮತ್ತು ಗುಜರಾತ್​ ಟೈಟಾನ್ಸ್(Gujarat Titans)​ ಕಣಕ್ಕಿಳಿಯಲಿದೆ. ಈ ಪಂದ್ಯ ಟೀಮ್​ ಇಂಡಿಯಾದ ಯುವ ಆಟಗಾರ, ಗುಜರಾತ್​ ತಂಡದ ನಾಯಕ ಶುಭಮನ್​ ಗಿಲ್(Shubman Gill)​ ಅವರಿಗೆ 100ನೇ ಐಪಿಎಲ್​ ಪಂದ್ಯವಾಗಿದೆ. ಹೀಗಾಗಿ ಅವರ ಮೇಲೆ ಇಂದಿನ ಪಂದ್ಯದಲ್ಲಿ ಅಭಿಮಾನಿಗಳು ಭಾರೀ ನಿರೀಕ್ಷೆ ಇರಿಸಿದ್ದಾರೆ.

2018ರಲ್ಲಿ ಕೆಕೆಆರ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್​ ಜರ್ನಿ ಆರಂಭಿಸಿದ ಶುಭಮನ್​ ಗಿಲ್​ ಇದುವರೆಗೆ 99 ಪಂದ್ಯಗಳನ್ನಾಡಿ ಮೂರು ಶತಕ, 20 ಅರ್ಧಶತಕ ಮತ್ತು ಒಂದು ಬಾರಿ ಆರೆಂಜ್​ ಕ್ಯಾಪ್​ ಗೆದ್ದಿದ್ದಾರೆ. ಜತೆಗೆ ಟ್ರೋಫಿ ಗೆದ್ದ ತಂಡದ ಸದ್ಯಸನೂ ಆಗಿದ್ದಾರೆ. ಇದೀಗ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 3088 ರನ್​ ಕೂಡ ಬಾರಿಸಿದ್ದಾರೆ. ಸದ್ಯ ಗುಜರಾತ್‌ ಎಂಟರಲ್ಲಿ 4 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಇಂದು ಗೆದ್ದರೆ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಬಹುದು.

ಗುಜರಾತ್​ಗೆ ಸೇಡಿನ ಪಂದ್ಯ


ಈ ಪಂದ್ಯ ಗುಜರಾತ್​ಗೆ ಸೇಡಿನ ಪಂದ್ಯವಾಗಿದೆ. ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಅದು ಕೂಡ ತವರಿನ ಅಂಗಳದಲ್ಲಿ ಕೇವಲ 89 ರನ್​ಗೆ ಆಲೌಟ್​ ಆಗುವ ಮೂಲಕ ತವರಿನ ಪ್ರೇಕ್ಷಕರ ಮುಂದೆಯೇ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಇದೀಗ ಈ ಸೋಲಿಗೆ ಡೆಲ್ಲಿಗೆ ತವರಿನಲ್ಲೇ ಸೋಲುಣಿಸಿ ಸೇಡು ತೀರಿಸುವ ತವಕದಲ್ಲಿದೆ. ಗುಜರಾತ್‌ ಬ್ಯಾಟಿಂಗ್‌ ಸರದಿಯಲ್ಲಿ ಸಾಯಿ ಸುದರ್ಶನ್‌, ಡೇವಿಡ್‌ ಮಿಲ್ಲರ್‌, ಒಮರ್‌ಜಾಯ್‌, ತೆವಾಟಿಯ ಇನ್ನಿಂಗ್ಸ್‌ ಬೆಳೆಸುವ ಜತೆಗೆ ಬಿರುಸಿನ ಆಟ ಆಡಬೇಕಿದೆ.

ಡೆಲ್ಲಿ ಬ್ಯಾಟಿಂಗ್‌ ಸರದಿಯ ಸಮಸ್ಯೆಯೆಂದರೆ ಓಪನಿಂಗ್‌ ವೈಫ‌ಲ್ಯ. ವಾರ್ನರ್‌-ಪೃಥ್ವಿ ಶಾ ಬಡಬಡಣೆ ಒಂದೆರಡು ಬೌಂಡರಿ ಬಾರಿಸಿ ವಿಕೆಟ್​ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾಗುತ್ತಿದ್ದಾರೆ. ಹೀಗಾಗಿ ಪವರ್‌ ಪ್ಲೇಯಲ್ಲಿ ರನ್‌ ಹರಿದು ಬರುತ್ತಿಲ್ಲ. ಬದಲಿ ಆಟಗಾರನಾಗಿ ತಂಡ ಸೇರಿದ ಆಸ್ಟ್ರೇಲಿಯಾದ ಯುವ ಬ್ಯಾಟರ್​ ಫ್ರೇಜರ್​- ಮೆಕ್‌ಗರ್ಕ್‌, ಇಂಪ್ಯಾಕ್ಟ್​ ಆಟಗಾರ ಅಭಿಷೇಕ್​ ಪೊರೆಲ್‌ ಮತ್ತು ನಾಯಕ ಪಂತ್‌ ಹೊರತುಪಡಿಸಿ ಉಳಿದವರೆಲ್ಲ ರನ್‌ ಬರಗಾಲದಲ್ಲಿದ್ದಾರೆ. ಬೌಲಿಂಗ್​ ಕೂಡ ಅಷ್ಟಕ್ಕಷ್ಟೇ. ಖಲೀಲ್​ ಅಹ್ಮದ್​ ದುಬಾರಿಯಾಗುತ್ತಿದ್ದಾರೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಸಂಭಾವ್ಯ ತಂಡಗಳು


ಗುಜರಾತ್​: ವೃದ್ಧಿಮಾನ್ ಸಹಾ, ಶುಭಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಸಂದೀಪ್ ವಾರಿಯರ್, ಮೋಹಿತ್ ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.

Exit mobile version