Site icon Vistara News

Shubman Gill : ರಶ್ಮಿಕಾ ಮಂದಣ್ಣ ಮೇಲೆ ಕ್ರಷ್ ಅಂತಾ ನಾನು ಯಾವಾಗ ಹೇಳಿದೆ ಎಂದ ಕ್ರಿಕೆಟಿಗ ಶುಭಮನ್ ಗಿಲ್

#image_title

ನವದೆಹಲಿ: ಕ್ರಿಕೆಟ್‌ ಆಟಗಾರರಿಗೆ ಸಿನಿಮಾ ತಾರೆಗಳ ಮೇಲೆ ಪ್ರೀತಿ ಹುಟ್ಟುವುದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗಷ್ಟೇ ಕ್ರಿಕೆಟ್‌ ಆಟಗಾರ ಕೆ.ಎಲ್‌.ರಾಹುಲ್‌ ಅವರು ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಅವರ ಪುತ್ರಿಯನ್ನು ವರಿಸಿ, ಎರಡೂ ಕ್ಷೇತ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ಇದೀಗ ಇನ್ನೊಬ್ಬ ಕ್ರಿಕೆಟ್‌ ಆಟಗಾರರಾಗಿರುವ ಶುಭಮನ್‌ ಗಿಲ್ (Shubman Gill)‌ ಅವರು ಕನ್ನಡತಿ, ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಮೇಲೆ ಕ್ರಷ್‌ ಇರುವುದಾಗಿ ಹೇಳಿಕೊಂಡಿದ್ದಾರೆ ಎಂದು ಸುದ್ದಿ ಹರಿದಾಡಿದೆ. ಆದರೆ, ಈ ವಿಷಯವನ್ನು ಶುಭಮನ್ ಗಿಲ್ ಅವರು ತಳ್ಳಿ ಹಾಕಿದ್ದಾರೆ.

ಈ ಸುದ್ದಿ ನೋಡಿ ಬೆಚ್ಚಿ ಬಿದ್ದಿರುವ ಸ್ವತಃ ಶುಭಮನ್‌ ನಾನು ಯಾವಾಗ ಆ ರೀತಿ ಹೇಳಿದೆ ಎಂದು ಪ್ರಶ್ನಿಸಿದ್ದಾರೆ. ರಶ್ಮಿಕಾ ಮೇಲೆ ಗಿಲ್‌ಗೆ ಕ್ರಶ್ ಎಂದು ಓದಿ ಅವರು ಅವರೇ ಶಾಕ್‌ ಆಗಿದ್ದಾರೆ. “ಅರೇ ಸ್ವಾಮಿ ನಾನು ಯಾವಾಗ ಯಾವ ಮಾಧ್ಯಮಕ್ಕೆ ಈ ರೀತಿ ಹೇಳಿಕೆ ನೀಡಿದೆ? ನನಗೇ ತಿಳಿಯದ್ದು ನಿಮಗೆ ಹೇಳಿ ತಿಳಿಯಿತು?” ಎಂದು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ನನ್ನ ಕ್ರಶ್‌ ಎಂದ ಭಾರತ ತಂಡದ ಯುವ ಆಟಗಾರ

ಶುಭಮನ್‌ ಅವರು ಮಾಧ್ಯಮವೊಂದರ ಜತೆ ಮಾತನಾಡುವಾಗ ತಮ್ಮ ಕ್ರಷ್‌ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಮೊದಲಿಗೆ ಉತ್ತರ ಕೊಡದ ಅವರು ಒತ್ತಾಯ ಮಾಡಿದಾಗ ತಾವು ನಟಿ ರಶ್ಮಿಕಾ ಮಂದಣ್ಣ ಮೇಲೆ ಕ್ರಷ್‌ ಇಟ್ಟುಕೊಂಡಿರುವುದಾಗಿ ಹೇಳಿದರು ಎಂದು ಸುದ್ದಿಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ ಕೂಡ.

ಈ ಸುದ್ದಿಯನ್ನು ನೋಡುತ್ತಿದ್ದಂತೆಯೇ ಕನ್ನಡ ಸಿನಿಮಾದ ಅಭಿಮಾನಿಗಳು ಶುಭಮನ್‌ಗೆ ಸಲಹೆಗಳನ್ನು ಕೊಡಲಾರಂಭಿಸಿದ್ದಾರೆ. “ರಶ್ಮಿಕಾ ಕೈ ಕೊಟ್ಟು ಹೋಗುವಂತವರು, ಹಾಗಾಗಿ ಅವರ ಸುದ್ದಿಗೆ ಹೋಗದೆ ಇರುವುದೇ ಒಳಿತು” ಎಂದು ಹೇಳಲಾರಂಭಿಸಿದ್ದಾರೆ. ಆದರೆ, ತಾನು ಆ ರೀತಿ ಹೇಳಿಲ್ಲ ಎಂದು ಶುಭಮನ್ ಗಿಲ್ ಸ್ಪಷ್ಟಪಡಿಸಿದ್ದಾರೆ.

Exit mobile version