ಸೂರತ್ ಮೂಲದ ಜನಪ್ರಿಯ ಮಾಡೆಲ್ ತಾನಿಯಾ ಸಿಂಗ್(Model Tania Singh) ಆತ್ಮಹತ್ಯೆ(Tanya suicide case) ಪ್ರಕರಣಕ್ಕೆ ಸಂಬಂಧಿಸಿದಂತೆ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆಲ್‌ರೌಂಡರ್ ಅಭಿಷೇಕ್ ಶರ್ಮಾ(Abhishek Sharma) ಅವರನ್ನು ಮಂಗಳವಾರ ಸೂರತ್ ಪೊಲೀಸರು(Surat Police) ವಿಚಾರಣೆ ನಡೆಸಿದ್ದಾರೆ.
ರೂಪದರ್ಶಿ ತನಿಯಾ ಸಿಂಗ್ (28) ಅವರು ಕಳೆದ ತಿಂಗಳು ಸೂರತ್‍ನ ತಮ್ಮ ಅಪಾರ್ಟ್‍ಮೆಂಟ್‍ನಲ್ಲಿ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಆತ್ಮಹತ್ಯೆಯ ಕೇಸ್‌ನಲ್ಲಿ ಸ್ಥಳೀಯ ಪೊಲೀಸರು ವಿಚಾರಣೆಗೆ ಬರುವಂತೆ ಅಭಿಷೇಕ್ಗೆ ಸಮನ್ಸ್ ಜಾರಿ ಮಾಡಿದ್ದರು. ಮಾಡೆಲ್ ತಾನಿಯಾ ಸಿಂಗ್ ತನ್ನ ಕೊನೆಯ ಫೋನ್ ಕರೆಯನ್ನು ಅಭಿಷೇಕ್ ಶರ್ಮಗೆ ಮಾಡಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಅವರಿಗೆ ಸಮನ್ಸ್ ನೀಡಿ ತನಿಖೆ ಆರಂಭಿಸಿದ್ದರು. ಇಂದು ಸೂರತ್‌ನ ವೆಸು ಪೊಲೀಸ್ ಠಾಣೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.
In a startling development in the case of Surat-based model Tania taking her own life, cricketer Abhishek Sharma, who played for India in the Under-19 World Cup and Sunrisers Hyderabad in the IPL, has been questioned by Vesu Police. #surat #oursuratcity #news #newsupdate pic.twitter.com/mOIp5dUizx
— Our Surat (@oursuratcity) March 5, 2024
ಕಳೆದ ಎರಡೂವರೆ ವರ್ಷಗಳಿಂದ ತಾನಿಯಾ ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು. ಫೆ. 20 ರಂದು ಮನೆಗೆ ತಡವಾಗಿ ಆಗಮಿಸಿದ್ದ ತಾನಿಯಾ ಶರ್ಮ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾನಿಯಾ ಕಾಲ್ ಡಿಟೇಲ್ಸ್ನಲ್ಲಿ ಹಲವು ರಹಸ್ಯಗಳು ಅಡಗಿವೆ ಎಂದು ಪೊಲೀಸರು ತಿಳಿಸಿದ್ದರು. ಅಲ್ಲದೆ ಕೊನೆಯ ಕರೆ ಮತ್ತು ಸಂದೇಶವನ್ನು ತಾನಿಯಾ ಅವರು ಅಭಿಷೇಕ್ಗೆ ಕಳುಹಿಸಿದ್ದರು. ಹೀಗಾಗಿ ತನಿಖೆಯ ಗಮನವು ಅವರತ್ತ ಸಾಗಿತ್ತು.
ಇದನ್ನೂ ಓದಿ Tushar Arothe: ಭಾರತ ತಂಡದ ಮಾಜಿ ಕೋಚ್ ಮನೆಯಲ್ಲಿ ಕೋಟಿ ರೂ. ಪತ್ತೆ; ವಶಕ್ಕೆ ಪಡೆದ ಪೊಲೀಸರು
“ಮೃತ ರೂಪದರ್ಶಿಯೊಂದಿಗೆ ಅಭಿಷೇಕ್ ಶರ್ಮಾ ಸ್ನೇಹಿತರಾಗಿದ್ದರು ಎಂದು ನಮಗೆ ತಿಳಿದು ಬಂದಿದೆ. ಹೆಚ್ಚಿನ ವಿವರಗಳು ತನಿಖೆಯಲ್ಲಿ ತಿಳಿಯುತ್ತದೆ” ಎಂದು ಕಳೆದ ತಿಂಗಳು ಸಹಾಯಕ ಪೊಲೀಸ್ ಆಯುಕ್ತ ವಿಆರ್ ಮಲ್ಹೋತ್ರಾ ಹೇಳಿದ್ದರು. ಮಂಗಳವಾರ ನಡೆದ ಪೊಲೀಸ್ ವಿಚಾರಣೆಯಲ್ಲಿ ಅಭಿಷೇಕ್ ಶರ್ಮ ಅವರು ತನಿಯಾ ಜತೆಗಿನ ಸಂಬಂಧದ ಬಗ್ಗೆ ಏನು ಹೇಳಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿದ್ದಾರೆ. 2022ರ ಐಪಿಎಲ್ ಹರಾಜಿನಲ್ಲಿ 6.5 ಕೋಟಿ ರೂ.ಗೆ ಖರೀದಿಸಿತ್ತು. ಇದುವೆಗೆ 47 ಪಂದ್ಯಗಳಳನ್ನಾಡಿರುವ ಅವರು 137.38 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಗಳಿಸಿದ್ದಾರೆ. 75 ರನ್ ಗರಿಷ್ಠ ಸ್ಕೋರ್. 4 ಅರ್ಧ ಶತಕ ಹಾಗೂ 9 ವಿಕೆಟ್‌ಗಳನ್ನು ಪಡೆದಿದ್ದಾರೆ.