Site icon Vistara News

Pakistan Players: ನ್ಯೂಯಾರ್ಕ್​ನಲ್ಲಿ ದರೋಡೆಗಿಳಿದ ಪಾಕಿಸ್ತಾನ ಕ್ರಿಕೆಟಿಗರು; ತನಿಖೆಗೆ ಆಗ್ರಹ

Pakistan Players

Pakistan Players: Pakistan Players Host Private Dinner For USD 25 Before T20 World Cup, Get Slammed

ನ್ಯೂಯಾರ್ಕ್​: ಎಲ್ಲ ದೇಶಗಳು ಟಿ20 ವಿಶ್ವಕಪ್​ ಟ್ರೋಫಿ(T20 World Cup) ಗೆಲ್ಲುವತ್ತ ಗಮನಹರಿಸಿದರೆ, ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನದ ಆಟಗಾರರು(Pakistan Players) ಆರ್ಥಿಕ ಸಂಕಷ್ಟದಿಂದ ಪಾರಾಗುವತ್ತ ಗಮನ ಹರಿಸಿದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನ ಆಟಗಾರರು ದಂಧೆಗೆ ಇಳಿದು ವಿವಾದಕ್ಕೀಡಾಗಿದ್ದಾರೆ.

ಪಾಕಿಸ್ತಾನದ ಆಟಗಾರರು ಖಾಸಗಿ ಔತಣಕೂಟ(Pakistan Players Host Private Dinner) ಒಂದನ್ನು ಆಯೋಜಿಸಿ ಈ ಔತಣಕೂಟದಲ್ಲಿ ಅಭಿಮಾನಿಗಳು ಕೂಡ ಪಾಲ್ಗೊಳ್ಳಬಹುದು ಎಂದು ಹೇಳಲಾಗಿದೆ. ಆದರೆ ಒಂದು ಕ್ಷರತ್ತು ಕೂಡ ವಿಧಿಸಿದೆ. ಈ ಔತಣ ಕೂಟದಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳು 25 ಯುಎಸ್​ ಡಾಲರ್​ ಪಾವತಿಸಬೇಕು ಎಂದು ಹೇಳಿದೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪಾಕ್​ ಆಟಗಾರರನ್ನು ಸ್ವತಃ ಪಾಕಿಸ್ತಾನದ ಜನರೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ಇಷ್ಟು ಗತಿಗೆಟ್ಟು ನೀವು ದೇಶವನ್ನು ಪ್ರತಿನಿಧಿಸಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IND vs PAK: ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡುವ ಉಪಾಯ ಮಾಡಿದ ಕುತಂತ್ರಿ ಪಾಕ್​

ಅಭಿಮಾನಿಗಳು ನೀಡಿದ 25 ಯುಎಸ್ ಡಾಲರ್​ಗಳನ್ನೆಲ್ಲ ಒಟ್ಟುಗೂಡಿಸಿ ಅಂತಿಮವಾಗಿ ಎಲ್ಲ ಆಟಗಾರರು ಸಮಾನವಾಗಿ ಹಂಚಿಕೊಂಡು ಹಣ ಗಳಿಸುವುದು ಆಟಗಾರರ ಉಪಾಯವಾಗಿತ್ತು. ಆದರೆ, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್ ಆಡಲು ತೆರಳಿದ ತಂಡವೊಂದು ಔತಣಕೂಟ ಏರ್ಪಡಿಸಿ ಅಭಿಮಾನಿಗಳಿಂದ ದುಡ್ಡುಗಳಿಸಲು ಮುಂದಾಗುತ್ತಿರುವ ಅತ್ಯಂತ ನಾಚಿಕೆಗೇಡಿನ ಸಂಗತಿ. ಇದೊಂದು ದರೋಡೆ ಎಂದು ಅನೇಕರು ಕಿಡಿಕಾರಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ ಈ ನಿರ್ಧಾರದ ಹಿಂದೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಕೈವಾಡವೂ ಇದೆ ಎಂದು ಹೇಳಲಾಗಿದೆ. ಈಗಾಗಲೇ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಆರ್ಥಿಕ ಸಂಕಷ್ಟದಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಸಂಕಷ್ಟದಿಂದ ಹೊರ ಬರುವ ನಿಟ್ಟಿನಲ್ಲಿ ಆಟಗಾರರ ಮೂಲಕ ಮಂಡಳಿ ಈ ಕೆಲಸ ಮಾಡಿತೇ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ. ಈ ಅನುಮಾನ ಹುಟ್ಟಿಕೊಳ್ಳಲು ಕೂಡ ಕಾರಣವಿದೆ, ಇಷ್ಟೆಲ್ಲಾ ನಡೆದರೂ ಪಾಕ್​ ಕ್ರಿಕೆಟ್​ ಮಂಡಳಿ ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ಕೃತ್ಯದ ಹಿಂದೆ ಮಂಡಳಿಯ ಕೈವಾಡವಿದೆ ಎನ್ನಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 9, ಭಾನುವಾರ ನಡೆಯಲಿದೆ. ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

Exit mobile version