Site icon Vistara News

T20 World Cup 2024: ಸುದೀಪ್‌ ಸೇರಿದಂತೆ ಸೌತ್‌ ,ಬಾಲಿವುಡ್‌ ತಾರೆಯರು ವಿಶ್ವಕಪ್​ ಗೆಲುವನ್ನು  ಸಂಭ್ರಮಿಸಿದ್ದು ಹೀಗೆ!

T20 World Cup 2024 Celebrities Celebrates India ICC Cricket

ಬೆಂಗಳೂರು: ಅತ್ಯಂತ ರೋಚಕವಾಗಿ ನಡೆದ ಟಿ20 ವಿಶ್ವಕಪ್​ ಫೈನಲ್(T20 World Cup 2024) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(South Africa vs India) ತಂಡವನ್ನು 7 ರನ್​ಗಳಿಂದ ಮಣಿಸಿದ ಭಾರತ 2ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಜತೆಗೆ 13 ವರ್ಷಗಳ ಕಪ್​ ಬರಗಾಲ ಕೂಡ ನೀಗಿತು.  ಭಾರತ ಕ್ರಿಕೆಟ್ ತಂಡದ ಗೆಲುವನ್ನು ಸಿನಿಮಾ ಸೆಲೆಬ್ರಿಟಿಗಳು ಕೂಡ ಸಂಭ್ರಮಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಎಕ್ಸ್‌ ಖಾತೆಯಲ್ಲಿ ʻʻರಾಹುಲ್ ದ್ರಾವಿಡ್ ಸರ್ ನೀವು ನಮ್ಮ ಹೆಮ್ಮೆ. , ಘನತೆಯ ಶಿಖರ ಇದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರುಗಳು ನಮ್ಮ ಹೀರೋಗಳಾಗಿ ಹೊರಹೊಮ್ಮಿದ್ದಕ್ಕೆ ಧನ್ಯಾವದ. ಅದ್ಭುತ ಕ್ಯಾಚ್ ಪಡೆದ ಸೂರ್ಯಕುಮಾರ್ ಯಾದವ್​ಗೆ ವಿಶೇಷ ಧನ್ಯವಾದ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: T20 World Cup 2024: ದರ್ಶನ್‌ ಜೈಲಿಗೆ ಹೋದಾಗೆಲ್ಲ ವಿಶ್ವಕಪ್‌ ಗೆದ್ದ ಭಾರತ; ಹೀಗ್ಯಾಕೆ ಅಂದ್ರು ನೆಟ್ಟಿಗರು?

ಅಮಿತಾಭ್‌ ಬಚ್ಚನ್‌ ಕೂಡ ʻʻಕಣ್ಣೀರು ಹರಿಯುತ್ತಿದೆ. ವಿಶ್ವ ಚಾಂಪಿಯನ್ಸ್ ಭಾರತ. ಭಾರತ ಮಾತಾ ಕಿ ಜಯ್‌. ಜಯ ಹಿಂದ್ ಜಯ ಹಿಂದ್ʼʼಎಂದು ಬರೆದುಕೊಂಡಿದ್ದಾರೆ.

ಇನ್ನು ನಟ, ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹ ಟ್ವೀಟ್ ಮಾಡಿದ್ದು, ಸರಳವಾಗಿ, ‘ಭಾರತ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸಹ ಟ್ವೀಟ್ ಮಾಡಿದ್ದು, ʻʻಈ ಕಪ್‌ ನಮ್ಮದು! ಹೀರೋಸ್-ಇನ್-ಬ್ಲೂ ಹೊಸ ‘ವಿಶ್ವ ಚಾಂಪಿಯನ್’! ಸೂರ್ಯ ಕುಮಾರ್‌ ಕ್ಯಾಚ್‌ ಅದ್ಭುತ. ಈ ಐತಿಹಾಸಿಕ ಗೆಲುವಿನ ಬಗ್ಗೆ ತುಂಬಾ ಹೆಮ್ಮೆ ಇದೆ. ಜೈ ಹಿಂದ್! ಎಂದು ಬರೆದುಕೊಂಡಿದ್ದಾರೆ.

ರಣದೀಪ್ ಹೂಡಾ “ಬುಮ್ರಾ ಸ್ವಿಂಗ್ ದೇವರು ಮತ್ತು ಅರ್ಶ್‌ದೀಪ್ ಮತ್ತು ಅಕ್ಸರ್ .. ಕೊಹ್ಲಿ ಬ್ಯಾಟ್ ಮತ್ತು ರೋಹಿತ್ ಗ್ರೇಟ್‌. ಧನ್ಯವಾದಗಳು ರಾಹುಲ್ ದ್ರಾವಿಡ್.”ಎಂದು ಬರೆದುಕೊಂಡಿದ್ದಾರೆ.

ಅನಿಲ್ ಕಪೂರ್, ಮತ್ತು ರಶ್ಮಿಕಾ ಮಂದಣ್ಣ, ಅನನ್ಯ ಪಾಂಡೆ, ರವೀನಾ ಟಂಡನ್ ರಣದೀಪ್ ಹೂಡಾ ರಣ್ವೀರ್ ಸಿಂಗ್ ಸೇರಿದಂತೆ ಇನ್ನೂ ಹಲವು ಸಿನಿಮಾ ಸೆಲೆಬ್ರಿಟಿಗಳು ಭಾರತ ಕ್ರಿಕೆಟ್ ತಂಡದ ಅತ್ಯದ್ಭುತವಾದ ವಿಜಯಕ್ಕೆ ಟ್ವೀಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

Exit mobile version