Site icon Vistara News

T20 World Cup Viral Video: ಪಾಕ್​ ತಂಡದ ವೇಗಿಗೆ ತವರಿನ ಅಭಿಮಾನಿಗಳಿಂದಲೇ ಗೇಲಿ

T20 World Cup Viral Video

T20 World Cup Viral Video: Fan Calls Pakistan Star "Fixer", Internet Says 'Bewakoof Log'

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 World Cup)​ ಆಡುವ ಸಲುವಾಗಿ ನಿವೃತ್ತಿ ಹಿಂಪಡೆದು ಪಾಕಿಸ್ತಾನ ತಂಡದ ಪರ ಆಡುತ್ತಿರುವ ಅನುಭವಿ ಹಾಗೂ ಹಿರಿಯ ವೇಗಿ ಮೊಹಮ್ಮದ್​ ಅಮೀರ್(Mohammad Amir)​ ಅವರು ನ್ಯೂಯಾರ್ಕ್​ನಲ್ಲಿ ತವರಿನ ಅಭಿಮಾನಿಗಲೇ ಗೇಲಿ ಮಾಡಿದ್ದಾರೆ. ಅಮೀರ್​ ಅವರನ್ನು ಫಿಕ್ಸರ್…ಫಿಕ್ಸರ್​ ಎಂದು ಕರೆದಿದ್ದಾರೆ. ಈ ವಿಡಿಯೊ ವೈರಲ್​(T20 World Cup Viral Video) ಆಗಿದೆ.

ಪಂದ್ಯ ಮುಗಿಸಿ ಡ್ರೆಸಿಂಗ್​ ರೋಮ್​ಗೆ ತೆರಳುವ ವೇಳೆ ಅಮೀರ್​ ಅವರು ಅಭಿಮಾನಿಗಳಿಗೆ ಏನೋ ಕೈ ಸನ್ನೆ ಮಾಡುವ ಮೂಲಕ ಅಹಂಕಾರದ ವರ್ತನೆ ತೋರಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅಭಿಮಾನಿಗಳು ಜೋರಾಗಿ ಫಿಕ್ಸರ್​…ಫಿಕ್ಸರ್​ ಎಂದು ಕರೆದು ಗೇಲಿ ಮಾಡಿದ್ದಾರೆ. ಈ ವೇಳೆ ಅಮೀರ್​ ಕೋಪಗೊಂಡು ಬೈದಿದ್ದಾರೆ. ಇದರಿಂದ ಕೆರಳಿದ ಅಭಿಮಾನಿಗಳು ಮತ್ತೂ ಜೋರಾಗಿ ನೀನೊಬ್ಬ ಫಿಕ್ಸರ್​ ಎನ್ನುವುದನ್ನು ಮರಿಬೇಡ, ಜೈಲು ಶಿಕ್ಷೆಯೂ ಅನುಭವಿಸಿದ್ದೀಯ ಎಂದು ಹೇಳಿದ್ದಾರೆ. ಇದು ಬಾಬರ್​ ಅಜಂ ಅವರ ಅಭಿಮಾನಿಗಳು ಎಂದು ಹೇಳಲಾಗಿದೆ.

2010ರ ಆಗಸ್ಟ್‌ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅಮೀರ್​ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅವರ ಮೇಲೆ ಕ್ರಿಕೆಟ್ ಆಡದಂತೆ ಐದು ವರ್ಷಗಳ ನಿಷೇಧ ವಿಧಿಸಲಾಗಿತ್ತು. ಆಗ ಅವರಿಗೆ 18 ವರ್ಷ ವಯಸ್ಸಾಗಿತ್ತು. 2015ರಲ್ಲಿ ನಿಷೇಧ ಮುಕ್ತರಾಗಿ ಅವರು ದೇಶಿ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದು ಬಳಿಕ ರಾಷ್ಟ್ರೀಯ ತಂಡಕ್ಕೆ ಮತ್ತೆ ಪುನರಾಗಮನ ಮಾಡಿದ್ದರು. ಈ ಪ್ರಕರಣದಲ್ಲಿ ಅಮೀರ್​ ಮಾತ್ರವಲ್ಲದೆ ತಂಡದ ನಾಯಕ ಸಲ್ಮಾನ್ ಭಟ್ ಮತ್ತು ಮೊಹಮ್ಮದ್ ಆಸೀಫ್ ಕೂಡ ನಿಷೇಧಕ್ಕೊಳಗಾಗಿದ್ದರು.

ಇದನ್ನೂ ಓದಿ WI vs NZ: ಕಿವೀಸ್​ ಕಿವಿ ಹಿಂಡಿ ಸೂಪರ್​-8ಗೆ ಪ್ರವೇಶಿಸಿದ ವೆಸ್ಟ್​ ಇಂಡೀಸ್​

 2021 ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆದಾಗ್ಯೂ, ಅವರು ಜಗತ್ತಿನಾದ್ಯಂತ T20 ಲೀಗ್‌ಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು. ಈ ಬಾರಿಯ ಟಿ20 ವಿಶ್ವಕಪ್​ ಆಡುವ ಸಲುವಾಗಿಯೇ ಅವರು ತಮ್ಮ ನಿವೃತ್ತಿಯನ್ನು ಹಿಂಪಡೆದು ಮತ್ತೆ ತಂಡ ಸೇರಿದ್ದರು. 32 ವರ್ಷದ ಅಮೀರ್ ಇದುವರೆಗೆ 36 ಟೆಸ್ಟ್‌ಗಳು, 61 ಏಕದಿ ಮತ್ತು 61 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 81, ಟೆಸ್ಟ್​ನಲ್ಲಿ 119 ಮತ್ತು ಟಿ20ಯಲ್ಲಿ 69 ವಿಕೆಟ್​ ಕೆಡವಿದ್ದಾರೆ.

ಪಾಕಿಸ್ತಾನ ತಂಡ ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ಟೂರ್ನಿಯಿಂದ ಹೊರಬೀಳುವ ಹಂತದಲ್ಲಿದೆ. ಅಮೆರಿಕ ತಂಡ ಮುಂದಿನ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಗೆದ್ದರೆ ಪಾಕ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಪಾಕ್​ ಆಟಗಾರನಿಗೆ ‘ನಾಲಾಯಕ್’ ಎಂದ ಹರ್ಭಜನ್​ ಸಿಂಗ್


ಭಾರತ ಮತ್ತು ಪಾಕ್​(IND vs PAK) ಪಂದ್ಯದ ವೇಳೆ ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜನಾಂಗೀಯ ನಿಂದನೆ ಮಾಡಿ ಬಳಿಕ ಕ್ಷಮೆಯಾಚಿಸಿದ್ದ ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್​ ಅಕ್ಮಲ್(Kamran Akmal) ವಿರುದ್ಧ ಹರ್ಭಜನ್​ ಸಿಂಗ್(Harbhajan Singh) ಮತ್ತೆ ಕಿಡಿ ಕಾರಿದ್ದಾರೆ. ನಿನೋಬ್ಬ ನಾಲಾಯಕ್(Nalaayak)​ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ. ಎಎನ್​ಐ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಹರ್ಭಜನ್​ ಸಿಂಗ್ ಅವರು ಕಮ್ರಾನ್​ ಅಕ್ಮಲ್​ ಒಬ್ಬ ನಾಲಾಯಕ್​, ಈತನಿಂದ ಮಾತ್ರ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ತೀಕ್ಷ್ಣ ಮಾತುಗಳಿಂದ ಜಾಡಿಸಿದ್ದಾರೆ.

Exit mobile version