Site icon Vistara News

Team India: ವೆಸ್ಟ್​ ಇಂಡೀಸ್​ ಮೈದಾನ ಭಾರತದ ಪಾಲಿಗೆ ಅನ್ ಲಕ್ಕಿ; ಹಿಂದಿನ 2 ವಿಶ್ವಕಪ್ ಟೂರ್ನಿಯ​ ಹಿನ್ನೋಟ ಇಲ್ಲಿದೆ

T20 World Cup 2024

Team India: West Indies ground unlucky for India

ಬೆಂಗಳೂರು: ಭಾರತ ತಂಡ(Team India) ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಪಂದ್ಯವನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ನಾಕೌಟ್​ ಹಂತಕ್ಕೇರಿದರೆ ವೆಸ್ಟ್​ ಇಂಡೀಸ್​ನಲ್ಲಿ(team india in west indies) ಪಂದ್ಯವನ್ನಾಡಬೇಕಿದೆ. ಇದು ಭಾರತಕ್ಕೆ ಚಿಂತೆ ಪಡುವಂತೆ ಮಾಡಿದೆ.

ಹೌದು, ವೆಸ್ಟ್​ ಇಂಡೀಸ್​ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್​, 2010 ಟಿ20 ವಿಶ್ವಕಪ್​ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು. 2007ರಲ್ಲಿ ದ್ರಾವಿಡ್​ ಸಾರಥ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಬಾಂಗ್ಲಾದೇಶ ವಿರುದ್ಧವೂ ಸೋಲು ಕಂಡು ಗುಂಪು ಹಂತದಿಂದಲೇ ಹೊರಬಿದ್ದಿತ್ತು. 2010ರ ಟಿ20 ವಿಶ್ವಕಪ್​ನಲ್ಲಿಯೂ ಧೋನಿ ಸಾರಥ್ಯದ ಟೀಮ್​ ಇಂಡಿಯಾ ಗುಂಪು ಹಂತದಿಂದಲೇ ನಿರ್ಗಮನ ಕಂಡಿತ್ತು. ಹೀಗಾಗಿ ಕೆರಿಬಿಯನ್​ ದ್ವೀಪ ಭಾರತದ ಪಾಲಿಗೆ ಅದೃಷ್ಟವಲ್ಲ ಎನ್ನಲಡ್ಡಿಯಿಲ್ಲ.

2007ರ ಟಿ20 ವಿಶ್ವ ಕಪ್ (T20 World Cup 2024)​ ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್​ ಆಗಿ ಭಾರತ ಹೊರಹೊಮ್ಮಿತು. ಇದರ ಬಳಿಕ ಭಾರತ ಮತ್ತೆ ಟಿ20 ಚಾಂಪಿಯನ್​ ಆಗಲೇ ಇಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್​ ಆಗುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ ಆದರೆ, ತಂಡಕ್ಕೆ ಹಲವು ಸವಾಲು ಕೂಡ ಇದೆ.

ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ರೋಹಿತ್​ ಮತ್ತು ಕೊಹ್ಲಿ ಪಾಲಿಗೆ ಇದೊಂದು ಮಹತ್ವದ ಕೂಟ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

ನಂ.1 ಆದರೂ ಎಚ್ಚರ ಅಗತ್ಯ


ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ತಂಡ ಬಲಿಷ್ಠ ಎನ್ನಬಹುದು. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ತಂಡದ ಪ್ರಮುಖ ಆಟಗಾರರು. ಆದರೆ, ಭಾರತ ಪೂರ್ಣ ಎಚ್ಚರವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು. ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಅಭ್ಯಾಸ ಪಂದ್ಯದಲ್ಲಿ ಅನುಭವಿ ಬಾಂಗ್ಲಾದೇಶಕ್ಕೆ ಕ್ರಿಕೆಟ್​ ಶಿಶು ಅಮೆರಿಕ ಸೋಲುಣಿಸಿದ್ದು. ಆದ್ದರಿಂದ ಭಾರತ ಎಚ್ಚರ ತಪ್ಪಬಾರದು. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.

ಟಿ20 ವಿಶ್ವ ಕಪ್​ನಲ್ಲಿ ಭಾರತ ಸಾಧನೆ

2007ಚಾಂಪಿಯನ್​
20092ನೇ ಸುತ್ತು
20102ನೇ ಸುತ್ತು
20122ನೇ ಸುತ್ತು
2014ರನ್ನರ್​ ಅಪ್​
2016ಸೆಮಿಫೈನಲ್​
20212ನೇ ಸುತ್ತು
2022ಸೆಮಿಫೈನಲ್​
Exit mobile version