ಪುಣೆ: ಸ್ನೇಹಿತರೊಂದಿಗೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ವೇಳೆ ಚೆಂಡು ತನ್ನ ಖಾಸಗಿ(Ball hit boy’s private part) ಭಾಗಕ್ಕೆ ಬಡಿದು 11 ವರ್ಷದ(11-year-old ) ಬಾಲಕ ಮೃತಪಟ್ಟಿರುವ ದಾರುಣ ಘಟನೆಯೊಂದು ಪುಣೆಯಲ್ಲಿ ನಡೆದಿದೆ. ಈ ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ(viral news). ಮೃತಪಟ್ಟ ಬಾಲಕನನ್ನು ಶೌರ್ಯ(Shaurya ) ಎಂದು ಗುರಿತಿಸಲಾಗಿದೆ.
ಬೌಲಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ನೇರವಾಗಿ ಶೌರ್ಯನ ಖಾಸಗಿ ಭಾಗಕ್ಕೆ ಬಡಿದಿದೆ. ನೋವಿನಿಂದ ನರಳಿದ ಆತ ತಕ್ಷಣ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನ ಸ್ನೇಹಿತರು ಆರೈಕೆ ಮಾಡಿದರೂ ಕೂಡ ಯಾವುದೇ ಸ್ಪಂದನೆ ನೀಡದ ಕಾರಣ ಶೌರ್ಯನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆತ ಈ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಚೆಂಡಿನ ಬಲವಾದ ಹೊಡೆತಕ್ಕೆ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೆಲ ತಿಂಗಳ ಹಿಂದಷ್ಟೇ ಕ್ರಿಕೆಟ್ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು 52 ವರ್ಷದ ಕ್ರಿಕೆಟಿಗ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿತ್ತು. ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ವೇಳೆ ಮತ್ತೊಂದು ಪಂದ್ಯದ ಕ್ರಿಕೆಟ್ ಚೆಂಡು ತಲೆಗೆ ಬಡಿದು ಕ್ರಿಕೆಟಿಗ ಮೃತಪಟ್ಟಿದ್ದ. ಉದ್ಯಮಿ ಜಯೇಶ್ ಚುನ್ನಿಲಾಲ್ ಸಾವ್ಲಾ ಮೃತಪಟ್ಟ ಕ್ರಿಕೆಟಿಗ.
ಮಾಟುಂಗಾದ ದಾಡ್ಕರ್ ಮೈದಾನದಲ್ಲಿ ನಡೆಯುತ್ತಿದ್ದ ಕಚ್ಚಿ ವೀಸಾ ಓಸ್ವಾಲ್ ವಿಕಾಸ್ ಹಿರಿಯರ ಲೆಜೆಂಡ್ ಕಪ್ ಟಿ20 ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿತ್ತು. ಸ್ಥಳಾವಕಾಶದ ಕೊರತೆ ಮತ್ತು ಸಮಯದ ಅಭಾವದಿಂದಾಗಿ ಒಂದೇ ಮೈದಾನದಲ್ಲಿ ಎರಡು ಪಂದ್ಯಗಳನ್ನು ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಪಕ್ಕದ ಪಿಚ್ ನಿಂದ ಬಂದ ಚೆಂಡು ವ್ಯಕ್ತಿಯ ತಲೆಗೆ ಬಡಿದಿದಿತ್ತು. ಮೃತ ವ್ಯಕ್ತಿ ಪಕ್ಕದ ಪಿಚ್ನಲ್ಲಿ ಆಡುತ್ತಿದ್ದ ಬ್ಯಾಟರ್ನ ಕಡೆಗೆ ಬೆನ್ನು ಹಾಕಿ ಫೀಲ್ಡಿಂಗ್ ಮಾಡುತ್ತಿದ್ದರು, ಆದ್ದರಿಂದ ಚೆಂಡು ಅವರ ಕಡೆಗೆ ಬರುವುದನ್ನು ನೋಡಲು ಸಾಧ್ಯವಾಗಿರಲಿಲ್ಲ. ನೇರವಾಗಿ ಬಂದ ಚೆಂಡು ಸಾವ್ಲಾ ತಲೆಗೆ ಬಡಿದಿತ್ತು.
ಇದನ್ನೂ ಓದಿ Gadag News: ಮುಂಡರಗಿ ಬಳಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು
ಹೃದಯಾಘಾತದಿಂದ ಮೈದಾನದಲ್ಲೇ ಮೃತಪಟ್ಟ ಇಂಜಿನಿಯರ್
ಕ್ರಿಕೆಟ್ ಆಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾಫ್ಟ್ ವೇರ್ ಇಂಜಿನಿಯರ್ ಮೈದಾನದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ಕಳೆದ ಡಿಸೆಂಬರ್ನಲ್ಲಿ ನೋಯ್ಡಾದಲ್ಲಿ ಸಂಭವಿಸಿತ್ತು. ವಿಕಾಸ್ ಅವರು ಸ್ಟ್ರೈಕ್ನಲ್ಲಿದ್ದ ಸಹ ಬ್ಯಾಟರ್ ಜತೆ ಮಾತುಕತೆ ನಡೆಸಿ ಹಿಂದಿರುಗುವ ವೇಳೆ ಹಠಾತ್ ಆಗಿ ಪಿಚ್ನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.