Site icon Vistara News

Viral Video: ರೋಹಿತ್​ ಶರ್ಮಗೆ ಕಾರಿನಲ್ಲಿ ಡ್ರಾಪ್ ಕೊಟ್ಟ ಆಕಾಶ್‌ ಅಂಬಾನಿ

viral video

ಮುಂಬೈ: ಮುಂಬೈ ಇಂಡಿಯನ್ಸ್(mumbai indians) ತಂಡ ಇಂದು ಆರ್​ಸಿಬಿ(RCB) ವಿರುದ್ಧ ತವರಿನಲ್ಲಿ ಪಂದ್ಯವನ್ನಾಡಲಿದೆ ಈ ಪಂದ್ಯಕ್ಕೆ ತಂಡದ ಮಾಜಿ ನಾಯಕ ರೋಹಿತ್​ ಶರ್ಮ(Rohit Sharma) ಅವರನ್ನು ಫ್ರಾಂಚೈಸಿಯ ಸಹ ಮಾಲಿಕ, ರಿಲಯನ್ಸ್‌ ಜಿಯೋ ಅಧ್ಯಕ್ಷ ಆಕಾಶ್‌ ಅಂಬಾನಿ(Akash Ambani) ಅವರು ತಮ್ಮ ಕಾರ್​ನಲ್ಲಿ ವಾಂಖೆಡೆ ಸ್ಟೇಡಿಯಂಗೆ ಡ್ರಾಪ್​ ಮಾಡಿದ್ದಾರೆ. ಇದರ ವಿಡಿಯೊ ವೈರಲ್(Viral Video)​ ಆಗಿದೆ.

ರೋಹಿತ್​ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದಾಗ ಫ್ರಾಂಚೈಸಿ ವಿರುದ್ಧ ರೋಹಿತ್​ ಅಸಾಮಾಧಾನಗೊಂಡಿದ್ದಾರೆ. ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇತ್ತು. ಆದರೆ ಇದೀಗ, ಆಕಾಶ್‌ ಅಂಬಾನಿ ಸ್ವತಃ ಕಾರು ಡ್ರೈವಿಂಗ್​ ಮಾಡುತ್ತ. ರೋಹಿತ್​ಗೆ ಡ್ರಾಪ್​ ನೀಡಿದ್ದಾರೆ. ಈ ವಿಡಿಯೊ ಕಂಡ ನೆಟ್ಟಿಗರು ರೋಹಿತ್ ಮತ್ತು ಆಕಾಶ್ ಕಾರಿನಲ್ಲೇ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ರೋಹಿತ್ ಅವರು ಮುಂಬೈ ತಂಡ ತೊರೆಯಲಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಬೇರೆ ತಂಡದ ಪರ ಆಡಲಿದ್ದಾರೆ ಎಂದು ಭಾರೀ ಚರ್ಚೆಯಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ಫ್ರಾಂಚೈಸಿಗಳು ಕೂಡ ರೋಹಿತ್​ ತಮ್ಮ ತಂಡದ ಪರ ಆಡಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಎಲ್ಲ ಬೆಳವಣಿಯ ಮಧ್ಯೆ ರೋಹಿತ್​ ಅವರು ಆಕಾಶ್‌ ಅಂಬಾನಿ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ IPL 2024: ಸೋಲಿನ ಆಘಾತದ ಮಧ್ಯೆ ಸಂಜುಗೆ ಬಿತ್ತು 12 ಲಕ್ಷ ರೂ. ದಂಡ

“ಮುಂಬೈ ತಂಡ ಎಂದಿಗೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್‌ ತೆಂಡೂಲ್ಕರ್​ ಅವರಿಂದ ಹರ್ಭಜನ್‌ ತನಕ, ಪಾಂಟಿಂಗ್‌ ಅವರಿಂದ ರೋಹಿತ್‌ ತನಕ ಉತ್ತಮ ನಾಯಕರನ್ನು ಕಂಡಿದೆ. ಇವರಲ್ಲಿ ರೋಹಿತ್‌ ಅವರದು ಅತ್ಯಂತ ದೊಡ್ಡ ಕೊಡುಗೆ ಇದೆ. 5 ಬಾರಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಫ್ರಾಂಚೈಸಿ ಎಂದಿಗೂ ರೋಹಿತ್‌ಗೆ ಕೃತಜ್ಞವಾಗಿದೆ” ಎಂದು ಮುಂಬೈ ಇಂಡಿಯನ್ಸ್​ ತನ್ನ ವೆಬ್‌ಸೈಟ್‌ನಲ್ಲಿ ಬರೆದು ರೋಹಿತ್​ ಅವರನ್ನು ನಾಯಕ್ವದಿಂದ ಕೆಳಗಿಳಿಸಿದ ನಿರ್ಧಾರವನ್ನು ಪ್ರಕಟಿಸಿತ್ತು. ಗುಜರಾತ್​ ತಂಡದ ನಾಯಕನಾಗಿದ್ದ ಪಾಂಡ್ಯ ಅವರನ್ನು ಟ್ರೇಡಿಂಗ್​ ಮೂಲಕ ಮುಂಬೈಗೆ ಸೇರಿಸಿ ನಾಯಕತ್ವ ನೀಡಲಾಗಿತ್ತು. 2011ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿದ ರೋಹಿತ್ ಶರ್ಮಾ ಅವರು ತಂಡದ ನಾಯಕತ್ವ ವಹಿಸಿದ್ದರು. 2013, 2015, 2017, 2019 ಮತ್ತು 2020ರಲ್ಲಿ ಅವರ ನಾಯಕತ್ವದಲ್ಲಿ ಮುಂಬೈ ಕಪ್ ಗೆದ್ದುಕೊಂಡಿತ್ತು.

ಡೆಲ್ಲಿ ಪರ ಆಡಲಿದ್ದಾರಾ ರೋಹಿತ್​?


ಇಂಡಿಯನ್ಸ್​ ಎಕ್ಸ್​ಪ್ರೆಸ್​ ವರದಿಯ ಪ್ರಕಾರ ರೋಹಿತ್​ ಶರ್ಮ ಅವರನ್ನು ಡೆಲ್ಲಿ ಫ್ರಾಂಚೈಸಿ ಮುಂದಿನ ಮೆಗಾ ಹರಾಜಿನಲ್ಲಿ ಖರೀದಿಸಲಿದೆ ಎಂದು ತಿಳಿಸಿದೆ. ಅಲ್ಲದೆ ಫ್ರಾಂಚೈಸಿ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ರೋಹಿತ್​ ಅವರನ್ನು ಮುಂದಿನ ಬಾರಿ ಡೆಲ್ಲಿ ತಂಡದ ನಾಯಕನಾಗಿ ಕಣಕ್ಕಿಳಿಸಲು ಎಲ್ಲ ಸಿದ್ಧತೆಯೂ ಮಾಡಲಾಗಿದೆ ಎಂದು ಹೇಳಿರುವುದಾಗಿ ತನ್ನ ವರದಿಯಲ್ಲಿ ತಿಳಿಸಿದೆ.

ರೋಹಿತ್​ ಅಭಿಮಾನಿಗಳು ಕೂಡ ಮುಂಬೈ ತೊರೆದು ಬೇರೆ ತಂಡದ ಪರ ಆಡುವಂತೆ ಒತ್ತಾಯಿಸುತ್ತಿದ್ದಾರೆ. ಜಸ್​ಪ್ರೀತ್​ ಬುಮ್ರಾ ಕೂಡ ಪಾಂಡ್ಯ ನಾಯಕತ್ವದ ಬಗ್ಗೆ ಅತೃಪ್ತರಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ  ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಆಟಗಾರ, ಮುಂಬೈ ಇಂಡಿಯನ್ಸ್​ ಪರವೂ ಆಡಿರುವ ಅಂಬಾಟಿ ರಾಯುಡು(Ambati Rayudu) ಅವರು ರೋಹಿತ್​ ಶರ್ಮ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸಬೇಕು ಎಂದು ಹೇಳಿದ್ದರು. ಒಟ್ಟಾರೆಯಾಗಿ ಮುಂದಿನ ವರ್ಷದ ಮೆಗಾ ಹರಾಜಿನ ಪ್ರಮುಖ ಆಕರ್ಷಣೆಯೇ ರೋಹಿತ್​ ಶರ್ಮ ಆಗಿರಲಿದ್ದಾರೆ.

Exit mobile version