Site icon Vistara News

Virat Kohli: ಆರ್​ಸಿಬಿ ಪರ ಐಪಿಎಲ್​ನಲ್ಲಿ 16 ವರ್ಷ ಪೂರ್ತಿಗೊಳಿಸಿದ ಕಿಂಗ್​ ಕೊಹ್ಲಿ

virat kohli RCB

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್(IPL 2024)​ ಕ್ರಿಕೆಟ್ ಜಾತ್ರೆ ದೇಶದಲ್ಲಿ ಆರಂಭಗೊಳ್ಳಲಿದೆ. ಎಲ್ಲ ಕ್ರಿಕೆಟ್​ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮಧ್ಯೆ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ಅವರು ಐಪಿಎಲ್​ನಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಇದು ಕೂಡ ಒಂದೇ ತಂಡದ ಪರ ಆಡುವ ಮೂಲಕ ಎಂಬುದು ವಿಶೇಷ.

ವಿರಾಟ್ ಕೊಹ್ಲಿ ಆರ್​ಸಿಬಿ ಪರ 16 ವರ್ಷಗಳನ್ನು ಪೂರೈಸಿದ್ದು, ಈ ಬಾರಿ ಕಣಕ್ಕಿಳಿಯುವ ಮೂಲಕ 17ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಎಪ್ರಿಲ್​ 18, 2008ರಲ್ಲಿ ಕೊಹ್ಲಿ ಆರ್​ಸಿಬಿ ಪರ ಚೊಚ್ಚಲ ಐಪಿಎಲ್​ ಪಂದ್ಯವನ್ನಾಡಿದ್ದು. ಇಲ್ಲಿಂದ ಆರಂಭವಾದ ಇವರ ಜರ್ನಿ ಇದುವರೆಗೂ ಆರ್​ಸಿಬಿ ಪರವೇ ಮುಂದುವರಿದಿದೆ. ಕೊಹ್ಲಿ ಕೂಡ ಆರ್​ಸಿಬಿ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ. ಕ್ರಿಕೆಟ್​ ವಿದಾಯದ ತನಕವೂ ಆರ್​ಸಿಬಿ ಪರವೇ ಆಡುವೆ ಎಂದು ಈಗಾಗಲೇ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಇದುವರೆಗೆ 237 ಐಪಿಎಲ್ ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 7 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 7263 ರನ್ ಕಲೆಹಾಕಿದ್ದಾರೆ. ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಕೊಹ್ಲಿಯೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಂಡದ ಪರ 16 ವರ್ಷ ಆಡಿದ ಕೊಹ್ಲಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಫ್ರಾಂಚೈಸಿ ಹಮ್ಮಿಕೊಂಡಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ವಿರಾಟ್​ ಕೊಹ್ಲಿ ಅವರು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಹಿಂದೆ ಸರಿದ ಬಳಿಕ ಲಂಡನ್​ನಲ್ಲಿಯೇ ತಮ್ಮ ಪತ್ನಿ ಜತೆಗಿದ್ದಾರೆ. ಅವರು ಇದುವರೆಗೂ ಭಾರತಕ್ಕೆ ಆಗಮಿಸಿಲ್ಲ.

ಇದನ್ನೂ ಓದಿ IPL 2024 : ಕೆಕೆಆರ್​ ತಂಡಕ್ಕೆ ಕೈಕೊಟ್ಟ ಜೇಸನ್​ ರಾಯ್​; ವಿಶ್ವ ನಂಬರ್​ 2 ಬ್ಯಾಟರ್​ ಸೇರ್ಪಡೆ

ಆರ್​ಸಿಬಿ ಪಂದ್ಯಗಳ ವಿವರ ಇಲ್ಲಿದೆ

ತಂಡದ ವಿವರ ಇಲ್ಲಿವೆ


ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್​ವೆಲ್​, ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

Exit mobile version