Site icon Vistara News

Virat Kohli: ಶ್ರೀಲಂಕಾದ ಮಾಜಿ ಆಟಗಾರನ ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್​ ಕೊಹ್ಲಿ

Virat Kohli

Virat Kohli: Kohli set to break Mahela Jayawardene's colossal T20 World Cup record

ಆ್ಯಂಡಿಗುವಾ: ಭಾರತ ತಂಡ ಇಂದು ನಡೆಯುವ ಟಿ20 ವಿಶ್ವಕಪ್​ನ(T20 World Cup 2024) ಸೂಪರ್​-8 ಪಂದ್ಯದಲ್ಲಿ(IND vs BAN Super 8 Match) ಬಾಂಗ್ಲಾದೇಶದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಕಳೆದ 4 ಪಂದ್ಯಗಳಲ್ಲಿ ಘೋರ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ಪ್ರದರ್ಶಿಸುವ ಆತ್ಮವಿಶ್ವಾಸದಲ್ಲಿದ್ದಾರೆ.

ವಿರಾಟ್​ ಕೊಹ್ಲಿ ಬಾಂಗ್ಲಾ ಎದುರಿನ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ(most fours in T20 World Cup) ಬಾರಿಸಿರುವ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ದಾಖಲೆಯನ್ನು ಮುರಿಯಲಿದ್ದಾರೆ. ಜಯವರ್ಧನೆ 31 ಟಿ20 ವಿಶ್ವಕಪ್​ ಪಂದ್ಯಗಳನ್ನಾಡಿ 111 ಬೌಂಡರಿ ಬಾರಿಸಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಸದ್ಯ 104* ಬೌಂಡರಿ ಬಾರಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ IND vs BAN: ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ

ಅತ್ಯಧಿಕ ಬೌಂಡರಿ ಬಾರಿದ ಬ್ಯಾಟರ್​ಗಳು

ಆಟಗಾರದೇಶಇನಿಂಗ್ಸ್​ಬೌಂಡರಿ
ಮಹೇಲಾ ಜಯವರ್ಧನೆಶ್ರೀಲಂಕಾ31111
ವಿರಾಟ್ ಕೊಹ್ಲಿಭಾರತ31104*
ತಿಲಕರತ್ನೆ ದಿಲ್ಶನ್ಶ್ರೀಲಂಕಾ35101
ಡೇವಿಡ್​ ವಾರ್ನರ್ಆಸ್ಟ್ರೇಲಿಯಾ3897*
ರೋಹಿತ್​ ಶರ್ಮ​ಭಾರತ4397*
ಜಾಸ್​ ಬಟ್ಲರ್​ಇಂಗ್ಲೆಂಡ್3381*
ಕ್ರಿಸ್​ ಗೇಲ್​​ವೆಸ್ಟ್​ ಇಂಡೀಸ್​3178
ಕೇನ್​ ವಿಲಿಯಮ್ಸನ್​ನ್ಯೂಜಿಲ್ಯಾಂಡ್​2971*
ಬ್ರೆಂಡನ್ ಮೆಕಲಮ್ನ್ಯೂಜಿಲ್ಯಾಂಡ್2567
ಕುಮಾರ್ ಸಂಗಕ್ಕಾರಶ್ರೀಲಂಕಾ3163

ಐಪಿಎಲ್​ ಟೂರ್ನಿಯಲ್ಲಿ ಕೊಹ್ಲಿ 700ಕ್ಕೂ ಅಧಿಕ ರನ್​ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆದರೆ, ಈ ಯಶಸ್ಸು ಕೊಹ್ಲಿಗೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕೈ ಹಿಡಿಯಲಿಲ್ಲ. ಇಂದು ನಡೆಯುವ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತಮ್ಮ ಎಂದಿನ ಬ್ಯಾಟಿಂಗ್​ ಕ್ರಮಾಂಕ 3ನೇ ಸ್ಥಾನದಲ್ಲೇ ಆಡುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್​ ಈ ಪಂದ್ಯದಲ್ಲಿ ಶಿವಂ ದುಬೆ ಸ್ಥಾನಕ್ಕೆ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇದೆ. ಬಾಂಗ್ಲಾ ವಿರುದ್ಧ ಕೊಹ್ಲಿ ಉತ್ತಮ ಬ್ಯಾಟಿಂಗ್​ ಎಕಾನಮಿ ಕೂಡ ಹೊಂದಿದ್ದಾರೆ.

ಇಂದಿನ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಹೀಗಾಗಿ ಅಭಿಮಾನಿಗಳು ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಹವಾಮಾನ ಇಲಾಖೆ ವರದಿ ಪ್ರಕಾರ, ಪಂದ್ಯ ನಡೆಯುವ ವೇಳೆ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ. ಮಳೆಯಾಗುವ ಸಾಧ್ಯತೆ ಶೇ.1ರಷ್ಟಿದೆ. ತೇವಾಂಶವು 68% ಆಗಿರುತ್ತದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರಗೊಳ್ಳಲಿದೆ. ಈ ಕ್ರೀಡಾಂಗಣದಲ್ಲಿ ಒಟ್ಟು 34 ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 16 ಪಂದ್ಯಗಳನ್ನು ಗೆದ್ದಿದೆ.

Exit mobile version