Site icon Vistara News

Virat Kohli : ತಾಯಂದಿರ ದಿನ ಪತ್ನಿ ಹಾಗೂ ತಾಯಿಗೆ ಶುಭಾಶಯ ತಿಳಿಸಿದ ವಿರಾಟ್ ಕೊಹ್ಲಿ

Virat Kohli posted a touching tribute To mother Saroj and wife Anushka on Mother's Day

ಬೆಂಗಳೂರು: ತಾಯಿಯನ್ನು ಗೌರವಿಸಲು ಮೇ 14ರಂದು ನಾವು ತಾಯಂದಿರ ದಿನವನ್ನು ಆಚರಿಸುತ್ತೇವೆ. ಈ ದಿನದ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ತಮ್ಮ ತಾಯಿ ಸರೋಜ್‌ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಟ್ವೀಟ್‌ನಲ್ಲಿ ಹಲವಾರು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ, “ಅಮ್ಮಂದಿರ ದಿನದ ಶುಭಾಶಯಗಳು ಅನುಷ್ಕಾ ಶರ್ಮಾ” ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ʻಅಮ್ಮಂದಿರ ದಿನದ ಶುಭಾಶಯಗಳು ಸರ್ʼ ಎಂದು ಒಬ್ಬರು ಕಮೆಂಟ್‌ ಮಾಡಿದರೆ, ಇನ್ನೊಬ್ಬರು “ನಿಮಗೆ ತಾಯಂದಿರ ದಿನದ ಶುಭಾಶಯಗಳು ವಿರಾಟ್ ಸರ್. ಭಾರತಕ್ಕೆ ಶ್ರೇಷ್ಠ ಮಗನನ್ನು ನೀಡಿದ ನಿಮ್ಮ ತಾಯಿಗೆ ಧನ್ಯವಾದಗಳು” ಎಂದು ಬರೆದಿದ್ದಾರೆ. ಒಬ್ಬ ಅಭಿಮಾನಿ, “ಅಮ್ಮಂದಿರ ದಿನದ ಶುಭಾಶಯಗಳು ಗ್ರೇಟ್ ಮ್ಯಾನ್, ಗ್ರೇಟ್ ಕ್ಯಾಪ್ಟನ್, ಗ್ರೇಟ್ ಪ್ಲೇಯರ್, ಗ್ರೇಟ್ ಬ್ಯಾಟ್ಸ್‌ಮನ್. ನಾನು ನಿಮ್ಮ ದೊಡ್ಡ ಅಭಿಮಾನಿ. ನನ್ನ ಗ್ರೇಟ್ ಪ್ಲೇಯರ್ ವಿರಾಟ್ ಕೊಹ್ಲಿ” ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ; IPL 2023: ಜೈಸ್ವಾಲ್​ ಆಟಕ್ಕೆ ಫಿದಾ ಆದ ವಿರಾಟ್​ ಕೊಹ್ಲಿ

ವಿರಾಟ್‌ ಕೊಹ್ಲಿ ಟ್ವೀಟ್‌

‘ಸಿಹಿ ಮಾವಿನ ಹಣ್ಣಿಗೆ’ ಟಾಂಗ್​ ಕೊಟ್ಟಿದ್ದ ವಿರಾಟ್​ ಕೊಹ್ಲಿ

ಮುಂಬೈ ಇಂಡಿಯನ್ಸ್​ ವಿರುದ್ಧ ವಿರಾಟ್​ ಕೊಹ್ಲಿ(virat kohli) ಅವರು ಔಟಾದ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕುವ ಮೂಲಕ ಕೊಹ್ಲಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದ, ಲಕ್ನೋ ತಂಡದ ಆಟಗಾರ ನವೀನ್​ ಉಲ್​ ಹಕ್​ಗೆ(naveen ul haq) ಇದೀಗ ಕೊಹ್ಲಿಯೂ ಪರೋಕ್ಷವಾಗಿ ಟಾಂಗ್​ ನೀಡಿದ್ದರು. ಈ ಮೂಲಕ ಕೊಹ್ಲಿ ಇತ್ತೀಚೆಗೆ ಸುದ್ದಿಯಲ್ಲಿದ್ದರು.

ಐಪಿಎಲ್​ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್‌ ಗಳಿಸಿ ಜೇಸನ್‌ ಬೆಹ್ರನ್‌ಡ್ರಾಫ್‌ ಅವರಿಗೆ ವಿಕೆಟ್‌ ಒಪ್ಪಿಸಿದ್ದರು. ಈ ಪಂದ್ಯ ವೀಕ್ಷಿಸುತ್ತಿದ್ದ ನವೀನ್ ಉಲ್‌ ಹಕ್ ಅವರು ಮಾವಿನ ಹಣ್ಣುಗಳ ಫೋಟೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ‘ಮಾವಿನ ಹಣ್ಣುಗಳು ಬಹಳ ಸಿಹಿಯಾಗಿವೆ’ ಎಂದು ಬರೆದು ಕೊಹ್ಲಿಯನ್ನು ಪರೋಕ್ಷವಾಗಿ ಕೆಣಕ್ಕಿದ್ದರು.

Exit mobile version