ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ಮೈದಾನದಲ್ಲಿ ಎಷ್ಟೇ ಅಗ್ರೆಸಿವ್ ಆಗಿ ಕಂಡು ಬಂದರೂ ಕೂಡ ಯಾವುದೇ ತಂಡದ ಆಟಗಾರನಿಗೆ ಪ್ರೇಕ್ಷಕರು ಗೇಲಿ ಮಾಡುವ ವೇಳೆ ಮಧ್ಯ ಪ್ರವೇಶಿಸಿ ಗೌರವ ಸೂಚಿಸುವಂತೆ ಮಾಡಿದ ಹಲವು ನಿದರ್ಶನಗಳಿಗೆ. ಇದೀಗ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧದ ಪಂದ್ಯದಲ್ಲಿಯೂ ಇದೇ ರೀತಿಯ ಘಟನೆಯೊಂದು ಸಂಭವಿಸಿದೆ.
ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಈ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ(Hardik Pandya) ನೀಡಲಾಗಿತ್ತು. ಇದೇ ಸಿಟ್ಟಿನಲ್ಲಿ ರೋಹಿತ್ ಅಭಿಮಾನಿಗಳು ಪಾಂಡ್ಯ ಮೈದಾನಕ್ಕೆ ಬರುವ ವೇಳೆ ಅವರಿಗೆ ಪ್ರತಿ ಬಾರಿಯೂ ಕಾಟ ಕೊಡುತ್ತಿದ್ದರು. ಪಾಂಡ್ಯ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಡೆಸುವ ವೇಳೆ ಅಭಿಮಾನಿಗಳು ರೋಹಿತ್ ಅವರ ಹೆಸರನ್ನು ಜೋರಾಗಿ ಕೂಗುವ ಮೂಲಕ ಪಾಂಡ್ಯಗೆ ಟಾರ್ಚರ್ ನೀಡುತ್ತಿದ್ದರು.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪ್ರೇಕ್ಷಕರು ಹಾರ್ದಿಕ್ ಪಾಂಡ್ಯಗೆ ನಿಂದನೆ ಮಾಡಿದರು. ಹಾರ್ದಿಕ್ ಪಾಂಡ್ಯ ಕ್ರೀಸ್ ಗೆ ಬಂದಾಗ ನೆರದಿದ್ದ ಬಹು ಪಾಲು ಪ್ರೇಕ್ಷಕರು ರೋಹಿತ್ ಹೆಸರನ್ನು ಜೋರಾಗಿ ಕೂಗುತ್ತಿದ್ದರು. ಇದೇ ವೇಳೆ ಫೀಲ್ಡಿಂಗ್ ನಡೆಸುತ್ತಿದ್ದ ಆರ್ಸಿಬಿ ತಂಡದ ವಿರಾಟ್ ಕೊಹ್ಲಿ, ಈ ರೀತಿ ಮಾಡುವುದು ಸರಿಯಲ್ಲ, ಆಟಗಾರನಿಗೆ ಗೌರವ ನೀಡುವಂತೆ ಸನ್ನೆ ಮಾಡಿದರು, ಅಲ್ಲದೆ ಮುಂಬೈ ಇಂಡಿಯನ್ಸ್ ನಾಯಕನಿಗೆ ಹುರಿದುಂಬಿಸಲು ಜನರನ್ನು ಒತ್ತಾಯಿಸಿದರು. ಕೊಹ್ಲಿ ಅವರ ಈ ನಡೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ IPL 2024 Points Table: ಆರ್ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಮುಂಬೈ
🥹👏 Huge respect 👑 Kohli.#ViratKohli #MIvRCB #TATAIPL #IPL2024 #BharatArmy pic.twitter.com/bcfPg6Yxqe
— The Bharat Army (@thebharatarmy) April 11, 2024
ಪಾಂಡ್ಯ ಅವರು ಭಾರತ ತಂಡದ ಆಟಗಾರ ಅವರಿಗೆ ಗೌರವ ನೀಡಬೇಕೆಂದು ಕೊಹ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಸನ್ನೆಯ ಮೂಲಕ ತಿಳಿಸಿದರು. ಕೊಹ್ಲಿ ಅವರು ಈ ರೀತಿ ಹೇಳಿದ ಬಳಿಕ ಮೈದಾನದಲ್ಲಿ ಪರಿಸ್ಥಿತಿ ತಿಳಿಯಾಯಿತು. ಪಾಂಡ್ಯ ಚಿಂತೆಯಿಲ್ಲದೆ ಬ್ಯಾಟಿಂಗ್ ಮುಂದುವರಿಸಿದರು. ಈ ಹಿಂದೆ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅವರು ಭಾರತ ವಿರುದ್ಧ ಆಡುತ್ತಿರುವಾಗ ಅವರನ್ನು ಕಳ್ಳ ಕಳ್ಳ ಎಂದು ಕರೆಯುತ್ತಿದ್ದರು. ಈ ವೇಳೆ ಕೊಹ್ಲಿ ಅವರು ಸ್ಮಿತ್ ಬೆಂಬಲಕ್ಕೂ ಇದೇ ರೀತಿ ನಿಂತಿದ್ದರು. ನವೀನ್ ಉಲ್ ಹಕ್ ವಿಚಾರದಲ್ಲಿಯೂ ಕೊಹ್ಲಿ ಇದೇ ರೀತಿಯ ವರ್ತನೆ ತೋರಿದ್ದರು.
ಪಂದ್ಯ ಗೆದ್ದ ಮುಂಬೈ
ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರಯವಾರ ನಡೆದ ಬೃಹತ್ ಮೊತ್ತದ ಮೇಲಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ತಂಡ, ದಿನೇಶ್ ಕಾರ್ತಿಕ್(53*), ರಜತ್ ಪಾಟಿದಾರ್(50) ಮತ್ತು ನಾಯಕ ಫಾಫ್ ಡುಪ್ಲೆಸಿಸ್(61) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 196 ರನ್ ಬಾರಿಸಿತು. ದೊಡ್ಡ ಮೊತ್ತವನ್ನು ಬಹಳ ಜೋಶ್ನಿಂದಲೇ ಬೆನ್ನತ್ತಿದ ಮುಂಬೈ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಅವರ ಪ್ರಚಂಡ ಬ್ಯಾಟಿಂಗ್ ನೆರವಿನಿಂದ 15.3 ಓವರ್ಗಳಲ್ಲಿ ಕೇವಲ 3 ವಿಕೆಟ್ಗೆ 199 ರನ್ ಬಾರಿಸಿ ಗೆಲುವಿನ ನಗೆ ಬೀರಿತು.