Site icon Vistara News

WPL 2024: ಆರ್​ಸಿಬಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ; ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

Mumbai Indians Women, Royal Challengers Bangalore Women

ನವದೆಹಲಿ: ಮಹಿಳಾ ಪ್ರೀಮಿಯರ್​ ಲೀಗ್​(ಡಬ್ಲ್ಯುಪಿಎಲ್​)ನಲ್ಲಿ(WPL 2024) ಆರಂಭಿಕ 2 ಪಂದ್ಯಗಳನ್ನು ಸತತವಾಗಿ ಗೆದ್ದು ಆ ಬಳಿಕ ಸೋಲಿನ ಸುಳಿಗೆ ಸಿಲುಕಿದ ಸ್ಮೃತಿ ಮಂಧಾನ ನೇತೃತ್ವದ ಆರ್​ಸಿಬಿಗೆ(Royal Challengers Bangalore Women) ಪ್ಲೇ ಆಫ್ ಪ್ರವೇಶ ಪಡೆಯಬೇಕಿದ್ದರೆ ಇಂದು ನಡೆಯುವ ಮುಂಬೈ ಇಂಡಿಯನ್ಸ್(Mumbai Indians Women)​ ವಿರುದ್ಧದ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇದು ಆರ್​ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಪ್ಲೇ ಆಫ್ ಟಿಕೆಟ್​ ಪಡೆದು ಚಿಂತೆಯಿಂದ ಮುಕ್ತವಾಗಿದೆ. ಸದ್ಯ ಆರ್​ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಭಾನುವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ರನ್​ನಿಂದ ಆರ್​ಸಿಬಿ ಸೋಲು ಕಂಡಿತ್ತು. ಈ ಪಂದ್ಯ ಗೆಲ್ಲುತ್ತಿದ್ದರೆ ಆರ್​ಸಿಬಿ ಕೂಡ ಈಗಾಗಲೇ ಪ್ಲೇ ಆಫ್​ ಪ್ರವೇಶ ಪಡೆಯಬಹುದಿತ್ತು. ಏಕೆಂದರೆ ಆರ್​ಸಿಬಿ ಜತೆ ಪೈಪೋಟಿಯಲ್ಲಿದ್ದ ಯುಪಿ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಸೋಲು ಕಂಡಿತ್ತು.

ಇದನ್ನೂ ಓದಿ WPL 2024 : ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್​ ಜೈಂಟ್ಸ್​ಗೆ ಭರ್ಜರಿ ಗೆಲುವು

ಮುಂಬೈ ವಿರುದ್ಧ ಸೋತರೂ ಕೂಡ ಆರ್​ಸಿಬಿಗೆ ಪ್ಲೇ ಆಫ್​ ಪ್ರವೇಶ ಪಡೆಯಬಹುದು ಆದರೆ ದೊಡ್ಡ ಅಂತರದಿಂದ ಸೋಲು ಕಾಣಬಾರದು. ಯುಪಿ ಮತ್ತು ಆರ್​ಸಿಬಿ ತಲಾ 6 ಅಂಕಗಳು ಹೊಂದಿದ್ದರೂ ಕೂಡ ಆರ್​ಸಿಬಿ ರನ್​ರೇಟ್​ ಉತ್ತಮವಾಗಿದೆ. ಸಣ್ಣ ಅಂತರದಿಂದ ಸೋಲು ಕಂಡರೆ ರನ್​ರೇಟ್​ನಲ್ಲಿ ಭಾರೀ ಇಳಿಕೆಯಾಗದು. ಅದೃಷ್ಟ ಕೈಕೊಟ್ಟು ದೊಡ್ಡ ಅಂತರದ ಸೋಲು ಎದುರಾದರೆ ಆಗ ಯುಪಿ ತಂಡ ಪ್ಲೇ ಆಫ್ ಟಿಕೆಟ್​ ಪಡೆಯಲಿದೆ. ಒಟ್ಟಾರೆಯಾ್ಗಿ ಆರ್​ಸಿಬಿ ಗೆದ್ದರೆ ಯಾವುದೇ ಚಿಂತೆಯಿಲ್ಲ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​75210 (+0.918)
ಮುಂಬೈ ಇಂಡಿಯನ್ಸ್​​75210 (+0.343)
ಆರ್​ಸಿಬಿ​​7346 (+0.027)
ಯುಪಿ ವಾರಿಯರ್ಸ್​8356 (-0.371)
ಗುಜರಾತ್​ ಜೈಂಟ್ಸ್​7254 (-0.873)
Exit mobile version