Site icon Vistara News

WPL Points Table: ಮತ್ತೆ ಅಗ್ರಸ್ಥಾನ ವಶಪಡಿಸಿಕೊಂಡ ಡೆಲ್ಲಿ; ಆರ್​ಸಿಬಿ ಸ್ಥಿತಿ ಹೇಗಿದೆ?

Radha Yadav picked up three wickets in the middle overs

ಬೆಂಗಳೂರು: ಇಲ್ಲಿನ ನಡೆದ ಡಬ್ಲ್ಯುಪಿಎಲ್(WPL 2024)​ ಟೂರ್ನಿಯ 10ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಗುಜರಾತ್​ ಜೈಂಟ್ಸ್​(Gujarat Giants) ವಿರುದ್ಧ 25 ರನ್​ಗಳ ಗೆಲುವು ಸಾಧಿಸಿ ಹ್ಯಾಟ್ರಿಕ್​ ಗೆಲುವು ದಾಖಲಿಸಿದೆ. ಜತೆಗೆ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿಯೂ(WPL Points Table) ಪ್ರಾಬಲ್ಯ ಮರೆದಿದೆ.

ಡೆಲ್ಲಿ ತಂಡದ ಗೆಲುವಿನಿಂದ ಮುಂಬೈ ಇಂಡಿಯನ್ಸ್​ ಅಗ್ರಸ್ಥಾನದಿಂದ ಕೆಳಗಿಳಿದು 2ನೇ ಸ್ಥಾನ ಪಡೆದಿದೆ. ಉಳಿದಂತೆ ಯಾವುದೇ ಸ್ಥಾನಗಳ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆಯೇ ಯುಪಿ ವಾರಿಯರ್ಸ್ ಮತ್ತು ಆರ್​ಸಿಬಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ. ಡೆಲ್ಲಿ ಮತ್ತು ಮುಂಬೈಗೆ ತಲಾ 6 ಅಂಕ ಹೊಂದಿದ್ದರೂ, ಉತ್ತಮ ರನ್​ ರೇಟ್​ ಆಧಾರದಲ್ಲಿ ಡೆಲ್ಲಿ ಮುಂದಿದೆ. ಹೀಗಾಗಿ ಅಗ್ರಸ್ಥನ ಲಭಿಸಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಯುಪಿ ವಾರಿಯರ್ಸ್ ಗೆದ್ದರೆ ಮುಂಬೈ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಇದೆ.

ಇದನ್ನೂ ಓದಿ WPL 2024: ಡೆಲ್ಲಿ ಪರಾಕ್ರಮಕ್ಕೆ ತಲೆಬಾಗಿದ ಗುಜರಾತ್​; ಸತತ 4ನೇ ಸೋಲು


ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಡೆಲ್ಲಿ ಕ್ಯಾಪಿಟಲ್ಸ್​​4316 (+1.251)
ಮುಂಬೈ ಇಂಡಿಯನ್ಸ್4316 (+0.402)
ಯುಪಿ ವಾರಿಯರ್ಸ್​​3214 (+0.211)
ಆರ್​ಸಿಬಿ​​4224 (-0.015)
ಗುಜರಾತ್​ ಜೈಂಟ್ಸ್​4040 (-1.804)

ಸತತ ನಾಲ್ಕನೇ ಸೋಲು ಕಂಡ ಗುಜರಾತ್​​


ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ಸಂಘಟಿತ ಬ್ಯಾಟಿಂಗ್ ನಡೆಸಿ​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 163 ರನ್​ ಬಾರಿಸಿತು. ಜವಾಬಿತ್ತ ಗುಜರಾತ್ ಜೈಂಟ್ಸ್​ ತನ್ನ ಪಾಲಿನ ಆಟದಲ್ಲಿ 8 ವಿಕೆಟ್​ ಕಳೆದುಕೊಂಡು ಕೇವಲ 138 ರನ್​ ಮಾತ್ರ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಜತೆಗೆ ಸತತ 4ನೇ ಸೋಲು ಕಂಡ ಅಪಮಾನಕ್ಕೆ ಸಿಲುಕಿತು. ಡೆಲ್ಲಿ ಪರ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿದ ರಾಧಾ ಯಾದವ್​ ಮತ್ತು ಜೆಸ್ ಜೊನಾಸೆನ್ ತಲಾ ಮೂರು ವಿಕೆಟ್​ ಕಿತ್ತು ಮಿಂಚಿದರು. ಮೆಗ್​ ಲ್ಯಾನಿಂಗ್​ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 55 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಕ್ಯಾಪ್ಸಿ ಕೇವಲ 17 ಎಸೆತಗಳಿಂದ 27 ರನ್​ ಚಚ್ಚಿದರು

Exit mobile version