ಚೆನ್ನೈ: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಅವರು ಐಪಿಎಲ್(IPL 2024)ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸರ್ ಹೊಡೆಸಿಕೊಂಡ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ 4 ಓವರ್ ಎಸೆತ ಚಹಲ್ 34 ರನ್ ಬಿಟ್ಟುಕೊಟ್ಟು ವಿಕೆಟ್ ಲೆಸ್ ಎನಿಸಿಕೊಂಡರು. ಹೈದರಾಬಾದ್ ಬ್ಯಾಟರ್ಗಳಿಂದ ಸಿಕ್ಸರ್ ಚಚ್ಚಿಸಿಕೊಂಡ ಚಹಲ್(224 ಸಿಕ್ಸರ್) ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸರ್ ಚಚ್ಚಿಸಿಕೊಂಡ ಬೌಲರ್ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಪಿಯೂಷ್ ಚಾವ್ಲಾ(222) ಹೆಸರಿನಲ್ಲಿತ್ತು.
ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್ ಹೊಡಿಸಿಕೊಂಡ ಬೌಲರ್ಗಳ ಪಟ್ಟಿಯಲ್ಲಿ ಚಹಲ್ಗೆ(30)ಗೆ ಜಂಟಿ 2ನೇ ಸ್ಥಾನ. ಮತೋರ್ವ ಆಟಗಾರ ವನಿಂದು ಹಸರಂಗ(30). ಮೊಹಮ್ಮದ್ ಸಿರಾಜ್(31) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹೈದರಾಬಾದ್ ವಿರುದ್ಧ ವಿಕೆಟ್ ಕೀಳಲಿದ್ದರೂ ಕೂಡ ಚಹಲ್ 3 ಅಮೋಘ ಕ್ಯಾಚ್ ಹಿಡಿದು ಮಿಂಚಿದರು.
ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್ ಹೊಡೆಸಿಕೊಂಡ ಬೌಲರ್
ಮೊಹಮ್ಮದ್ ಸಿರಾಜ್ 31 (2022ರಲ್ಲಿ)
ಯಜುವೇಂದ್ರ ಚಹಲ್-30 (2024ರಲ್ಲಿ)
ವನಿಂದು ಹಸರಂಗ-30 (2022ರಲ್ಲಿ)
ಡ್ವೇನ್ ಬ್ರಾವೊ-29 (2018ರಲ್ಲಿ)
ತುಷಾರ್ ದೇಶ್ಪಾಂಡೆ-28(2023ರಲ್ಲಿ)
ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸರ್ ಚಚ್ಚಿಸಿಕೊಂಡ ಬೌಲರ್
ಯಜುವೇಂದ್ರ ಚಹಲ್-224 ಸಿಕ್ಸರ್
ಪಿಯೂಷ್ ಚಾವ್ಲಾ 222 ಸಿಕ್ಸರ್
ರವೀಂದ್ರ ಜಡೇಜಾ-206 ಸಿಕ್ಸರ್
ಆರ್ ಅಶ್ವಿನ್- 202 ಸಿಕ್ಸರ್
ಚಹಲ್ ಅವರು ಐಪಿಎಲ್ನಲ್ಲಿ ಒಟ್ಟು 205 ವಿಕೆಟ್ ಕಿತ್ತ ಸಾಧನೆ ಮಾಡಿ ಅತ್ಯಧಿಕ ವಿಕೆಟ್ ಸರದಾರ ಎನಿಸಿಕೊಂಡಿದ್ದಾರೆ. ಜೂನ್ನಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಸ್ಥಾನ ಕೂಡ ಪಡೆದಿದ್ದಾರೆ. ಚಹಲ್ ಪತ್ನಿ ಧನಶ್ರೀ ವರ್ಮಾ(Dhanashree Verma) ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಪತಿಗೆ ಶುಭ ಕೋರಿದ್ದರು.‘ಕಮ್ ಆನ್ ಯುಜಿ… ಹಿ ಈಸ್ ಬ್ಯಾಕ್ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ
ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂದು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ಈ ಜೋಡಿ ಮಾತ್ರ ಈ ಮಾತಿಗೆ ಕ್ಯಾರೆ ಎನ್ನದೆ ನಮ್ಮ ಸಂಸಾರದ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇಬ್ಬರೂ ಕೂಡ ಹಲವು ಬಾರಿ ವಿದೇಶ ಪ್ರವಾಸದಲ್ಲಿ ಜಾಲಿ ಮೂಡ್ನಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ 150ನೇ ಐಪಿಎಲ್ ಪಂದ್ಯವನ್ನಾಡಿದ ಚಹಲ್ಗೆ ಪತ್ನಿ ಭಾವುಕ ವಿಡಿಯೊ ಸಂದೇಶದ ಮೂಲಕ ಹಾರೈಸಿದ್ದರು. “ಹೇ ಯುಜಿ, ನಿಮ್ಮ 150ನೇ ಐಪಿಎಲ್ ಪಂದ್ಯಕ್ಕೆ ಅಭಿನಂದನೆಗಳು. ನಿವು ಈ ಹಿಂದೆ ಆಡಿದ ತಂಡಕ್ಕೆ ಮತ್ತು ಈಗ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್‌ಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ. ನೀವು ನಿಮ್ಮ ಆಟವನ್ನು ಹೇಗೆ ಆಡುತ್ತೀರಿ ಮತ್ತು ಪ್ರತಿ ಬಾರಿ ನೀವು ಕಮ್ಬ್ಯಾಕ್ ಮಾಡುವ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಯಾವುದೇ ಪಂದ್ಯ ಒತ್ತಡದಲ್ಲಿದ್ದಾಗಲೆಲ್ಲಾ ವಿಕೆಟ್ ತೆಗೆಯಬಲ್ಲ ಬೌಲರ್ ನೀವಾಗಿದ್ದೀರಿ. ನಾನು ನಿಮ್ಮ ದೊಡ್ಡ ಚೀರ್‌ಲೀಡರ್ ಮತ್ತು ನಾನು ಯಾವಾಗಲೂ 100 ಪ್ರತಿಶತದಷ್ಟು ನಿಮ್ಮನ್ನು ಬೆಂಬಲಿಸುತ್ತೇನೆ. ನಿಮ್ಮ 150 ನೇ ಐಪಿಎಲ್ ಪಂದ್ಯವನ್ನು ಆನಂದಿಸಿ” ಎಂದು ಶುಭ ಹಾರೈಸಿದ್ದರು. ವಿಡಿಯೊವನ್ನು ರಾಜಸ್ಥಾನ್ ರಾಯಲ್ಸ್(Rajasthan Royals) ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು.