ಮುಂಬಯಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ದೀಪಕ್ ಚಾಹರ್ (Deepak Chahar) ಪತ್ನಿ ಜಯಾ ಭಾರಧ್ವಾಜ್ಗೆ ಇಬ್ಬರು ದುಷ್ಕರ್ಮಿಗಳು 10 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಕುರಿತು ಆಗ್ರಾದ ಹರಿ ಪರ್ವತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೈದಾರಾಬಾದ್ ಮೂಲದ ಇಬ್ಬರು ಹಣ ಪಡೆದುಕೊಂಡು ವಾಪಸ್ ಕೊಟ್ಟಿಲ್ಲ ಎಂಬುದಾಗಿ ದೂರಿನಲ್ಲಿ ದಾಖಲಾಗಿದೆ.
ದ್ರುವ ಪರೀಕ್ ಹಾಗೂ ಕಮ್ಲೇಶ್ ಪರೀಕ್ ಮೋಸ ಮಾಡಿದ ಆರೋಪಿಗಳು. ಇವರಲ್ಲಿ ಒಬ್ಬ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೂ ಆಗಿದ್ದರು.
ದೂರಿನ ಪ್ರಕಾರ ಆರೋಪಿಗಳು 2022ರ ಅಕ್ಟೋಬರ್ 7ರಂದು 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಅದನ್ನು ಇನ್ನೂ ವಾಪಸ್ ಕೊಟ್ಟಿಲ್ಲ ಎಂದು ಹೇಳಲಾಗಿದೆ.
ದೀಪಕ್ ಚಾಹರ್ ಹಾಗೂ ಜಯ ಭಾರಧ್ವಾಜ್ 2022ರ ಜೂನ್ 2ರಂದು ವಿವಾಹವಾಗಿದ್ದರು. ಮೊದಲ ಬಾರಿಗೆ ನಾವಿಬ್ಬರು ಭೇಟಿಯಾದಾಗ ನಾನು ಮತ್ತು ನೀನು ಸರಿಯಾದ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಅನಿಸಿತ್ತು. ಇದು ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ. ಎಲ್ಲರೂ ನಮಗೆ ಆಶೀರ್ವಾದ ಮಾಡಬೇಕು ಎಂದು ಮದುವೆ ವೇಳೆ ದೀಪಕ್ ಚಾಹರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ : IND vs ZIM ODI | ಮಂಕಡ್ ಮಾಡಿಯೂ ಅಪೀಲ್ ಮಾಡದೇ ಸುಮ್ಮನೆ ಬಿಟ್ಟ ದೀಪಕ್ ಚಾಹರ್
ದೀಪಕ್ ಚಾಹರ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2021ರ ಅಕ್ಟೋಬರ್ 7ರಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಚಾಹರ್ ಅವರು ಜಯಾ ಭಾರಧ್ವಾಜ್ ಅವರಿಗೆ ಪ್ರಪೋಸ್ ಮಾಡಿದ್ದರು.