ಕ್ರಿಕೆಟರ್ Priya Punia @ 26 Pragati Bhandari 2 ವರ್ಷಗಳು ago ಭಾರತ ಮಹಿಳೆಯರ ಕ್ರಿಕೆಟ್ ತಂಡದ ಸದಸ್ಯೆ ಪ್ರಿಯಾ ಪುನಿಯಾ ತಮ್ಮ 7ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು. ಪ್ರಿಯಾ ಹುಡುಗಿ ಎಂಬ ಕಾರಣಕ್ಕೆ ಕ್ರಿಕೆಟ್ ಅಕಾಡೆಮಿಯಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ಆಗ ಆಕೆಯ ತಂದೆ ಮಗಳಿಗೆ ಕ್ರಿಕೆಟ್ ಕಲಿಸಲೇ ಬೇಕು ಎಂದು ಮನೆಯನ್ನೆ ಮಾರಿ ಜಮೀನು ಖರೀದಿಸಿ ಕ್ರಿಕೆಟ್ ಪಿಚ್ ಸಿದ್ಧಪಡಿಸಿಕೊಟ್ಟಿದ್ದರು. ತಂದೆ ಸುರೇಂದರ್ ಪೂನಿಯಾ ಅವರೇ ಪ್ರಿಯಾ ಪೂನಿಯಾಗೆ ಸ್ಫೂರ್ತಿ. ಕ್ರಿಕೆಟಿಗ ವಿರಾಟ್ ಕೊಹ್ಲಿ ರೋಲ್ ಮಾಡೆಲ್. 2019ರ ಅಕ್ಟೋಬರ್ 9ರಂದು ವಡೋದರಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ತಾನು ಸಾಕಿದ ಸಾಕುನಾಯಿಗಳನ್ನೆ ಬೆಸ್ಟ್ ಫ್ರೆಂಡ್ ಆಗಿ ಮಾಡಿಕೊಂಡಿರುವ ಪ್ರಿಯಾಗೆ ಜಿಮ್ ಮತ್ತು ಫಿಟ್ನೆಸ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಪ್ರಿಯಾ ಪೂನಿಯಾ ಅವರ ಜರ್ಸಿ ನಂಬರ್ 77 ಆಗಿದ್ದು ಸ್ಟೈಲಿಶ್ ಪ್ಲೇಯರ್ ಎಂಬ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ| Happy Birthday | ಸ್ಮೃತಿ ಮಂಧಾನಾ