Site icon Vistara News

ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸ್ಟಾರ್​ ಕ್ರಿಕೆಟಿಗರು

Pre-wedding of Anand Ambani

ಮುಂಬಯಿ: ಮುಕೇಶ್‌ ಅಂಬಾನಿ(Mukesh Ambani) ಪುತ್ರ ಅನಂತ್‌ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್‌ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಇಂದಿನಿಂದ ಪ್ರೀ ವೆಡ್ಡಿಂಗ್ ಸಮಾರಂಭ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯರು ಆಗಮಿಸುವುದರೊಂದಿಗೆ ಜಾಮ್​ ನಗರದಲ್ಲಿ (Jamnagar) ಸಂಭ್ರಮ ಜೋರಾಗಿದೆ. ಈ ಸಮಾರಂಭದಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್​, ಎಂ.ಎಸ್​ ಧೋನಿ, ರೋಹಿತ್ ಶರ್ಮ, ಜಹೀರ್ ಖಾನ್​, ಡ್ವೇನ್​ ಬ್ರಾವೋ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್​, ಸೂರ್ಯಕುಮಾರ್​ ಯಾದವ್​, ಕೃನಾಲ್ ಪಾಂಡ್ಯ , ರಶೀದ್ ಖಾನ್​, ಸ್ಯಾಮ್ ಕರನ್​, ಗ್ರೇಮ್ ಸ್ಮಿತ್. ಮೂರು ದಿನಗಳ ಕಾಲ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯಲಿದೆ.

ಅತಿಥಿಗಳಿಗಾಗಿ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಮಾ.1ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಸಮಾರಂಭಗಳು ನಡೆಯಲಿವೆ. ಸಮಾರಂಭದ ನೆನಪು ಸ್ಮರಣೀಯವಾಗಿಸಲು ವಿವಿಧ ರೀತಿಯ ಪಾಕ ಪದ್ದತಿಗಳಿರುವ 2,500 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಪೈಕಿ ಬೆಳಗ್ಗೆ ಉಪಾಹಾರಕ್ಕೆ 70 ಬಗೆಯ ತಿನಿಸಿನ ಆಯ್ಕೆಗಳಿರಲಿದ್ದು, ಮಧ್ಯಾಹ್ನದ ಭೋಜನಕ್ಕೆ 250 ಬಗೆ, ರಾತ್ರಿಯ ಊಟಕ್ಕೆ 250 ಬಗೆ ಖಾದ್ಯಗಳು ಇರಲಿವೆ. ಸಮಾರಂಭ ನಡೆಯುವ ಯಾವುದೇ ದಿನದಲ್ಲೂ ಯಾವುದೇ ಖಾದ್ಯ ಪುನರಾವರ್ತಿತವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ವಿಶೇಷವೆಂದರೇ ಈ 21 ಬಾಣಸಿಗರ ಪೈಕಿ ಒಬ್ಬರು ಮಾತ್ರ ಪುರುಷ ಬಾಣಸಿಗ, ಉಳಿದವರೆಲ್ಲಾ ಮಹಿಳೆಯರೇ ಆಗಿದ್ದಾರೆ.

ಮುಕೇಶ್‌ ಅಂಬಾನಿ ಕುಟುಂಬವು ಮುಂಬೈನಲ್ಲಿ ನೆಲೆಸಿದ್ದರೂ ಜಾಮ್‌ನಗರದಲ್ಲೇ ಏಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇದಕ್ಕೆ, ಅನಂತ್‌ ಅಂಬಾನಿ ಅಜ್ಜಿ, ಅಜ್ಜ ಹಾಗೂ ನರೇಂದ್ರ ಮೋದಿ (Narendra Modi) ಅವರ ನಂಟಿದೆ ಎಂಬುದು ಗಮನಾರ್ಹವಾಗಿದೆ.

ಇದನ್ನೂ ಓದಿ ಜಾಮ್‌ನಗರದಲ್ಲೇ ಅನಂತ್‌ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮ ಏಕೆ? ಅಜ್ಜಿ, ಮೋದಿ ನಂಟೇನು?

ಹೌದು, ಈ ಕುರಿತು ಅನಂತ್‌ ಅಂಬಾನಿ ಅವರೇ ಮಾತನಾಡಿದ್ದಾರೆ. “ಜಾಮ್‌ನಗರದಲ್ಲೇ ವಿವಾಹ ಪೂರ್ವ ಕಾರ್ಯಕ್ರಮ ಆಯೋಜಿಸಲು ಬೇರೆ ದೇಶಗಳ ಬದಲು ದೇಶದಲ್ಲಿಯೇ ಮದುವೆಯಾಗಿ (Wed In India) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ನನಗೆ ಸ್ಫೂರ್ತಿಯಾಯಿತು. ಇನ್ನು, ಜಾಮ್‌ನಗರವು ನನ್ನ ಅಜ್ಜಿಯ ಜನ್ಮಸ್ಥಳವಾಗಿದೆ. ಅಷ್ಟೇ ಅಲ್ಲ, ನನ್ನ ಅಜ್ಜ ಧೀರೂಭಾಯಿ ಅಂಬಾನಿ ಹಾಗೂ ಅಪ್ಪ ಮುಕೇಶ್‌ ಅಂಬಾನಿ ಅವರು ಜಾಮ್‌ನಗರದಿಂದಲೇ ಉದ್ಯಮ ಆರಂಭಿಸಿದ್ದಾರೆ. ಹಾಗಾಗಿ, ಜಾಮ್‌ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.

“ನಾನು ಇಲ್ಲಿಯೇ ಬೆಳೆದಿದ್ದೇನೆ. ನನ್ನ ಅಜ್ಜಿಯ ಜನ್ಮಭೂಮಿ, ನನ್ನ ಅಜ್ಜ, ತಂದೆಯ ಕರ್ಮಭೂಮಿಯಲ್ಲಿ ವಿವಾಹಪೂರ್ವ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂತಸ ಹಂಚಿಕೊಳ್ಳಲು ತೀರ್ಮಾನಿಸಿದೆವು. ನನ್ನ ತಂದೆಯವರು ಕೂಡ, ಇದು ನನ್ನೂರು, ಇಲ್ಲಿ ಕಾರ್ಯಕ್ರಮ ಆಯೋಜಿಸೋಣ ಎಂದರು. ಮೋದಿ ಅವರು ಕೂಡ, ದೇಶದ ಶ್ರೀಮಂತರು, ಉದ್ಯಮಿಗಳು ವಿದೇಶದಲ್ಲಿ ಮದುವೆಯಾಗುವ ಬದಲು, ದೇಶದಲ್ಲಿಯೇ ಮದುವೆಯಾಗಿ ಎಂಬುದಾಗಿ ಕರೆ ನೀಡಿದರು. ಇದೆಲ್ಲ ಕಾರಣಗಳಿಗಾಗಿ ಜಾಮ್‌ನಗರವನ್ನೇ ಆಯ್ಕೆ ಮಾಡಿಕೊಂಡಿವೆ” ಎಂದು ಹೇಳಿದರು.

Exit mobile version