ದುಬೈ: ಪೋರ್ಚ್‌ಗಲ್ ತಂಡ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಕೊನೆಗೂ ಸೌದಿ ಅರೇಬಿಯಾದ ಅಲ್ ನಾಸರ್ ಕ್ಲಬ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅವರು ಈ ಕ್ಲಬ್ ಪರ ಆಡಲಿದ್ದಾರೆ.
ರೊನಾಲ್ಡೊ ಜತೆ ಒಪ್ಪಂದ ಮಾಡಿದ ವಿಚಾರವನ್ನು ಅಲ್ ನಾಸರ್ ಕ್ಲಬ್ ಶುಕ್ರವಾರ ತಡರಾತ್ರಿ ಅಧಿಕೃತಗೊಳಿಸಿದೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡ ತೊರೆದಿದ್ದ ಬಳಿಕ ರೊನಾಲ್ಡೊ ಅಲ್ ನಾಸರ್ ಪರ ಆಡುತ್ತಾರೆ ಎಂದು ಸುದ್ದಿಯಾಗಿದ್ದರೂ ಅಧಿಕೃತಗೊಂಡಿರಲಿಲ್ಲ. ಇದೀಗ ಅಧಿಕೃತಗೊಂಡಿದೆ.
“ಐದು ಬರಿ ಬ್ಯಾಲನ್ ಡಿ’ವೋರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ರೊನಾಲ್ಡೊ 2025ರವರೆಗೆ ಕ್ಲಬ್ ಪರ ಆಡಲು ಒಪ್ಪಿಕೊಂಡಿದ್ದಾರೆ” ಎಂದು ಕ್ಲಬ್ ಹೇಳಿಕೆ ನೀಡಿದೆ. ರೊನಾಲ್ಡೊ ಜತೆ ಸುಮಾರು 4,400 ಕೋಟಿ. ರೂ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
“ಯೂರೋಪಿಯನ್ ಫುಟ್ಬಾಲ್‌ನಲ್ಲಿ ನಾನು ಇರಿಸಿಕೊಂಡಿದ್ದ ಎಲ್ಲ ಗುರಿಗಳನ್ನು ನಾನು ಗೆದ್ದಿದ್ದೇನೆ ಮತ್ತು ಇದೀಗ ಏಷ್ಯಾದಲ್ಲಿ ನನ್ನ ಅನುಭವ ಹಂಚಿಕೊಳ್ಳಲು ಇದು ಸಕಾಲ ಎಂದು ಭಾವಿಸುತ್ತೇನೆ” ಎಂದು ರೊನಾಲ್ಡೊ ಕ್ಲಬ್ ಸೇರಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
“ನನ್ನ ಹೊಸ ತಂಡದ ಸಹ ಆಟಗಾರರ ಜತೆ ಸೇರಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಹಾಗೂ ಕ್ಲಬ್‌ನ ಯಶಸ್ಸಿಗೆ ಪೂರ್ಣ ಪರಿಶ್ರಮ ವಹಿಸಲಿದ್ದೇನೆ. ಜತೆಗೆ ನನ್ನಲ್ಲಿನ ಫುಟ್ಭಾಲ್ ಕೌಶಲ್ಯವನ್ನು ಈ ತಂಡ ಆಟಗಾರರಿಗೆ ಹೇಳಿಕೊಡಲು ಬದ್ಧನಾಗಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.
ಕತಾರ್ ಫಿಫಾ ವಿಶ್ವ ಕಪ್ ಟೂರ್ನಿಯ ವೇಳೆ ರೊನಾಲ್ಟೊ ಮ್ಯಾಚೆಂಸ್ಟರ್ ಕ್ಲಬ್ ನನಗೆ ದ್ರೋಹ ಬಗೆದಿದೆ ಹಾಗೂ ಡಚ್ ಮ್ಯಾನೇಜರ್ ಎರಿಕ್ ಟೆನ್ ಹಗ್ ಅವರ ಬಗ್ಗೆ ಯಾವುದೇ ಗೌರವ ಇಲ್ಲ” ಎಂದು ಹೇಳಿಕೆ ನೀಡಿ ತಂಡದಿಂದ ಬೇರ್ಪಟ್ಟಿದ್ದರು.
ಇದನ್ನೂ ಓದಿ | Cristiano Ronaldo | ಸೋಲಿನ ಸುಳಿಗೆ ಸಿಲುಕಿ ರೊನಾಲ್ಡೊಗೆ ಸಮಾಧಾನ ಹೇಳಿದ ವಿರಾಟ್ ಕೊಹ್ಲಿ