Site icon Vistara News

Cristiano Ronaldo| ಏಷ್ಯಾದಲ್ಲೂ ದಾಖಲೆ ಬರೆಯುವುದೇ ನನ್ನ ಗುರಿ; ಕ್ರಿಸ್ಟಿಯಾನೊ ರೊನಾಲ್ಡೊ!

al nassr fc

ದುಬೈ: ಕಳೆದ ವಾರವಷ್ಟೇ ದಾಖಲೆ ಮೊತ್ತಕ್ಕೆ ಸೌದಿ ಅರೇಬಿಯಾದ ಅಲ್ ನಾಸರ್ ಫುಟ್ಬಾಲ್​ ಕ್ಲಬ್ ಸೇರಿರುವ ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಏಷ್ಯಾ ಭಾಗದಲ್ಲೂ ದಾಖಲೆ ಬರೆಯುವುದೇ ನನ್ನ ಗುರಿ ಎಂದು ಹೇಳಿದ್ದಾರೆ.

ಐದು ಬಾರಿ ಬ್ಯಾಲನ್ ಡಿ’ವೋರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ರೊನಾಲ್ಡೊ ಮ್ಯಾಚೆಂಸ್ಟರ್​ ಕ್ಲಬ್​ ತೊರೆದ ಬಳಿಕ ಅಲ್ ನಾಸರ್ ಕ್ಲಬ್​ ಪರ ಆಡಲು ಸುಮಾರು 4,400 ಕೋಟಿ. ರೂ ಮೌಲ್ಯದ ಒಪ್ಪಂದ ಮಾಡಿದ್ದರು. ಅದರಂತೆ ಅವರು 2025ರವರೆಗೆ ಕ್ಲಬ್ ಪರ ಆಡಲಿದ್ದಾರೆ. ಇದೀಗ ನೂತನ ಕಬ್ಲ್​ಗೆ ಆಗಮಿಸಿದ ರೊನಾಲ್ಡೊ, ತಮ್ಮನ್ನು ತಾವೇ ವಿಶಿಷ್ಟ ಆಟಗಾರ ಎಂದು ಹೇಳಿಕೊಂಡಿದ್ದಾರೆ.

ಸೌದಿಗೆ ಬಂದಿಳಿದ ರೊನಾಲ್ಡೊಗೆ ಅಲ್​ ನಾಸರ್​ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದರು. ಬಳಿಕ ಕ್ಲಬ್​ನ ಜೆರ್ಸಿ ತೊಟ್ಟು ರೊನಾಲ್ಡೊ ಪೋಟೊಗೆ ಫೋಸ್​ ನೀಡಿದರು. ಈ ವೇಳೆ ಮಾತನಾಡಿದ ಅವರು ಯುರೋಪ್‌ನಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದ್ದೇನೆ. ಇಲ್ಲೂ ಕೆಲವು ದಾಖಲೆಗಳನ್ನು ಮುರಿಯಲು ಬಯಸುತ್ತೇನೆ ಎಂದು ಹೇಳಿದರು.

“ಯುರೋಪ್, ಬ್ರೆಜಿಲ್‌ನಿಂದ ನನಗೆ ಆಫರ್ ಬಂದಿತ್ತು. ಆದರೆ ನಾನು ಇದನ್ನು ತಿರಸ್ಕರಿಸಿದೆ. ಏಕೆಂದರೆ ಈ ದೇಶದ ಸಂಸ್ಕೃತಿ ಮತ್ತು ಯಶಸ್ಸಿನ ಭಾಗವಾಗಲು ಉತ್ಸುಕನಾಗಿದ್ದೇನೆ. ಜತೆಗೆ ನಾನು ಇಲ್ಲಿ ಆಡಲು ಹೆಚ್ಚು ಆನಂದಿಸುತ್ತೇನೆ” ಎಂದು ರೊನಾಲ್ಡೊ ಹೇಳಿದರು.

ಇದನ್ನೂ ಓದಿ | Cristiano Ronaldo | ಅಧಿಕೃತವಾಗಿ ಅಲ್‌ ನಾಸರ್‌ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ!

Exit mobile version