Site icon Vistara News

Cristiano Ronaldo: ಗಿನ್ನಿಸ್​ ದಾಖಲೆಗೆ ಭಾಜನರಾದ ಕ್ರಿಸ್ಟಿಯಾನೊ ರೊನಾಲ್ಡೊ

Cristiano Ronaldo

ಲಿಸ್ಬನ್‌ (ಎಎಫ್‌ಪಿ): ಪೋರ್ಚುಗಲ್‌(Portugal) ಫುಟ್‌ಬಾಲ್‌ ತಂಡದ ಸ್ಟಾರ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರು ನೂತನ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. 200 ಅಂತಾರಾಷ್ಟ್ರೀಯ ಫುಟ್​ಬಾಲ್​ ಪಂದ್ಯವನ್ನಾಡಿದ ವಿಶ್ವದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಐಸ್‌ಲ್ಯಾಂಡ್‌ ವಿರುದ್ಧದ ಮಂಗಳವಾರ ತಡರಾತ್ರಿ ನಡೆದ ಯೂರೊ ಕಪ್‌ ಟೂರ್ನಿಯ ಅರ್ಹತಾ(European qualifying) ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಮೂಲಕ ಈ ಹಿರಿಮೆಗೆ ಪಾತ್ರರಾದರು. ವಿಶೇಷ ಎಂದರೆ ಈ ಸ್ಮರಣೀಯ ಪಂದ್ಯದಲ್ಲಿ ರೊನಾಲ್ಡೊ ಗೋಲ್​ ಕೂಡ ಬಾರಿಸಿ ತಂಡದ ಗೆಲುವುನಲ್ಲಿ ಪ್ರಮುಖ ಪಾತ್ರವಹಿಸಿದರು. ರೊನಾಲ್ಡೊ ಅವರು ಬಾರಿಸಿದ ಗೋಲಿನಿಂದಾಗಿ ಪೋರ್ಚುಗಲ್​ ತಂಡ ಐಸ್‌ಲ್ಯಾಂಡ್‌ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು.

ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 200 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎನಿಸಿಕೊಂಡ ರೊನಾಲ್ಡೊ ಅವರಿಗೆ ಪಂದ್ಯಕ್ಕೂ ಮುನ್ನ ಗಿನ್ನಿಸ್ ವಿಶ್ವದಾಖಲೆಯ(Guinness World Record) ಗೌರವ ನೀಡಿ ಸನ್ಮಾನಿಸಲಾಯಿತು. ಕಳೆದ ಮಾರ್ಚ್‌ನಲ್ಲಿ ರೊನಾಲ್ಡೊ ಅವರು ಕುವೈಟ್‌ನ ಫಾರ್ವರ್ಡ್ ಆಟಗಾರ ಬಾದರ್ ಅಲ್-ಮುತಾವಾ ಅವರ 196 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ದಾಖಲೆಯನ್ನು ಮುರಿದಿದ್ದರು.

ಇದನ್ನೂ ಓದಿ Cristiano Ronaldo: ಅಲ್​ ನಾಸರ್ ಪರ 4 ಗೋಲ್​ ಬಾರಿಸಿ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

ಐತಿಹಾಸಿ ಪಂದ್ಯವನ್ನಾಡಿದ ಬಳಿಕ ಮಾತನಾಡಿದ ರೊನಾಲ್ಡೊ, “ಇದು ನನಗೆ ನಂಬಲಾಗದ ಸಾಧನೆ. ನಿಜಕ್ಕೂ ಅದ್ಭುತವಾದ ಅನುಭವ. ನಾನು ಫುಟ್​ಬಾಲ್​ ಆರಂಭಿಸಿದ ದಿನ ಈ ಮೈಲುಗಲ್ಲು ತಲುಪುತ್ತೇನೆ ಎಂದು ಕಲ್ಪನೆಯೂ ಮಾಡಿರಲಿಲ್ಲ. ಅದರಲ್ಲೂ ಈ ಸ್ಮರಣೀಯ ಪಂದ್ಯದಲ್ಲಿ ಗೋಲ್​ ದಾಖಲಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿರುವುದು ಮತ್ತಷ್ಟು ಸಂತಸ ನೀಡಿದೆ” ಎಂದು ಹೇಳಿದರು. ಈ ಪಂದ್ಯದಲ್ಲಿ ಗೋಲ್​ ಬಾರಿಸುವ ಮೂಲಕ ರೊನಾಲ್ಡೊ ಅವರು ಪೋರ್ಚುಗಲ್ ಪರ 123ನೇ ಗೋಲುಗಳನ್ನು ಪೂರ್ತಿಗೊಳಿಸಿದರು.

Exit mobile version