Site icon Vistara News

IPL 2024 : ಮತ್ತೊಂದು ಮೈಲುಗಲ್ಲು ಸೃಷ್ಟಿಸಿದ ಚೆನ್ನೈ ಸೂಪರ್​ ಕಿಂಗ್ಸ್​​

CSK Team

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಟ್ವಿಟರ್​ನಲ್ಲಿ 10 ಮಿಲಿಯನ್ (ಒಂದು ಕೋಟಿ) ಫಾಲೋಯರ್ಸ್ ಹೊಂದಿರುವ ಮೊದಲ ಐಪಿಎಲ್ (IPL 2024) ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಎಸ್​ಕೆ ಅಧಿಕೃತ ಟ್ವಿಟರ್ ಹ್ಯಾಂಡಲ್ ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆಯನ್ನು ಸಲ್ಲಿಸಲು ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿದೆ. ಚೆನ್ನೈ ತಂಡ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ ಎಂಬುದಾಗಿ ಬರೆದುಕೊಂಡಿದೆ.

ಮುಂಬೈ ಇಂಡಿಯನ್ಸ್ 8.2 ಮಿಲಿಯನ್ (82 ಲಕ್ಷ) ಫಾಲೋಯರ್ಸ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 6.8 (68 ಲಕ್ಷ) ಮಿಲಿಯನ್ ಫಾಲೋಯರ್ಸ್ ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ (5.2 ಮಿಲಿಯನ್) ಮತ್ತು ಸನ್​ರೈಸರ್ಸ್​​ ಹೈದರಾಬಾದ್ (3.2 ಮಿಲಿಯನ್) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ಪಂಜಾಬ್ ಕಿಂಗ್ಸ್ (29 ಲಕ್ಷ​ ), ರಾಜಸ್ಥಾನ್ ರಾಯಲ್ಸ್ (27 ಲಕ್ಷ), ಡೆಲ್ಲಿ ಕ್ಯಾಪಿಟಲ್ಸ್ (25 ಲಕ್ಷ), ಲಕ್ನೋ ಸೂಪರ್ ಜೈಂಟ್ಸ್ (7.6 ಲಕ್ಷ) ಮತ್ತು ಕೊನೆಯದಾಗಿ ಗುಜರಾತ್ ಟೈಟಾನ್ಸ್ (5.2 ಲಕ್ಷ ) ನಂತರದ ಸ್ಥಾನಗಳಲ್ಲಿವೆ.

ಐಪಿಎಲ್ 2023 ರ ಫೈನಲ್​ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (ಜಿಟಿ ) ವಿರುದ್ಧ ಐದು ವಿಕೆಟ್​​ಗಳ ಜಯದೊಂದಿಗೆ ಸಿಎಸ್​ಕೆ ದಾಖಲೆಯ ಐದನೇ ಟ್ರೋಫಿಯನ್ನು ಗೆದ್ದುಕೊಂಡಿತು. ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಚೆನ್ನೈ 14 ಋತುಗಳಲ್ಲಿ ಐದನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

ಇದನ್ನೂ ಓದಿ : IPL 2024 : ಸಿಎಸ್​ಕೆ ತಂಡಕ್ಕೆ ಆಘಾತ; ಮುಂದಿನ ಆವೃತ್ತಿಯಲ್ಲಿ ಆಡುವುದಿಲ್ಲ ಎಂದ ಇಂಗ್ಲೆಂಡ್​ ಆಲ್​ರೌಂಡರ್​

2010ರಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಚೆನ್ನೈ, 2011ರಲ್ಲಿ ಪ್ರಶಸ್ತಿ ಜಯಿಸಿತ್ತು. ಅವರು 2016 ಮತ್ತು 2017 ರಲ್ಲಿ ಎರಡು ವರ್ಷಗಳ ಕಾಲ ತಂಡಕ್ಕೆ ನಿಷೇಧ ಹೇರಲಾಯಿತು. 2018ರಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ಗೆದ್ದರು. ಅವರು 2020 ರಲ್ಲಿ ಕೆಟ್ಟ ಋತುವನ್ನು ಅನುಭವಿಸಿತು. 2021 ರಲ್ಲಿ ತಮ್ಮ ನಾಲ್ಕನೇ ಪ್ರಶಸ್ತಿಯೊಂದಿಗೆ ಪುಟಿದೆದ್ದಿತು. 2022ರಲ್ಲಿ ಮತ್ತೆ ಕೆಟ್ಟ ಋತು ಎದುರಿಸಿತು. ಬಳಿಕ 2023 ರಲ್ಲಿ ತಮ್ಮ ಐದನೇ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿತು.

Exit mobile version