ಮುಂಬಯಿ: ಋತುರಾಜ್ ಗಾಯಕ್ವಾಡ್ ಐಪಿಎಲ್ 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 16 ಪಂದ್ಯಗಳನ್ನಾಡಿರುವ 26ರ ಹರೆಯದ ಈ ಬಲಗೈ ಬ್ಯಾಟರ್ 590 ರನ್ ಬಾರಿಸಿ 5ನೇ ಬಾರಿಗೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿರುವ ಅವರು ಮದುವೆಯಾಗುತ್ತಿದ್ದಾರೆ. ಜೂನ್ 3ರಂದು ಅವರ ವಿವಾಹ ಕಾರ್ಯಕ್ರಮ ನಡೆಯಲಿದೆ. ಈ ಸಾಧಕ ಕ್ರಿಕೆಟರ್ನನ್ನು ವರಿಸಲಿರುವ ಅದೃಷ್ಟವಂತೆ ಯುವತಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಇತ್ತೀಚಿನ ದಿನಗಳಲ್ಲಿ ಅವರು ನೀಡುತ್ತಿರುವ ಅದ್ಭುತ ಬ್ಯಾಟಿಂಗ್ ಹಿನ್ನೆಲೆಯಲ್ಲಿ ಜೂನ್ 7ರಿಂದ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದರು. ಆದರೆ ಅವರು ಜೂನ್ 3 ರಂದು ಮದುವೆ ಇರುವ ಕಾರಣ ಸೂಕ್ತ ಸಮಯಕ್ಕೆ ಸರಿಯಾಗಿ ಯುಕೆಗೆ ಹೋಗಲು ಸಾಧ್ಯವಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ.
Meet Woman Cricketer Utkarsha Pawar 💛 To Be Wife of Ruturaj Gaikwad 💛 pic.twitter.com/OmVw2Z4VzU
— Junaid Khan (@JunaidKhanation) May 30, 2023
ಋತುರಾಜ್ ಅವರ ಕೈ ಹಿಡಿಯಲಿರುವ ಯುವತಿ ಐಪಿಎಲ್ ಫೈನಲ್ ಸಮಯದಲ್ಲಿ ಅವರು ಅಹಮದಾಬಾದ್ನಲ್ಲಿ ಕಾಣಿಸಿಕೊಂಡಿದ್ದರು. ಗಾಯಕ್ವಾಡ್ ಮತ್ತು ಸಿಎಸ್ಕೆ ತಂಡವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಹುರಿದುಂಬಿಸಿದ್ದರು. ಅವರೇ ಮಹಿಳಾ ಕ್ರಿಕೆಟರ್ ಉತ್ಕರ್ಷ ಪವಾರ್. ಅವರಿಬ್ಬರು ಪಂದ್ಯದ ಬಳಿಕ ಜತೆಯಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಸಿಎಸ್ಕೆ ನಾಯಕ ಧೋನಿಯೊಂದಿಗೆ ಫೋಟೊ ತೆಗಿಸಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ಕರ್ಷ ಪವಾರ್ ಮತ್ತು ಋತುರಾಜ್ ಗಾಯಕ್ವಾಡ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಇದೀಗ ಅವರು ಮದುವೆಯಾಗಲು ನಿರ್ಧರಿಸಿದ್ದಾರೆ. ಮಹಾರಾಷ್ಟ್ರ ಹಿರಿಯ ಮಹಿಳೆಯರ ತಂಡದದಲ್ಲಿ ಆಡಿದ್ದ ಉತ್ಕರ್ಷ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಕೆಲವು ಅಭಿಮಾನಿಗಳು ಸಂಕ್ಷಿಪ್ತ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಇದನ್ನೂ ಓದಿ : IPL 2023 : ರವೀಂದ್ರ ಜಡೇಜಾ ಬಿಜೆಪಿ ಕಾರ್ಯಕರ್ತ, ಅದಕ್ಕೆ ಚೆನ್ನೈಗೆ ಗೆಲವು ತಂದುಕೊಟ್ಟರು ಎಂದ ಅಣ್ಣಾಮಲೈ!
1998 ರಲ್ಲಿ ಜನಿಸಿದ ಉತ್ಕರ್ಷ ಪವಾರ್ ದೇಶಿಯ ಕ್ರಿಕೆಟ್ನಲ್ಲಿ ಮಹಾರಾಷ್ಟ್ರ ತಂಡದಲ್ಲಿ ಆಡುತ್ತಿದ್ದಾರೆ. ಅವರು ಮಹಾರಾಷ್ಟ್ರ ತಂಡದ ಆಲ್ರೌಂಡರ್. ವೇಗದ ಬೌಲರ್ ಹಾಗೂ ಬಲಗೈ ಬ್ಯಾಟರ್. ಕೆಲವು ತಿಂಗಳ ಹಿಂದೆ ಅವರು ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಗಾಯಕ್ವಾಡ್ ಪುರುಷರ ದೇಶೀಯ ಕ್ರಿಕೆಟ್ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಾರೆ.
ಉತ್ಕರ್ಷ ಅವರು ಸದ್ಯ ಅವರು ಪುಣೆಯ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಆ್ಯಂಡ್ ಫಿಟ್ನೆಸ್ ಸೈನ್ಸಸ್ (ಐಎನ್ಎಫ್ಎಸ್) ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.