Site icon Vistara News

Tushar Deshpande: ಸ್ಕೂಲ್​ ಕ್ರಶ್ ಜತೆ ಸಪ್ತಪದಿ ತುಳಿದ ತುಷಾರ್ ದೇಶಪಾಂಡೆ

ಮುಂಬಯಿ: ಐಪಿಎಲ್​ ಲೀಗ್​ನ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಧ್ಯಮ ಕ್ರಮಾಂಕದ ವೇಗಿ ತುಷಾರ್ ದೇಶಪಾಂಡೆ(Tushar Deshpande) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಬಾಲ್ಯದ ಶಾಲಾ ದಿನಗಳ ಗೆಳತಿ ನಭಾ ಗಡಂವಾರ್(Nabha Gaddamwar) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತುಷಾರ್‌ ದೇಶಪಾಂಡೆ ಹಾಗೂ ನಭಾ ಅವರ ವಿವಾಹ ಸಮಾರಂಭ ಡಿಸೆಂಬರ್‌ 21 ರಂದು ನಡೆದಿತ್ತು. ಮದುವೆ ಮುಗಿದು 2 ದಿನ ಕಳೆದ ಬಳಿಕ ಅವರು ತಮ್ಮ ಮದುವೆಯ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಎರಡು ಹೃದಯಗಳ ಸಂಗಮದೊಂದಿಗೆ ನವ ಜೀವನ ಆರಂಭಗೊಂಡಿದೆ. ಜೈ ಭಜರಂಗಬಲಿ” ಎಂದು ಬರೆದುಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ಕಳೆದ ಜೂನ್‌ನಲ್ಲಿ ನಡೆದಿತ್ತು. ಕೆಂಪು ಚೆಂಡಿನ ಒಳಗಿದ್ದ ಉಂಗುರಗಳನ್ನು ಪರಸ್ಪರ ತೊಡಿಸುವ ಮೂಲಕ ವಿಭಿನ್ನ ಶೈಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.


ಥಾಣೆಯ ಕಲ್ಯಾಣ ಪ್ರಾಂತ್ಯದಲ್ಲಿ ನಡೆದಿದ್ದ ತುಷಾರ್ ದೇಶಪಾಂಡೆ ಹಾಗೂ ನಭಾ ಗಡಂವರ್ ಅವರ ವಿವಾಹ ಸಮಾರಂಭದಲ್ಲಿ ಕ್ರಿಕೆಟಿಗರಾದ ಪ್ರಶಾಂತ್ ಸೋಲಂಕಿ, ಧವಳ್ ಕುಲಕರ್ಣಿ, ಭವನ್ ಟಕ್ಕರ್, ಶಿವಂ ದುಬೆ ಸೇರಿದಂತೆ ಕೆಲವು ಕ್ರಿಕೆಟಿಗರು ಭಾಗಿಯಾಗಿದ್ದರು. ನವ ವಧು- ವರನಿಗೆ ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ಶುಭ ಹಾರೈಸಿದೆ.

ದೇಶಪಾಂಡೆ ಈ ವರ್ಷ ನಡೆದಿದ್ದ ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಪರ 16 ಪಂದ್ಯಗಳನ್ನು ಆಡಿ 21 ವಿಕೆಟ್​​ಗಳನ್ನು ಉರುಳಿಸಿದ್ದರು. ತಂಡದ ಪರವಾಗಿ ಅತ್ಯಂತ ಸುಧಾರಿತ ಬೌಲರ್ ಎನಿಸಿಕೊಂಡಿದ್ದರು. ಗಾಯಗೊಂಡ ಮುಕೇಶ್ ಚೌಧರಿ ಬದಲಿಗೆ ತುಷಾರ್​​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಕ್ಕಿತ್ತು. ಕೊಟ್ಟ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದರು.

ಇದನ್ನೂ ಓದಿ IPL 2024: ಹಾರ್ದಿಕ್ ಪಾಂಡ್ಯ ಅತಿರೇಕದ ವರ್ತನೆ ಸರಿ ಎನಿಸಿರಲಿಲ್ಲ ಎಂದ ಶಮಿ


ಯಾರಿವರು ನಭಾ ಗಡಂವಾರ್​​?

ನಭಾ ಗಡಂವಾರ್ ಒಬ್ಬ ಭಾರತೀಯ ಕಲಾ ಶಿಕ್ಷಕಿ . ಅವರು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್​ನಲ್ಲಿ ಜನಿಸಿದ್ದಾರೆ. ತುಷಾರ್ ತನ್ನ ಶಾಲಾ ದಿನಗಳಿಂದಲೂ ಅವಳ ಮೇಲೆ ಕ್ರಶ್ ಹೊಂದಿದ್ದರು. ನಭಾ ಇನ್​ಸ್ಟಾಗ್ರಾಮ್​ ಪೇಜ್​ ಮೇಳೆ ಪೇಂಟ್​ ಮಾಡಿರುವ ಪ್ಯಾಲೆಟ್ ಅನ್ನು ಹೊಂದಿದ್ದಾರೆ. ಅವರು ಕೈಯಿಂದ ರಚಿಸಿದ ವರ್ಣಚಿತ್ರಗಳು ಮತ್ತು ಭಿತ್ತಿಚಿತ್ರಗಳನ್ನು ಮಾರಾಟ ಮಾಡುತ್ತಾರೆ.

ಅವರು ಕಲ್ಯಾಣ್​ನಲ್ಲಿ 10 ನೇ ತರಗತಿಯವರೆಗೆ ಮತ್ತು ಮುಂಬೈನಲ್ಲಿ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ. ಅವರು ಕಲಾ ಬೋಧನಾ ವಿಷಯದಲ್ಲಿ ಡಿಪ್ಲೊಮಾ ಕೂಡ ಹೊಂದಿದ್ದಾರೆ. ಆ ಬಳಿಕ ನಭಾ ಕಲಾ ಶಿಕ್ಷಕಿಯ ವೃತ್ತಿ ಆರಂಭಿಸಿದ್ದರು.. ಅವರು ವಿವಿಧ ಶಾಲೆಗಳಲ್ಲಿ ಕಲೆಗಳನ್ನು ಕಲಿಸಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ಗೆ ಚೆನ್ನೈ ತಂಡ

ಎಂ.ಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾನಾ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.

Exit mobile version