ಮುಂಬಯಿ : ಚೆನ್ನೈ ಸೂಪರ್ ಕಿಂಗ್ಸ್ 2020ನೇ ಆವೃತ್ತಿಯ ಐಪಿಎಲ್‌ನಲ್ಲಿ ಏಳನೇ ಸ್ಥಾನ ಪಡೆದುಕೊಂಡು ಹೀನಾಯ ಪ್ರದರ್ಶನ ನೀಡಿತ್ತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಸಾಧನೆ ಮಾಡಿತ್ತು. ಸತತವಾಗಿ ಸೋಲಿನ ಸುಳಿಗೆ ಸಿಲುಕಿದ್ದ ಚೆನ್ನೈ ತಂಡ, ಬೌಂಡರಿ ಲೈನ್ ಅನ್ನು ಚಿಕ್ಕದು ಮಾಡುವಂತೆ ಆಯೋಜಕರಿಗೆ ಮನವಿ ಮಾಡಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಅದಕ್ಕೆ ಇತರ ತಂಡದ ಆಟಗಾರರ ಬೆಂಬಲವೂ ಸಿಕ್ಕಿತ್ತು ಎನ್ನಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಹುತೇಕ ಸದಸ್ಯರು ೩೦ ವರ್ಷ ದಾಟಿದವರಾಗಿದ್ದರು. ಅಂತೆಯೇ ಆರಂಭದಲ್ಲಿ ಸತತ ಆರು ಬಾರಿ ರನ್ ಚೇಸಿಂಗ್‌ಗೆ ಅವಕಾಶ ಪಡೆದುಕೊಂಡಿತ್ತು. ದುಬೈನ ಉಷ್ಣತೆಗೆ ಆಟಗಾರರು ಬಳಲಿ ಹೋಗುತ್ತಿದ್ದರು. ಫೀಲ್ಡಿಂಗ್ ಮಾಡಲು ಸಾಧ್ಯವಾಗದೇ ಬಸವಳಿದಿದ್ದರು. ಈ ಕಾರಣಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೌಂಡರಿ ಲೈನ್ ಚಿಕ್ಕದು ಮಾಡಿ ರನ್‌ಗೆ ಕಡಿಮೆ ಓಡುವಂತೆ ಮಾಡಿಕೊಡಲು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ರಾಜಸ್ಥಾನ್ ತಂಡದ ಸಂಜು ಸ್ಯಾಮ್ಸನ್ ಹಾಗೂ ಸ್ಟೀವ್ ಸ್ಮಿತ್ ಕೂಡ ಬೌಂಡರಿ ಲೈನ್ ಚಿಕ್ಕದು ಮಾಡುವ ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತಾಪಕ್ಕೆ ಒಪ್ಪಿಗೆ ಕೊಟ್ಟಿದ್ದರು ಎನ್ನಲಾಗಿದೆ. ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಕೂಡ ಆಟಗಾರರ ಬೇಡಿಕೆಗೆ ಸಹಮತ ಸೂಚಿಸಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ | IPL 2023| ಇಸ್ತಾಂಬುಲ್‌ಗೆ ಹೋದರೆ ಐಪಿಎಲ್ ಬಾಯ್ಕಾಟ್; ಬಿಸಿಸಿಐಗೆ ಅಭಿಮಾನಿಗಳ ಬೆದರಿಕೆ