Site icon Vistara News

IPL 2024 : ಸಿಎಸ್​ಕೆಗೆ ಮುಂದಿನ ಆವೃತ್ತಿಯಲ್ಲೂ ಧೋನಿಯೇ ನಾಯಕ, ಫುಲ್​ ಲಿಸ್ಟ್​ ಬಿಡುಗಡೆ

MS Dhoni

ಬೆಂಗಳೂರು: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​​ಕೆ) ತನ್ನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ದಾಖಲೆಯ ಆರನೇ ಬಾರಿಗೆ ಟ್ರೋಫಿಯನ್ನು ಗೆಲ್ಲುವ ಭರವಸೆಯೊಂದಿಗೆ, ಎಂಎಸ್ ಧೋನಿ ಅವರನ್ನೇ ನಾಯಕರನ್ನಾಗಿ ಫ್ರಾಂಚೈಸಿ ಮುಂದುವರಿಸಿದೆ. ಈ ಮೂಲಕ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುವುದು ಖಚಿತವಾಗಿದೆ. ಅವರು ಆಡುತ್ತಾರೋ, ಇಲ್ಲವೊ ಎಂಬ ಗೊಂದಲಕ್ಕೂ ತೆರೆ ಬಿದ್ದಿದೆ. ಇದೇ ವೇಳೆ ತಂಡವು ತಮ್ಮ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ , ಪ್ರಿಟೋರಿಯಸ್, ಅಂಬಾಟಿ ರಾಯುಡು ಮತ್ತು ತಂಡದ ಇತರ ಆಟಗಾರರೊಂದಿಗೆ ಬಿಡುಗಡೆ ಮಾಡಿದೆ. ಗಾಯಗೊಂಡ ಆಟಗಾರರನ್ನು ಬಿಡುಗಡೆ ಮಾಡುವುದು ಮತ್ತು ಮುಂಬರುವ ವರ್ಷಗಳಲ್ಲಿ ಯೆಲ್ಲೋ ಆರ್ಮಿಗಾಗಿ ಯುವಕರ ಮೇಲೆ ಹೂಡಿಕೆ ಮಾಡುವುದು ಸಿಎಸ್​ಕೆಯ ಮುಖ್ಯ ಗುರಿಯಾಗಿದೆ.

ತಂಡ ಪ್ರಾರಂಭವಾದಾಗಿನಿಂದ ಸಿಎಸ್​ಕೆ ಭಾಗವಾಗಿರುವ ಧೋನಿಗೆ ಫ್ರಾಂಚೈಸಿ 2023 ರವರೆಗೆ 12 ಕೋಟಿ ರೂ. ಮೊಣಕಾಲು ಗಾಯದ ವಿರುದ್ಧ ಹೋರಾಡುತ್ತಿದ್ದರೂ, ವಿಕೆಟ್ ಕೀಪರ್-ಬ್ಯಾಟರ್​ ಮತ್ತೊಮ್ಮೆ ಯೆಲ್ಲೋವ್ಸ್ ಪರ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಲೀಗ್​ನಿಂ ನಿವೃತ್ತಿ ಹೊಂದುವ ವದಂತಿಗಳನ್ನು ಬಲವಾಗಿ ತಳ್ಳಿಹಾಕಿದ್ದಾರೆ.

ಬೆನ್ ಸ್ಟೋಕ್ಸ್, ಡ್ವೇನ್ ಪ್ರಿಟೋರಿಯಸ್, ಅಂಟಾಟಿ ರಾಯುಡು ಅವರಲ್ಲದೆ ಕೈಲ್ ಜೇಮಿಸನ್, ಮಗಾಲ, ಸೇನಾಪತಿ, ಭಗತ್ ಮತ್ತು ಆಕಾಶ್ ಅವರನ್ನು ಐಪಿಎಲ್ 2024 ಹರಾಜಿಗೆ ಮುಂಚಿತವಾಗಿ ಸಿಎಸ್​ಕೆ ಬಿಡುಗಡೆ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಒಟ್ಟು 8 ಆಟಗಾರರನ್ನು ಬಿಡುಗಡೆ ಮಾಡಿದೆ. ತಂಡದಲ್ಲಿ ಒಟ್ಟಾರೆ 6 ಸ್ಲಾಟ್​ಗಳು ಉಳಿದಿದ್ದು, ಅದರಲ್ಲಿ 3 ವಿದೇಶಿ ಆಟಗಾರರಿಗೆ ಕಾಯ್ದಿರಿಸಲಾಗಿದೆ.

ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್​ಗೆ ದೊಡ್ಡ ನಷ್ಟವಾಗಲಿದೆ. ಕೆಲಸದ ಹೊರೆ ನಿರ್ವಹಣೆ ಮತ್ತು ಫಿಟ್ನೆಸ್​ ಕಾರಣ ನೀಡಿ ಇಂಗ್ಲೆಂಡ್ ಆಟಗಾರರು ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ. ಗಾಯಗೊಂಡ ಮೊಣಕಾಲಿನ ಸಮಸ್ಯೆ ಪರಿಹಾರಕ್ಕಾಗಿ ಸ್ಟೋಕ್ಸ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಯೆಲ್ಲೋ ಆರ್ಮಿ ಐಪಿಎಲ್ 2023 ರಲ್ಲಿ ಈ ಸ್ಟಾರ್ ಆಟಗಾರನನ್ನು 16.25 ಕೋಟಿ ರೂ.ಗೆ ಖರೀದಿಸಿತ್ತು. ಇದೀಗ ಫ್ರಾಂಚೈಸಿ ಪರ್ಸ್​ನಲ್ಲಿ 32.2 ಕೋಟಿ ರೂ. ಉಳಿದಿದೆ. ಈ ಹಣವನ್ನು ಯುವ ಆಟಗಾರರ ಮೇಲೆ ಹೂಡಿಕೆ ಮಾಡಲಿದೆ.

ಇದನ್ನೂ ಓದಿ : MS Dhoni : ಹಾಕಿರುವ ಟಿಶರ್ಟ್​​ನಲ್ಲಿಯೇ ಅಭಿಮಾನಿಯ ಬೈಕ್​ ಒರೆಸಿ ಆಟೋಗ್ರಾಫ್​ ಹಾಕಿದ ಧೋನಿ

ಸಿಎಸ್ಕೆ ಬಿಡುಗಡೆ ಮಾಡಿದ ಆಟಗಾರರು:

ಬೆನ್ ಸ್ಟೋಕ್ಸ್, ಡ್ವೇನ್ ಪ್ರಿಟೋರಿಯಸ್, ಅಂಬಟಿ ರಾಯುಡು, ಕೈಲ್ ಜೇಮಿಸನ್, ಮಾಗ್ಲಾ, ಸೇನಾಪತಿ, ಭಗತ್ ಮತ್ತು ಆಕಾಶ್

ಸಿಎಸ್ಕೆ ಉಳಿಸಿಕೊಂಡ ಆಟಗಾರರು

ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥಿಶಾ ಪತಿರಾನಾ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ತಿಕ್ಷನ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್.

Exit mobile version