Site icon Vistara News

MS Dhoni: ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ ಧೋನಿ; ವಿಡಿಯೊ ವೈರಲ್​

MS Dhoni

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಧೋನಿ ಬ್ಯಾಟಿಂಗ್​ ಅಭ್ಯಾಸ ನಡೆಸಲು ಮೈದಾನಕ್ಕೆ ಬರುತ್ತಿರುವ ವಿಡಿಯೊ ವೈರಲ್​ ಆಗಿದೆ.

ಎರಡು ದಿನಗಳ ಹಿಂದಷ್ಟೇ ಧೋನಿ ಚೆನ್ನೈಗೆ ಬಂದಿಳಿದಿದ್ದರು. ರೆಟ್ರೊ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಧೋನಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ತಂಡ ಕ್ಯಾಂಪ್​ ಸೇರುವವರೆಗಿನ ಎಲ್ಲ ದೃಶ್ಯಗಳನ್ನು ಸೆರೆಹಿಡಿದ ವಿಶೇಷ ವಿಡಿಯೊವನ್ನು ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​, ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿತ್ತು. ಜತೆಗೆ ಈ ವಿಡಿಯೊಗೆ ‘ಜನಪ್ರಿಯ ಬೇಡಿಕೆಯಲ್ಲಿ! ಲಿಯೋ ಗ್ಯಾಲರಿಯಿಂದ ಬರುವ ಸಂಪೂರ್ಣ ವೀಡಿಯೊ ಇಲ್ಲಿದೆ’ ಎಂದು ಬರೆದುಕೊಂಡಿತ್ತು. ಇದೀಗ ಧೋನಿ ಬ್ಯಾಟಿಂಗ್​ ಅಭ್ಯಾಸಕ್ಕೆ ತೆರೆಳುವ ವಿಡಿಯೊವನ್ನು ಕೂಡ ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ.

ಧೋನಿ ಅವರು ಈ ವಿಡಿಯೊದರಲ್ಲಿ ಚೆನ್ನೈ ತಂಡದ ನೂತನ ಜೆರ್ಸಿಯಲ್ಲಿ 2 ಬ್ಯಾಟ್​ ಹಿಡಿದು ಮೈದಾನಕ್ಕೆ ನಡೆದು ಬರುತ್ತಿರುವ ವಿಡಿಯೊವನ್ನು ಕಾಣಬಹುದು. ‘ತಲಾ’ ಈಸ್​ ಬ್ಯಾಕ್​ ಎಂದು ಈ ವಿಡಿಯೊಗೆ ಸಿಎಸ್​ಕೆ ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

ಆರ್​ಸಿಬಿ ಮೊದಲ ಎದುರಾಳಿ


ಮಾರ್ಚ್​ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. 

ಇದನ್ನೂ ಓದಿ IPL 2024: ಆರ್​ಸಿಬಿಗೆ ಮತ್ತೆ ಆತಂಕ ಸೃಷ್ಟಿಸಿದ ರಜತ್ ಪಾಟಿದಾರ್ ಗಾಯ

ಕೊನೆಯ ಐಪಿಎಲ್​


ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ(IPL 2024) ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. 2 ದಿನಗಳ ಹಿಂದಷ್ಟೇ ಧೋನಿ ತಮ್ಮ ಫೇಸ್​ಬುಕ್​ನಲ್ಲಿ ‘ಹೊಸ ಸೀಸನ್‌ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. ಈ ಆವೃತ್ತಿಯಲ್ಲಿ ನಾನು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್​ ಗಮನಿಸುವಾಗ ಅವರು ಈ ಬಾರಿ ವಿದಾಯ ಹೇಳುವುದು ಬಹುತೇಕ ಖಚಿವಾಗಿದ್ದು 18ನೇ ಆವೃತ್ತಿಯಲ್ಲಿ ಚೆನ್ನೈ ತಂಡದ ಕೋಚ್​ ಅಥವಾ ಮೆಂಟರ್​ ಆಗಿ ಕಾರ್ಯನಿರ್ವಹಿಸಲು ಧೋನಿ ಯೋಜನೆಯೊಂದನ್ನು ಹಾಕಿಕೊಂಡಂತಿದೆ. 

Exit mobile version