Site icon Vistara News

CSK vs LSG: ಇಂದಿನ ಲಕ್ನೋ-ಚೆನ್ನೈ ಪಂದ್ಯಕ್ಕೆ ಮಳೆ ಭೀತಿ

CSK vs LSG

ಚೆನ್ನೈ: ಶುಕ್ರವಾರವಷ್ಟೇ ಚೆನ್ನೈ ಸೂಪರ್​ ಕಿಂಗ್ಸ್(CSK vs LSG)​ ವಿರುದ್ಧ ತವರಿನಲ್ಲಿ ಅಮೋಘ ಗೆಲುವು ಸಾಧಿಸಿದ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ಮತ್ತೆ ಚೆನ್ನೈ ವಿರುದ್ಧ ಇಂದು ಪಂದ್ಯವನ್ನಾಡಲು ಸಜ್ಜಾಗಿದೆ. ಈ ಬಾರಿ ಚೆನ್ನೈಯಲ್ಲಿ ಪಂದ್ಯ ಸಾಗಲಿದೆ. ಈ ಪಂದ್ಯಕ್ಕೆ ಮಳೆಯ ಭೀತಿ ಕೂಡ ಎದುರಾಗಿದೆ.

ಈವರೆಗೆ ತವರಿನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡು ಬಂದಿರುವ ಚೆನ್ನೈಗೆ ಲಕ್ನೋ ಮೊದಲ ಸೋಲುಣಿಸಿತೇ ಎನ್ನುವುವುದು ಇಂದಿನ ಪಂದ್ಯದ ಕೌತುಕ. ಕೆ.ಎಲ್​ ರಾಹುಲ್​ ಅವರು ಚೆಪಾಕ್​ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇಲ್ಲಿ ಹಲವು ಶತಕ ಕೂಡ ಬಾರಿಸಿದ್ದಾರೆ. ಹೀಗಾಗಿ ಅವರಿಗೆ ಇದು ನೆಚ್ಚಿನ ಮೈದಾನವಾಗಿದೆ.

ಮಳೆ ಸಾಧ್ಯತೆ


ಕರ್ನಾಟಕದ ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು. ಚೆನ್ನೈಯ ಕರಾವಳಿ ಭಾಗದಲ್ಲಿಯೂ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿದಂಬರಂ ಸ್ಟೇಡಿಯಂ ಕೂಡ ಸಮುದ್ರ ತಟದಲ್ಲಿರುವ ಕಾರಣ ರಾತ್ರಿ ಮೇಳೆ ಮಳೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಇಂದಿನ ಪಂದ್ಯಕ್ಕೆ ಮಳೆ ಬಂದು ಪಂದ್ಯ ರದ್ದಾದರೆ ಉಭಯ ತಂಡಗಳ ಪ್ಲೇ ಆಫ್​ ಹಾದಿಗೆ ಹಿನ್ನಡೆಯಾಗಲಿದೆ. ಸದ್ಯ ಅಂಕಪಟ್ಟಿಯಲ್ಲಿ ಚೆನ್ನೈ ಮತ್ತು ಲಕ್ನೋ ಕ್ರಮವಾಗಿ 4 ಮತ್ತು 5ನೇ ಸ್ಥಾನಿಯಾಗಿದೆ.

ಈ ಪಂದ್ಯಕ್ಕೂ ಮಾಯಾಂಕ್‌ ಗೈರು


ಈ ಬಾರಿಯ ಐಪಿಎಲ್​ನಲ್ಲಿ ಶರವೇಗದ ಸೆತಗಳನ್ನು ಎಸೆದು ಭಾರೀ ಸಂಚಲನ ಮೂಡಿಸಿದ ಮಾಯಾಂಕ್‌ ಯಾದವ್‌ ಅವರು ಈ ಪಂದ್ಯಕ್ಕು ಗೈರಾಗಲಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ಅವರಿಗೆ ಈ ಪಂದ್ಯಕ್ಕೂ ವಿಶ್ರಾಂತಿ ನೀಡಲಾಗಿದೆ. ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

ಚೆನ್ನೈ ತಂಡದ ಪರ ಆರಂಭಿಕ ಹಂತದಲ್ಲಿ ಮಿಂಚಿದ್ದ ನ್ಯೂಜಿಲ್ಯಾಂಡ್​ನ ಆಟಗಾರರಾದ ರಚಿನ್​ ರವೀಂದ್ರ ಮತ್ತು ಡೇರಿಯಲ್ ಮಿಚೆಲ್​ ಈಗ ಮಂಕಾಗಿದ್ದಾರೆ. ಕಳೆದ 3 ಮೂರುಗಳನ್ನು ಗಮನಿಸುವಾಗ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಕಂಡುಬಂದಿಲ್ಲ. ಇಂಪ್ಯಾಕ್ಟ್​ ಆಟಗಾರನಾಗಿ ಆಡುತ್ತಿರುವ ಶಿವಂ ದುಬೆ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಮಾಜಿ ನಾಯಕ ಧೋನಿ ಕೂಡ ಕೆಳ ಕ್ರಮಾಂಕದಲ್ಲಿ ಆಡಲಿಳಿದು ದೊಡ್ಡ ಹೊಡೆತಗಳ ಮೂಲಕ ರನ್​ ಗಳಿಸುವಲ್ಲಿ ಯಶಸ್ಸು ಕಾಣುತ್ತಿದ್ದಾರೆ.​

ಸಂಭಾವ್ಯ ತಂಡ


ಲಕ್ನೋ
: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.

ಚೆನ್ನೈ: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್, ಮತೀಶ ಪತಿರಾಣ.

Exit mobile version