Site icon Vistara News

RCB vs CSK: ಇಂದಿನ ಆರ್​ಸಿಬಿ-ಸಿಎಸ್​ಕೆ ಹೈವೋಲ್ಟೇಜ್ ಪಂದ್ಯದ ಪ್ಲೇಯಿಂಗ್​ ಇಲೆವೆನ್​ ಹೇಗಿದೆ?

RCB vs CSK

ಚೆನ್ನೈ: ಐಪಿಎಲ್(IPL 2024)​ ಟೂರ್ನಿಯ ಬದ್ಧ ಎದುರಾಳಿಗಳಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs CSK) ಮತ್ತು ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್​ ಸಿಂಗ್ಸ್​ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ತಂಡದ ಮುಖಾಮುಖಿಯೊಂದಿಗೆ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ ಚಾಲನೆ ಸಿಗಲಿದೆ. ಇತ್ತಂಡಗಳ ಈ ಕಾದಾಟಕ್ಕೆ ಚೆನ್ನೈನ ಚೆಪಾಕ್‌ ಸ್ಟೇಡಿಯಂ ಅಣಿಯಾಗಿದೆ. ಈ ಪಂದ್ಯಕ್ಕೆ ಉಭಯ ತಂಡಗಳ ಆಡುವ ಬಳಗ, ಪಿಚ್​ ರಿಪೋರ್ಟ್ ಹಾಗೂ ದಾಖಲೆಗಳ ಸಂಕ್ಷೀಪ್ತ ವರದಿ ಇಲ್ಲಿದೆ.

ಪಿಚ್​ ರಿಪೋರ್ಟ್​


ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್​ ಸ್ಪಿನ್ ಸ್ನೇಹಿ ಜತೆಗೆ ಬ್ಯಾಟಿಂಗ್​ಗೂ ನೆರವಾಗಲಿದೆ. ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 200ರನ್​ಗಳ ಗಡಿ ದಾಟಿದೆ. ಇಲ್ಲಿ ಧೋನಿ(ms dhoni) ಅವರು ಅತ್ಯಧಿಕ ಮೊತ್ತ ಗಳಿಸಿದ ದಾಖಲೆಯೂ ಹೊಂದಿದ್ದಾರೆ. ರವೀಂದ್ರ ಜಡೇಜಾ ಅತ್ಯಧಿಕ ವಿಕೆಟ್​ ಕಿತ್ತಿದ್ದಾರೆ.

ಚೆನ್ನೈನ(Chennai) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ(MA Chidambaram Stadium) ಇದುವರೆಗೆ ಒಟ್ಟು 88 ಐಪಿಎಲ್​ ಪಂದ್ಯಗಳು ಏರ್ಪಡಿದೆ. ಇದರಲ್ಲಿ 47 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದರೆ, 37 ಸಲ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಜಯಶಾಲಿಯಾಗಿದೆ. 4 ಪಂದ್ಯಗಳು ಫಲಿತಾಂಶ ಕಾಣದೆ ಅಂತ್ಯಕಂಡಿದೆ. ಈ ಸ್ಟೇಡಿಯಂನ ಗರಿಷ್ಠ ಮೊತ್ತ 263. ಕನಿಷ್ಠ ಮೊತ್ತ 82. ಈ ಎರಡು ದಾಖಲೆಗಳು ಇರುವುದು ಆರ್​ಸಿಬಿ ತಂಡದ ಪರವೇ ಎನ್ನುವುದು ವಿಶೇಷ.

ಮುಖಾಮುಖಿ


ಆರ್​ಸಿಬಿ ಮತ್ತು ಚೆನ್ನೈ ತಂಡ ಇದುವರೆಗೆ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 10 ಪಂದ್ಯ ಗೆದ್ದರೆ, ಚೆನ್ನೈ 20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ ತಂಡ ಬಲಿಷ್ಠವಾಗಿ ಗೋಚರಿಸಿದೆ. ಜತೆಗೆ ಈ ಬಾರಿ ಚೆನ್ನೈ ತಂಡದಲ್ಲಿ ಅನುಭವಿಗಳ ಪಡೆಯೇ ಕಂಡುಬಂದಿದೆ.

ಇದನ್ನೂ ಓದಿ IPL 2024: ಐಪಿಎಲ್​ ಆರಂಭಕ್ಕೆ ಕ್ಷಣಗಣನೆ; ಹೊಸ ನಿಯಮಗಳೆನು?

ಸಂಭಾವ್ಯ ತಂಡಗಳು


ಆರ್‌ಸಿಬಿ: ಫಾಫ್​ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌, ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೊಮ್ರಾರ್‌, ಆಕಾಶ್‌ದೀಪ್‌, ಮೊಹಮ್ಮದ್‌ ಸಿರಾಜ್‌, ಕರ್ಣ ಶರ್ಮ, ರೀಸ್‌ ಟಾಪ್ಲೆ.

ಚೆನ್ನೈ: ಋತುರಾಜ್‌ ಗಾಯಕ್ವಾಡ್‌ (ನಾಯಕ), ರಚಿನ್‌ ರವೀಂದ್ರ, ಮೋಯಿನ್‌ ಅಲಿ, ಡೆರಿಲ್‌ ಮಿಚೆಲ್‌, ಶಿವಂ ದುಬೆ, ರವೀಂದ್ರ ಜಡೇಜ, ಮಹೇಂದ್ರ ಸಿಂಗ್‌ ಧೋನಿ, ಶಾರ್ದೂಲ್​ ಠಾಕೂರ್‌, ದೀಪಕ್‌ ಚಹರ್‌, ತುಷಾರ್‌ ದೇಶಪಾಂಡೆ, ಮಹೀಶ್‌ ತೀಕ್ಷಣ.

Exit mobile version