Site icon Vistara News

CWG- 2022 | ಮತ್ತೊಂದು ಪದಕ ಖಾತರಿಗೊಳಿಸಿದ ಭಾವಿನಾ ಪಟೇಲ್‌

CWG- 2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಪ್ಯಾರಾ ಟೇಬಲ್‌ ಟೆನಿಸ್ ಸ್ಪರ್ಧೆಯಲ್ಲಿ ಭಾರತಕ್ಕೊಂದು ಪದಕ ಖಾತರಿಯಾಗಿದೆ. ಟೋಕಿಯೊ ಒಲಿಂಪಿಕ್ಸ್‌ನ ಪದಕ ವಿಜೇತೆ ಭಾವಿನಾ ಪಟೇಲ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶ ಮಾಡಿದ್ದು, ಪದಕವೊಂದು ಖಾತರಿಯಾಗಿದೆ. ಇಂಗ್ಲೆಂಡ್‌ನ ಸೂ ಬೈಲಿ ಅವರನ್ನು ಸೋಲಿಸಿದ ಭಾವಿನಾ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಕ್ಲಾಸ್‌ 3-5 ವಿಭಾಗದಲ್ಲಿ ಸ್ಪರ್ಧಿಸಿದ್ದ ಸ್ಟಾರ್‌ ಆಟಗಾರ್ತಿ ಭಾವಿನಾ ಅವರು ಸೆಮಿಫೈನಲ್‌ ಹಣಾಹಣಿಯಲ್ಲಿ ಪ್ರಭಾವಿ ಪ್ರದರ್ಶನ ನೀಡುವ ಜತೆಗೆ 3-0 ಅಂತರದಿಂದ ಗೆಲುವು ಸಾಧಿಸಿದರು. ಮೂರು ಗೇಮ್‌ಗಳಲ್ಲಿ ಅವರು 11-6, 11-6, 11-6 ಅಂಕಗಳಿಂದ ಜಯ ಸಾಧಿಸಿದರು.

ಭಾವಿನಾ ಅವರು ಫಿಜಿ ದೇಶದ ಅಕಾನಿಸಿ ಲಟು ವಿರುದ್ಧ ಜಯ ಸಾಧಿಸುವ ಮೂಲಕ ಸೆಮಿ ಫೈನಲ್‌ ಪಂದ್ಯಕ್ಕೆ ಪ್ರವೇಶ ಪಡೆದಿದ್ದರು.

ಇದೇ ವೇಳೆ ರಾಜಾ ಅರವಿಂದನ್‌ ಮತ್ತು ಸೋನಾಬೆಲ್ ಪಟೇಲ್‌ ಸಿಂಗಲ್ಸ್‌ ಸ್ಪರ್ಧೆಯ ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಕಾಣುವ ಮೂಲಕ ನಿರಾಸೆ ಎದುರಿಸಿದರು.

ಇದನ್ನೂ ಓದಿ | CWG-22 | ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಸುಧೀರ್‌

Exit mobile version