Site icon Vistara News

CWG- 2022 | ಕೊನೇ ಕ್ಷಣದಲ್ಲಿ ಪದಕ ಕಳೆದುಕೊಂಡ ವೇಟ್‌ಲಿಫ್ಟರ್‌ ಅಜಯ್‌ ಸಿಂಗ್‌

CWG-2022

ಬರ್ಮಿಂಗ್ಹಮ್‌ : ಭಾರತದ ವೇಟ್‌ಲಿಫ್ಟರ್‌ಗಳು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಏತನ್ಮಧ್ಯೆ, ೮೧ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಜಯ್‌ ಸಿಂಗ್‌ ಪದಕದ ನಿರೀಕ್ಷೆ ಹುಟ್ಟಿಸಿದ ಹೊರತಾಗಿಯೂ ಕೊನೇ ಕ್ಷಣದಲ್ಲಿ ಒಂದು ಕೆ.ಜಿ ಕೊರತೆಯೊಂದಿಗೆ ಕಂಚಿನ ಪದಕ ಕಳೆದುಕೊಂಡು ನಿರಾಸೆ ಎದುರಿಸಿದ್ದಾರೆ. ಬಲಿಷ್ಠ ಸ್ಪರ್ಧಿಯಾಗಿದ್ದ ಅವರಿಂದ ಭಾರತ ನಿಯೋಗ ಕನಿಷ್ಠ ಪಕ್ಷ ಒಂದು ಪದಕ ನಿರೀಕ್ಷಿಸಲಾಗಿತ್ತು. ಆದರೆ, ಕ್ಲೀನ್‌ ಆಂಡ್‌ ಜರ್ಕ್‌ ವಿಭಾಗದ ಕೊನೇ ಪ್ರಯತ್ನದಲ್ಲಿ ೧೮೦ ಕೆ.ಜಿ ಭಾರತ ಎತ್ತಲು ಸಾಧ್ಯವಾದೇ ಅವರು ನಿರಾಸೆ ಅನುಭವಿಸಬೇಕಾಯಿತು.

೮೧ ಕೆ.ಜಿ ವಿಭಾಗದ ಸ್ಪರ್ಧೆ ಸೋಮವಾರ ಮಧ್ಯಾಹ್ನ ನಡೆಯಿತು. ಇಂಗ್ಲೆಂಡ್‌ನ ಕ್ರಿಸ್‌ ಮರ್ರೆ ೩೨೫ ಕೆ.ಜಿ ಭಾರ ಎತ್ತಿ ಕಾಮನ್ವೆಲ್ತ್‌ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಆಸ್ಟ್ರೇಲಿಯಾದ ಕೈಲ್‌ ಬ್ರೂಸ್‌ ೩೨೩ ಕೆ.ಜಿ ಭಾರ ಎತ್ತಿ ಬೆಳ್ಳಿ ಗೆದ್ದರು. ಕೆನಡಾದ ನಿಕೋಲಸ್‌ ವಕೋನ್‌ ೩೨೦ ಕೆ.ಜಿ ಭಾರ ಎತ್ತುವ ಕಂಚಿನ ಪದಕ ಗೆದ್ದರು. ಆದರೆ ೩೧೯ ಕೆ.ಜಿ ಎತ್ತಿದ ಅಜಯ್‌ ಸಿಂಗ್‌ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಸ್ಯ್ನಾಚ್‌ ವಿಭಾಗದಲ್ಲಿ ೧೩೭, ೧೪೦ ಹಾಗೂ ೧೪೩ ಕೆ.ಜಿ ಎತ್ತಿದ ಅಜಯ್‌ ಸಿಂಗ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಪದಕದ ಭರವಸೆ ಮೂಡಿಸಿದ್ದರು. ಆದರೆ, ಕ್ಲೀನ್‌ ಆಂಡ್‌ ಜರ್ಕ್‌ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ೧೭೨ ಕೆ.ಜಿ ಎತ್ತಿದರು. ಈ ಮೂಲಕ ಒಟ್ಟಾರೆ ೩೧೫ ಕೆ.ಜಿ ಭಾರ ಎತ್ತಿದರು. ಅಂತೆಯೇ ಎರಡನೇ ಪ್ರಯತ್ನದಲ್ಲಿ ೧೭೬ ಕೆ.ಜಿ ಎತ್ತುವ ಮೂಲಕ ಸುಧಾರಣೆ ಮಾಡಿಕೊಂಡರು. ಆದರೆ, ಕೊನೇ ಪ್ರಯತ್ನದಲ್ಲಿ ಅವರಿಗೆ ೧೮೦ ಕೆ.ಜಿ ಭಾರ ಎತ್ತಲು ಸಾಧ್ಯವಾಗಿಲ್ಲ. ಆದರೆ, ಅದಕ್ಕಿಂತ ಮೊದಲು ನಾಲ್ಕನೇ ಸ್ಥಾನದಲ್ಲಿದ್ದ ಕೆನಡಾದ ವಾಕೊನ್ ಏಕಾಏಕಿ ೧೮೦ ಭಾರ ಎತ್ತುವ ಮೂಲಕ ಸಿಂಗ್‌ ಅವರನ್ನು ಹಿಂದಿಕ್ಕಿದರು. ಅದೂ ಅಲ್ಲದೆ, ಮರ್ರೆ ಹಾಗೂ ಬ್ರೂಸ್‌ ಕೂಡ ಭಾರತದ ವೆಟ್‌ಲಿಫ್ಟರ್‌ಗಳನ್ನು ಹಿಂದಿಕ್ಕಿದ್ದರು. ಇವೆರಲ್ಲರೂ ಏಕಾಏಕಿ ಮುಂದಕ್ಕೆ ಸಾಗಿದ ಕಾರಣ ಭಾರತದ ಸ್ಪರ್ಧಿಗೆ ಹಿನ್ನಡೆಯಾಯಿತು.

ಇದನ್ನೂ ಓದಿ | CWG- 2022 | ಅಚಿಂತ ಶೆಯುಲಿಗೆ ಸ್ವರ್ಣ, ಭಾರತಕ್ಕೆ ಮೂರನೇ ಚಿನ್ನ, ಆರನೇ ಪದಕ

Exit mobile version