ಬರ್ಮಿಂಗ್‌ಹ್ಯಾಮ್: ಭಾರತದ ಮುಂಚೂಣಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧೂ ಕೊರೊನಾ ಆತಂಕ್ಕೆ ಒಳಗಾಗಿದ್ದಾರೆ. CWG- 2022 ಕ್ರೀಡಾ ಗ್ರಾಮಕ್ಕೆ ಪ್ರವೇಶ ಪಡೆದ ಬಳಿಕ ಅವರಿಗೆ ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಯಲ್ಲಿ ಸೋಂಕಿನ ಸ್ವಲ್ಪ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡ ಕಾರಣ ಅವರನ್ನು ತಾತ್ಕಾಲಿಕ ಐಸೋಲೇಷನ್‌ಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ. ವಿ. ಸಿಂಧೂ ಅವರು ಮತ್ತೊಂದು ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. ಹೀಗಾಗಿ ಅವರು ಸೋಂಕಿಗೆ ಒಳಗಾದರೆ ಭಾರತಕ್ಕೆ ಹಿನ್ನಡೆ ಉಂಟಾಗಲಿದೆ. ಅದಕ್ಕಿಂತಲೂ ಮಿಗಿಲಾಗಿ ಗುರುವಾರ ರಾತ್ರಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಭಾರತದ ಅಥ್ಲೀಟ್‌ಗಳ ಪಥ ಸಂಚಲನದ ವೇಳೆ ಸಿಂಧೂ, ತ್ರಿವರ್ಣ ಧ್ವಜವನ್ನು ಹಿಡಿದು ಸಾಗಲಿದ್ದಾರೆ ಎಂದು ಘೋಷಿಸಲಾಗಿದೆ. ಒಂದು ವೇಳೆ ಅವರು ಅಲಭ್ಯರಾದರೆ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅಥವಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಧ್ವಜ ಹಿಡಿದು ಸಾಗಲಿದ್ದಾರೆ.
ಪ್ರತ್ಯೇಕ ವಾಸ
ಪಿ. ವಿ ಸಿಂಧೂ ಅವರು ಮಂಗಳವಾರ ಬರ್ಮಿಂಗ್‌ಹ್ಯಾಮ್ ಕ್ರೀಡಾಗ್ರಾಮಕ್ಕೆ ಪ್ರವೇಶ ಮಾಡಿದ್ದರು. ಆ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಅನುಮಾನಗಳು ಹುಟ್ಟಿಕೊಂಡಿರುವ ಕಾರಣ ಅವರನ್ನು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ. ಹಾಲಿ ಆವೃತ್ತಿಯ ಟೂರ್ನಿಗೆ ೧೦ ಸದಸ್ಯರ ಬ್ಯಾಡ್ಮಿಂಟನ್ ತಂಡವನ್ನು ಕಳುಹಿಸಲಾಗಿತ್ತು. ಸಿಂಧೂ ಈ ತಂಡದ ನೇತೃತ್ವ ವಹಿಸಿದ್ದರು.
ನೆಗೆಟಿವ್ ವರದಿ
ವರದಿಯೊಂದರ ಪ್ರಕಾರ ಪಿ. ವಿ ಸಿಂಧೂ ಅವರ ಎರಡನೇ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಅವರೇ ಧ್ವಜಧಾರಿಯಾಗಲಿದ್ದಾರೆ ಎಂದು ಮಾಹಿತಿ ಪ್ರಕಟಿಸಲಾಗಿದೆ.
ಇದನ್ನೂ ಓದಿ | CWG -2022 | ಕಾಮನ್ವೆಲ್ತ್ ಗೇಮ್ಸ್ ಎಷ್ಟು ಗಂಟೆಗೆ ಶುರು? ಭಾರತದ ಧ್ವಜಧಾರಿಗಳು ಯಾರೆಲ್ಲ?