Site icon Vistara News

CWG-2022 | 200ಮೀ ಓಟದಲ್ಲಿ ಫೈನಲ್‌ ತಲುಪಲು ವಿಫಲವಾದ ಹಿಮಾ ದಾಸ್;‌ ಅರೆಕ್ಷಣದ ಹಿನ್ನಡೆ

ಬರ್ಮಿಂಗ್ಹಮ್:‌ ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಕೂಟದ (CWG-2022) 200ಮೀ ಓಟದ ಸ್ಪರ್ಧೆಯಲ್ಲಿ ಭಾರತದ ಯುವ ಆಟಗಾರ್ತಿ ಹಿಮಾ ದಾಸ್‌ 0.01 ಸೆಕೆಂಡುಗಳ ಅಂತರದಿಂದ ಫೈನಲ್‌ ತಲುಪವಲ್ಲಿ ವಿಫಲರಾಗಿದ್ದಾರೆ.

ಶುಕ್ರವಾರ (ಅಗಸ್ಟ್‌ 5) ನಡೆದ ಮಹಿಳೆಯರ 200ಮೀ ಓಟದ ‌ಸೆಮಿ ಫೈನಲ್‌ ಪಂದ್ಯದಲ್ಲಿ ಹಿಮಾ ದಾಸ್ 10ನೇ ಸ್ಥಾನ ಪಡೆದಿದ್ದಾರೆ. ಇದರಿಂದ ಅವರು ಫೈನಲ್‌ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಸೆಮಿ ಪೈನಲ್‌ನ ಒಟ್ಟು ಮೂರು ಹೀಟ್ಸ್‌ಗಳಿತ್ತು. ಎರಡನೇ ಹೀಟ್‌ನಲ್ಲಿ ಹಿಮಾ ದಾಸ್‌ ಆಗು ಆಸ್ಟ್ರೇಲಿಯಾದ ಎಲ್ಲಾ ಕೊನೊಲ್ಲಿ ನಡುವೆ ಒಂದು ರೋಚಕ ಪಂದ್ಯವಿತ್ತು. ಎರಡನೇ ಹೀಟ್‌ನಲ್ಲಿ ಭಾರತದ ಹಿಮಾ ದಾಸ್‌ 23.42 ಸೆಕೆಂಡುಗಳಲ್ಲಿ ಓಟ ಪೂರೈಸಿದರು. ಆದರೆ, ಆಸ್ಟ್ರೇಲಿಯಾದ ಎಲ್ಲಾ ಕೊನೊಲ್ಲಿ 23.41 ಸೆಕೆಂಡುಗಳಲ್ಲಿ ಓಟವನು ಪೂರೈಸಿ ಎರಡನೇ ಸ್ಥಾನ ಪಡೆದರು.

ಮೊದಲೆರಡು ಸ್ಥಾನದಲ್ಲಿರುವ ಆಟಗಾರರು ಮಾತ್ರ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಾರೆ. ಹೀಗಾಗಿ 0.01 ಸೆಕೆಂಡುಗಳ ಹಿನ್ನಡೆ ಪಡೆದ ಹಿಮಾ ದಾಸ್‌ ಪದಕ ಗೆಲ್ಲುವು ಅವಕಾಶವನ್ನು ಕಳೆದುಕೊಂಡಿದ್ದಾರೆ.

ಈಗಾಗಲೆ ಒಲಿಂಪಿಕ್‌ನಲ್ಲಿ ಐದು ಚಿನ್ನದ ಪದಕವನ್ನು ಗೆದ್ದಿರುವ ಜಮೈಕಾದ ಎಲೈನ್‌ ಥಾಂಪ್ಸನ್-ಹೆರಾ 22.63 ಸೆಕೆಂಡುಗಳಲ್ಲಿ ಓಟವನ್ನು ಪೂರೈಸಿ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ | CWG- 2022 | ಚೊಚ್ಚಲ ಕಾಮನ್ವೆಲ್ತ್‌ನಲ್ಲಿ ಕಂಚು ಗೆದ್ದ ಮೋಹಿತ್‌ ಗ್ರೇವಾಲ್‌

Exit mobile version