ಬರ್ಮಿಂಗಮ್: ಭಾರತದ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ಮಿಡಲ್‌ವೇಟ್ (೭೧ ಕೆ.ಜಿ) ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕ್ವಾರ್ಟರ್‌ಫೈನಲ್ಸ್‌ಗೇರಿದ್ದಾರೆ. ಶನಿವಾರ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅವರು ನ್ಯೂಜಿಲೆಂಡ್‌ನ ಅರಿಯಾಣೆ ನಿಕೋಲ್ಸನ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡರು.
ಅನುಭವಿ ಬಾಕ್ಸರ್ ಲವ್ಲಿನಾ ನ್ಯೂಜಿಲೆಂಡ್‌ನ ಆಟಗಾರ್ತಿ ವಿರುದ್ಧ ಸಂಪೂರ್ಣ ಪಾರಮ್ಯ ಸಾಧಿಸಿದರಲ್ಲದೆ, ೫-೦ ಅಂತರದಿಂದ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ಇಬ್ಬರೂ ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಆದರೆ, ಎರಡನೇ ಸುತ್ತಿನ ಕಾದಾಟದಲ್ಲಿ ಲವ್ಲಿನಾ ಸಂಪೂರ್ಣವಾಗಿ ಮೇಲುಗೈ ಸಾಧಿಸಿದರು.
ಮುಂದಿನ ಸುತ್ತಿನಲ್ಲಿ ಭಾರತದ ಬಾಕ್ಸರ್ ವೇಲ್ಸ್ ದೇಶ ರೋಸಿ ಎಕ್ಲೇಸ್ ವಿರುದ್ಧ ಕಾದಾಡಬೇಕಾಗಿದೆ. ಅವರು ೨೦೧೮ರ ಅವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತೆಯಾಗಿದ್ದಾರೆ.
ಇದನ್ನೂ ಓದಿ | CWG- 2022 | ಮೀರಾ ಭಾರತ್ ಮಹಾನ್, ಬಂಗಾರ ಗೆದ್ದ ಚಾನು, ಭಾರತಕ್ಕೆ ಮೊದಲ ಸ್ವರ್ಣ