ಬರ್ಮಿಂಗ್ಹಮ್: ಹಾಲಿ ನಡೆಯುತ್ತಿರುವ ಕಾಮನ್ವೆಲ್ತ್‌ನ ಕೂಟದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳೆಯರ ಸೆಮಿ ಫೈನಲ್ ಹಾಕಿ ಪಂದ್ಯವು ರೋಚಕವಾಗಿದ್ದು ಭಾರತದ ಸೋಲಿನೊಂದಿಗೆ ಕೊನೆಗೊಂಡಿದೆ.
ಶುಕ್ರವಾರ (ಅಗಸ್ಟ್ 5) ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ರೋಚಕ ಜಟಾಪಟಿ ನಡೆದಿತ್ತು. ಮೊದಲು ಕಾಲು ಅವಧಿಯಲ್ಲಿ ಆಸ್ಟ್ರೇಲಿಯಾ ಗೋಲ್ ಹೊಡದು ಮುನ್ನಡೆ ಸಾಧಿಸಿತು. ನಂತರ ಭಾರತವು ಉತ್ತಮ ಪ್ರದರ್ಶನವನ್ನು ನೀಡಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಗೋಲ್ ಹೊಡೆಯದಂತೆ ನೋಡಿಕೊಂಡಿತು. ಸ್ಕೋರ್ ಸಮಬಲವಾಗಿದ್ದ ಕಾರಣದಿಂದ ಪಂದ್ಯವು ಪೆನಾಲ್ಟಿ ಶೂಟೌಟ್ ಹಂತ ತಲುಪಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾ 3-0 ಮುನ್ನಡೆ ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ರೋಚಕ ಗೆಲು ಸಾಧಿಸಿತು. ಇದರಿಂದ ಭಾರತ ತಂಡಕ್ಕೆ ಫೈನಲ್ ತಲುಪುವ ಅವಕಾಶ ಕೈಚೆಲ್ಲಿದೆ.
ಮುಂಬರಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವ ತಂಡವು ಇಂಗ್ಲೆಡ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ | CWG-2022 | 200ಮೀ ಓಟದಲ್ಲಿ ಫೈನಲ್ ತಲುಪಲು ವಿಫಲವಾದ ಹಿಮಾ ದಾಸ್; ಅರೆಕ್ಷಣದ ಹಿನ್ನಡೆ