ಬರ್ಮಿಂಗ್ಹಮ್: ಭಾರತ ಮಹಿಳೆಯರ ಹಾಕಿ ತಂಡ ಕಾಮನ್ವೆಲ್ತ್ ಗೇಮ್ಸ್- ೨೦೨೨ (CWG- 2022) ಕ್ರೀಡಾಕೂಟದ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ. ಬುಧವಾರ ನಡೆದ ಗುಂಪು ಹಂತದ ತನ್ನ ಕೊನೇ ಪಂದ್ಯದಲ್ಲಿ ಕೆನಡಾ ವಿರುದ್ದ ೩-೨ ಗೋಲ್‌ಗಳಿಂದ ಜಯ ಸಾಧಿಸಿದ ಭಾರತ ತಂಡ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಸಲಿಮಾ ಟೆಟೆ (೩ನೇ ನಿಮಿಷ), ನವನೀತ್ ಕೌರ್ (೨೨ನೇ ನಿಮಿಷ), ಲಾಲ್‌ರೆಮ್‌ಸಿಯಾಮಿ (೫೧ನೇ ನಿಮಿಷ) ತಲಾ ಒಂದು ಗೋಲ್ ಬಾರಿಸಿದರೆ, ಬ್ರಿಯೆನ್ನೆ ಸ್ಟೇರ್ಸ್ (೨೩ನೇ ನಿಮಿಷ), ಹನ್ನಾ ಹೌಗನ್ (೩೯ನೇ ನಿಮಿಷ) ಎದುರಾಳಿ ತಂಡದ ಪರ ಗೋಲ್ ಬಾರಿಸಿದರು. ಗುರುವಾರ ನಡೆಯಲಿರುವ ಇಂಗ್ಲೆಂಡ್ ಹಾಗೂ ವೇಲ್ಸ್ ನಡುವಿನ ಪಂದ್ಯದ ವಿಜೇತರು ಭಾರತಕ್ಕೆ ಎದುರಾಗಲಿದ್ದಾರೆ.
ಆಕ್ರಮಣಕಾರಿ ಆಟ ಶುರುಮಾಡಿದ್ದ ಭಾರತ ತಂಡ ಮೂರನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲ್ ಅಗಿ ಪರಿವರ್ತಿಸಿತು. ೨೨ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲ್ ಬಾರಿಸಿದರೆ, ೫೧ನೇ ನಿಮಿಷದಲ್ಲಿ ಲಾಲ್‌ರೆಮ್‌ಸಿಯಾಮಿ ಗೋಲ್ ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಇದನ್ನೂ ಓದಿ | CWG – 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತದ ಲಾನ್ ಬೌಲ್ ತಂಡ